ರಾಜಸ್ಥಾನ ರಾಯಲ್ಸ್ ಪಿಂಕ್ ಪ್ರಾಮಿಸ್
ರಾಜಸ್ಥಾನ ರಾಯಲ್ಸ್ ಪಿಂಕ್ ಪ್ರಾಮಿಸ್ 
ಕ್ರಿಕೆಟ್

IPL 2024: 13 ಸಿಕ್ಸರ್, 78 ಮನೆಗಳಿಗೆ ಸೋಲಾರ್ ವ್ಯವಸ್ಥೆ, ರಾಜಸ್ಥಾನ ರಾಯಲ್ಸ್ Pink Promise!

Srinivasamurthy VN

ಜೈಪುರ: ಹಾಲಿ ಐಪಿಎಲ್ 2024ರ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡ ತನ್ನ ಪ್ರದರ್ಶನದೊಂದಿಗೇ ಪಿಂಕ್ ಪ್ರಾಮಿಸ್ ಹೆಸರಿನ ಸಾಮಾಜಿಕ ಕಾರ್ಯವೊಂದನ್ನು ಕೈಗೆತ್ತಿಗೊಂಡಿದೆ.

ಪಿಂಕ್ ಪ್ರಾಮಿಸಿ(Pink Promise) ಮಿಷನ್ ಅಡಿಯಲ್ಲಿ ಮಹಿಳೆಯರ ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊತ್ತು ಆರ್​ಸಿಬಿ(RCB) ವಿರುದ್ಧ ಪಿಂಕ್​ ಜೆರ್ಸಿಯಲ್ಲಿ(rajasthan royals pink jersey) ಕಣಕ್ಕಿಳಿದ್ದ ರಾಜಸ್ಥಾನ ರಾಯಲ್ಸ್‌(rajasthan royals) ಫ್ರಾಂಚೈಸಿ ತನ್ನ ವಿನೂತನ ಕಾರ್ಯದ ಮೂಲಕ ಜನ-ಮನ ಗೆದ್ದಿದೆ. ತನ್ನ ಪಿಂಕ್ ಪ್ರಾಮಿಸ್ ಯೋಜನೆ ಮೂಲಕ ರಾಜಸ್ಥಾನ ತಂಡ ಹತ್ತಾರು ಕುಟುಂಬಗಳಿಗೆ ಸೋಲಾರ್ ಪವರ್ ಅಳವಡಿಸುವ ಮೂಲಕ ಇತರರಿಗೆ ಸೂರ್ತಿಯಾಗಿದೆ.

ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸಿಡಿಸುವ ಪ್ರತೀ ಸಿಕ್ಸರ್ ಗೆ 6 ಮನೆಗಳಿಗೆ ಸೋಲಾರ್ ಪವರ್ ವ್ಯವಸ್ಥೆ ಅಳವಡಿಸುವ ಯೋಜನೆ ಇದಾಗಿದೆ. ಅದರಂತೆ ರಾಜಸ್ಥಾನ ತಂಡ ಇದೀಗ ಒಟ್ಟು 78 ಕುಟುಂಬಗಳ ಪಾಲಿಗೆ ಬೆಳಕಾಗಿದ್ದು, ಪ್ರತೀ ಸಿಕ್ಸರ್​ಗೆ ರಾಜಸ್ಥಾನದಲ್ಲಿರುವ 6 ಮನೆಗಳಿಗೆ ಉಚಿತ ಸೌರವಿದ್ಯುತ್‌ ಸಂಪರ್ಕವನ್ನು ನೀಡುವುದಾಗಿ ಫ್ರಾಂಚೈಸಿ ಪಂದ್ಯಕ್ಕೂ ಮುನ್ನ ಘೋಷಿಸಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್​ ಸಿಡಿದಿತ್ತು. ಈ ಲೆಕ್ಕಾಚಾರದಲ್ಲಿ ಒಟ್ಟು 78 ಮನೆಗಳಿಗೆ ಸೌರವಿದ್ಯುತ್‌ ಸಂಪರ್ಕವನ್ನು ಒದಗಿಸಲಿದೆ.

ರಾಜಸ್ಥಾನದ ಮಹಿಳೆಯರನ್ನು ಸಶಕ್ತಗೊಳಿಸಲು ಪಂದ್ಯದ ದಿನದ ಸಂಪೂರ್ಣ ಆದಾಯವನ್ನು ಫ್ರಾಂಚೈಸಿ ಮೀಸಲಾಗಿಟ್ಟಿತ್ತು. ಈ ಪಂದ್ಯದಲ್ಲಿ ಮಾರಾಟವಾಗುವ ಪ್ರತಿ ಟಿಕೆಟ್‌ನಿಂದ 100 ರೂ.ಗಳನ್ನು ಮಹಿಳೆಯರ ಅಭಿವೃದ್ಧಿಗೆ ನೀಡಲಾಯಿತು ಎಂದು ಫ್ರಾಂಚೈಸಿ ಹೇಳಿದೆ.

SCROLL FOR NEXT