ಅಹ್ಮದ್-ರಿಜ್ವಾನ್ ದಾಖಲೆಯ ಜೊತೆಯಾಟ 
ಕ್ರಿಕೆಟ್

ಏಷ್ಯಾ ಕಪ್ 2023: ಶ್ರೀಲಂಕಾ ವಿರುದ್ಧ ಅಹ್ಮದ್-ರಿಜ್ವಾನ್ ಅಮೋಘ ಜೊತೆಯಾಟ, 15 ವರ್ಷಗಳ ಹಳೆಯ ದಾಖಲೆ ಪತನ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ನಿರ್ಣಾಯಕ ಹಂತ ತಲುಪಿದ್ದು, ಈಗಾಗಲೇ ಭಾರತ ತಂಡ ಫೈನಲ್ ಗೇರಿದ್ದು, ಫೈನಲ್ ಗೇರುವ ಪೈಪೋಟಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ದಾಖಲೆಯ ಜೊತೆಯಾಟವಾಡಿದ್ದಾರೆ.

ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ನಿರ್ಣಾಯಕ ಹಂತ ತಲುಪಿದ್ದು, ಈಗಾಗಲೇ ಭಾರತ ತಂಡ ಫೈನಲ್ ಗೇರಿದ್ದು, ಫೈನಲ್ ಗೇರುವ ಪೈಪೋಟಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ದಾಖಲೆಯ ಜೊತೆಯಾಟವಾಡಿದ್ದಾರೆ.

ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಳೆಯಿಂದಾಗಿ 42 ಓವರ್ ಗಳಿಗೆ ಸೀಮಿತವಾದ ಸೂಪರ್ 4 ಹಂತದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ದಾಖಲೆಯ ಜೊತೆಯಾಟವಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 130 ರನ್ ಗಳಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಗೂಡಿದ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ಅಮೋಘ ಬ್ಯಾಟಿಂಗ್ ಮೂಲಕ ದಾಖಲೆಯ ಜೊತೆಯಾಟವಾಡಿದರು. ಈ ಜೋಡಿ ಶತಕದ ಜೊತೆಯಾಟವಾಡಿ ಪಾಕಿಸ್ತಾನ ತಂಡ ಸವಾಲಿನ ಗುರಿ ತಲುಪುವಂತೆ ಮಾಡಿದರು. 

ಮಹಮದ್ ರಿಜ್ವಾನ್ 73 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 86 ರನ್ ಗಳನ್ನು ಕಲೆಹಾಕಿದರೆ, ಉತ್ತಮ ಸಾಥ್ ನೀಡಿದ ಇಫ್ತಿಕಾರ್ ಅಹ್ಮದ್ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 47ರನ್ ಗಳಿಸಿದರು. ಈ ಜೋಡಿ 6ನೇ ವಿಕೆಟ್ ಗೆ 108 ರನ್ ಕಲೆಹಾಕಿದ್ದು, ಇದು ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಪಾಕಿಸ್ತಾನ ಪರ 6 ಮತ್ತು ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ದಾಖಲಾದ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ. ಇದಕ್ಕೂ ಮೊದಲು 2008ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಪಾಕಿಸ್ತಾನದ ಫವಾದ್ ಆಲಾಮ್ ಮತ್ತು ಸೊಹೆಲ್ ತನ್ವೀರ್ ಜೋಡಿ 100 ರನ್ ಗಳ ಜೊತೆಯಾಟವಾಡಿತ್ತು. ಇದು ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಪರ ದಾಖಲಾದ ಗರಿಷ್ಟ ರನ್ ಗಳ ಜೊತೆಯಾಟವಾಗಿತ್ತು.

ಈ ದಾಖಲೆಯನ್ನು ಇದೀಗ ಇಫ್ತಿಕಾರ್ ಅಹ್ಮದ್ ಮತ್ತು ಮಹಮದ್ ರಿಜ್ವಾನ್ ಜೋಡಿ ಮುರಿದಿದೆ.

Highest stands for 6th wkt or below for Pakistan in ODI Asia Cup:
108 - I Ahmed & M Rizwan vs SL, Colombo, 2023*
100 - Fawad Alam & S Tanvir vs HK, Karachi, 2008
81 - Inzamam-ul-Haq & W Akram vs IND, Sharjah, 1995
71 - Asif Ali & Imam-ul-Haq vs BAN, Abu Dhabi, 2018

 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT