ಭಾರತ ಕ್ವಾರ್ಟರ್ ಫೈನಲ್ ಗೆ 
ಕ್ರಿಕೆಟ್

ಏಷ್ಯನ್ ಗೇಮ್ಸ್ ಕ್ರಿಕೆಟ್ 2023: ಮಳೆಯಿಂದಾಗಿ ಭಾರತ-ಮಲೇಷ್ಯಾ ಪಂದ್ಯ ರದ್ದು, ಕ್ವಾರ್ಟರ್ ಫೈನಲ್ ಗೆ ಪ್ರವೇಶ

ಏಷ್ಯನ್ ಗೇಮ್ಸ್ ಕ್ರಿಕೆಟ್ 2023 ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಮತ್ತು ಮಲೇಷ್ಯಾ ಮಹಿಳಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ರನ್ ರೇಟ್ ಆಧಾರದ ಮೇಲೆ ಭಾರತ ತಂಡ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ನವದೆಹಲಿ: ಏಷ್ಯನ್ ಗೇಮ್ಸ್ ಕ್ರಿಕೆಟ್ 2023 ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಮತ್ತು ಮಲೇಷ್ಯಾ ಮಹಿಳಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ರನ್ ರೇಟ್ ಆಧಾರದ ಮೇಲೆ ಭಾರತ ತಂಡ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಹೌದು.. ಏಷ್ಯಾ ಕ್ರೀಡಾಕೂಟದ ಮಹಿಳೆಯರ ಕ್ರಿಕೆಟ್‌ ಟೂರ್ನಿಯ ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿದೆ. ಆದಾಗ್ಯೂ ಭಾರತ ತಂಡ ಸೆಮಿಫೈನಲ್‌ ತಲುಪುವಲ್ಲಿ ಯಶಸ್ವಿಯಾಗಿದೆ. ಚೀನಾದ ಹಾಂಗ್‌ಝೌ ನ ಪಿಂಗ್‌ಫೆಂಗ್‌ ಕ್ಯಾಂಪಸ್‌ ಕ್ರಿಕೆಟ್‌ ಮೈದಾನದಲ್ಲಿ ಇಂದು (ಗುರುವಾರ) ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಟೀಂ ಇಂಡಿಯಾಗೆ ಸ್ಮೃತಿ ಮಂದಾನ (27) ಹಾಗೂ ಶೆಫಾಲಿ ವರ್ಮಾ ಜೋಡಿ ಮೊದಲ ವಿಕೆಟ್‌ಗೆ 57 ರನ್ ಕೆಲಹಾಕಿ ಉತ್ತಮ ಆರಂಭ ನೀಡಿತು. ಭಾರತ 5.4 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು 60 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. ಇದರಿಂದಾಗಿ ಪಂದ್ಯವನ್ನು 15 ಓವರ್‌ಗಳಿಗೆ ಕಡಿತಗೊಳಿಸಲಾಯಿತು.

ಅಬ್ಬರದ ಬ್ಯಾಟಿಂಗ್ ನಡೆಸಿದ ಶೆಫಾಲಿ 39 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳಿದ್ದ 67 ರ‌ನ್‌ ಸಿಡಿಸಿ ಔಟಾದರು. ಅವರಿಗೆ ಉತ್ತಮ ಸಾಥ್ ನೀಡಿದ ಜೆಮಿಯಾ ರಾಡ್ರಿಗಸ್‌ 29 ಎಸೆತಗಳಲ್ಲಿ 47 ರನ್ ಬಾರಿಸಿ ಅಜೇಯವಾಗಿ ಉಳಿದರು. ಅವರ ಇನಿಂಗ್ಸ್‌ನಲ್ಲಿ 6 ಬೌಂಡರಿಗಳಿದ್ದವು. ಕೇವಲ 7 ಎಸೆತಗಳನ್ನು ಎದುರಿಸಿದ ರಿಚಾ ಘೋಷ್‌, 3 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 21 ರನ್‌ ಚಚ್ಚಿದರು. ಅಂತಿಮವಾಗಿ ಸ್ಮೃತಿ ಮಂದಾನ ಪಡೆ ನಿಗದಿತ ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು.

ಬೃಹತ್‌ ಗುರಿ ಎದುರು ಮಲೇಷ್ಯಾ ಇನಿಂಗ್ಸ್ ಆರಂಭಿಸುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸಿತು. ಮಲೇಷ್ಯಾ ತಂಡ ಕೇವಲ ಎರಡು ಎಸೆತಗಳನ್ನು ಎದುರಿಸಿದ್ದಾಗ ಮಳೆ ಆರಂಭವಾಯಿತು. ಭಾರಿ ಮಳೆಯ ಕಾರಣ ಪಂದ್ಯವು ಫಲಿತಾಂಶವಿಲ್ಲದೆ ರದ್ದಾಯಿತಾದರೂ ಭಾರತ ತಂಡ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಸೆಮಿಫೈನಲ್‌ ಹಣಾಹಣಿಯು ಇದೇ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್‌ 24ರಂದು ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭೋಜಶಾಲಾ ಸರಸ್ವತಿ ದೇವಸ್ಥಾನಕ್ಕೆ ಸೇರಿದ್ದು; ಮಸೀದಿಗೆ ಪರ್ಯಾಯ ಭೂಮಿ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಕೊಪ್ಪಳ: ತುಂಗಭದ್ರಾ ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್, ಒಂದೇ ಕುಟುಂಬದ ಆರು ಮಂದಿ ದುರ್ಮರಣ!

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ವಿರುದ್ಧ FIR ದಾಖಲು; ಇಲ್ಲಿದೆ ಕಾರಣ

ಕರ್ನಾಟಕದಲ್ಲಿ ಜೂನ್ 20 ರಿಂದ SIR ಪ್ರಾರಂಭ: ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟ! ಹೇಗೆ ಮಾಡಲಾಗುತ್ತದೆ?

ಮಧ್ಯ ಪ್ರಾಚ್ಯ ಸಂಘರ್ಷ: ಪಾಕಿಸ್ತಾನದ ಸಂಧಾನ ಪ್ರಕ್ರಿಯೆ ವಿಫಲವಾಗಿಲ್ಲ, ಆದರೆ..: ಇರಾನ್ ವಿದೇಶಾಂಗ ಸಚಿವ Araghchi

SCROLL FOR NEXT