ಐಸಿಸಿ (ಸಂಗ್ರಹ ಚಿತ್ರ) 
ಕ್ರಿಕೆಟ್

ಟಿ10 ಲೀಗ್ ನಲ್ಲಿ ಭ್ರಷ್ಟ ಚಟುವಟಿಕೆ: ಮೂವರು ಭಾರತೀಯರು ಸೇರಿ 8 ಮಂದಿ ವಿರುದ್ಧ ಐಸಿಸಿ ಆರೋಪಪಟ್ಟಿ

2021 ರ ಟಿ10 ಲೀಗ್ ನಲ್ಲಿ ಭ್ರಷ್ಟ ಚಟುವಟಿಕೆ ನಡೆಸಲಾಗಿದೆ ಎಂದು ಐಸಿಸಿ, ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಒಂದಷ್ಟು ಮಂದಿ ಭಾರತ ತಂಡಗಳ ಮಾಲಿಕರು ಸೇರಿ 8 ಮಂದಿ ವಿರುದ್ಧ ದೋಷಾರೋಪಣೆ ಹೊರಿಸಿದೆ. 

ನವದೆಹಲಿ: 2021 ರ ಟಿ10 ಲೀಗ್ ನಲ್ಲಿ ಭ್ರಷ್ಟ ಚಟುವಟಿಕೆ ನಡೆಸಲಾಗಿದೆ ಎಂದು ಐಸಿಸಿ, ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಒಂದಷ್ಟು ಮಂದಿ ಭಾರತ ತಂಡಗಳ ಮಾಲಿಕರು ಸೇರಿ 8 ಮಂದಿ ವಿರುದ್ಧ ದೋಷಾರೋಪಣೆ ಹೊರಿಸಿದೆ. 

ಭಾರತತೀಯ ತಂಡಗಳ ಮಾಲಿಕರಾದ ಪರಾಗ್ ಸಂಘ್ವಿ, ಕೃಷನ್ ಕುಮಾರ್ ಚೌಧರಿ ಅವರುಗಳ ವಿರುದ್ಧವೂ ಎಮಿರೇಟ್ಸ್ ಟಿ10 ಲೀಗ್ ನ 2021 ನೇ ಆವೃತ್ತಿಯಲ್ಲಿ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪ ಹೊರಿಸಲಾಗಿದೆ. 

ಇಬ್ಬರು ಭಾರತೀಯರು ಪುಣೆ ಡೆವಿಲ್ಸ್ ನ ಸಹ ಮಾಲಿಕರಾಗಿದ್ದು, ಓರ್ವ ಕ್ರೀಡಾಪಟು ಬಾಂಗ್ಲಾದೇಶದ  ಮಾಜಿ ಬ್ಯಾಟ್ಸ್ಮನ್ ನಾಸಿಸ್ ಹುಸೇನ್ ವಿರುದ್ಧವೂ ಭ್ರಷ್ಟಾಚಾರ ಚಟುವಟಿಕೆಗಳ ಆರೋಪ ಕೇಳಿಬಂದಿದೆ. ಪ್ರಕರಣದ ಮೂರನೇ ಆರೋಪಿಯನ್ನಾಗಿ ಭಾರತದ ಬ್ಯಾಟಿಂಗ್ ಕೋಚ್ ಆಗಿದ್ದ ಸನ್ನಿ ಧಿಲ್ಲೋನ್ ಅವರನ್ನು ಉಲ್ಲೇಖಿಸಲಾಗಿದೆ.

"2021 ರ ಅಬುಧಾಬಿ T10 ಕ್ರಿಕೆಟ್ ಲೀಗ್‌ಗೆ ಸಂಬಂಧಿಸಿದ ಆರೋಪಗಳು ಮತ್ತು ಆ ಪಂದ್ಯಾವಳಿಯಲ್ಲಿನ ಪಂದ್ಯಗಳನ್ನು ಭ್ರಷ್ಟಗೊಳಿಸುವ ಪ್ರಯತ್ನಗಳು ನಡೆದಿದ್ದವು - ಈ ಪ್ರಯತ್ನಗಳನ್ನು ವಿಫಲಗೊಳಿಸಲಾಗಿತ್ತು.

ಟೂರ್ನಮೆಂಟ್ ನಲ್ಲಿ ಇಸಿಬಿಯ ನೀತಿ ಸಂಹಿತೆಯ ಪಾಲನೆಗಾಗಿ ಐಸಿಸಿಯನ್ನು ಭ್ರಷ್ಟಾಚಾರ ವಿರೋಧಿ ಅಧಿಕಾರಿ (ಡಿಎಸಿಒ)ಯನ್ನಾಗಿ ನೇಮಕ ಮಾಡಲಾಗಿತ್ತು ಎಂದು ಐಸಿಸಿ ಹೇಳಿದೆ. 

ಮೂವರು ಭಾರತೀಯರು ಸೇರಿದಂತೆ ಆರು ಮಂದಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಮತ್ತು ಆರೋಪಗಳಿಗೆ ಪ್ರತಿಕ್ರಿಯಿಸಲು ಮಂಗಳವಾರದಿಂದ 14 ದಿನಗಳ ಕಾಲಾವಕಾಶ ನೀಡಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup 2026: Allen ದಾಖಲೆ ಶತಕ; ಅಜೇಯ ಆಫ್ರಿಕಾ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ನ್ಯೂಜಿಲ್ಯಾಂಡ್!

Video: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಅಮೆರಿಕ ದಾಳಿ; ಕನಿಷ್ಠ 87 ನಾವಿಕರು ಸಾವು

'ನರಕ.. ಇರಾನ್ ಅಲ್ಲದವರಾದ್ರೆ ಮುಚ್ಕೊಂ*ರಿ': Khamenei ಸಾವಿಗೆ ಅಳುವ ಭಾರತೀಯ ಮುಸ್ಲಿಂ ಮಹಿಳೆಯರ ಲೇವಡಿ ಮಾಡಿದ ಇರಾನ್ ಮಹಿಳೆಯರು!

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್; ಆದ್ರೆ ರೈತರಿಗೆ ಗುಡ್ ನ್ಯೂಸ್!

ಬಿಹಾರದಲ್ಲಿ ರಾಜಕೀಯ ಬಿರುಗಾಳಿ: ಮುಖ್ಯಮಂತ್ರಿ ಸ್ಥಾನಕ್ಕೆ ನಿತಿಶ್ ಕುಮಾರ್ ರಾಜೀನಾಮೆ?

SCROLL FOR NEXT