ರಿಷಭ್ ಪಂತ್ 
ಕ್ರಿಕೆಟ್

IPL 2024: ಆರು ವಿಕೆಟ್ ಗಳಿಂದ ಗುಜರಾತ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ ಆವೃತ್ತಿಯ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಗಳಿಂದ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿತು.

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ ಆವೃತ್ತಿಯ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಗಳಿಂದ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 17. 3 ಓವರ್ ಗಳಲ್ಲಿ 89 ರನ್ ಗಳಿಗೆ ಆಲೌಟ್ ಆಯಿತು. ಇದು ಈ ಬಾರಿಯ ಐಪಿಎಲ್ ನಲ್ಲಿ ದಾಖಲಾದ ಕನಿಷ್ಠ ರನ್ ಗಳಿಕೆಯಾಗಿದೆ. ಗುಜರಾತ್ ಪರ ರಶೀದ್ ಖಾನ್ 31, ಸಾಯಿ ಸುದರ್ಶನ್ 12 ರನ್ ಗಳಿಸಿದ್ದು ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಎರಡಂಕಿ ದಾಟಲಿಲ್ಲ. ಡೆಲ್ಲಿ ಪರ ಮುಕೇಶ್ 14ಕ್ಕೆ 3 ಮತ್ತು ಇಶಾಂತ್ 8ಕ್ಕೆ 2 ವಿಕೆಟ್ ಪಡೆದರು.

ಗುಜರಾತ್ ಟೈಟನ್ಸ್ ನೀಡಿದ 89 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 7, ಜಾಕ್ ಫ್ರಾಸರ್ ಮ್ಯಾಕ್ ಗುರ್ಕ್ 20, ಅಭಿಷೇಕ್ ಪೊರೆಲ್ 15, ಸಾಯಿ ಹೊಪ್ 19, ನಾಯಕ ರಿಷಭ್ ಪಂತ್ ಔಟಾಗದೇ 16, ಸುಮಿತ್ ಕುಮಾರ್ ಔಟಾಗದೇ 9 ರನ್ ಗಳಿಸಿದರು. ಇದರಿಂದಾಗಿ 4 ವಿಕೆಟ್ ನಷ್ಟಕ್ಕೆ 92 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ರಿಷಭ್ ಪಂತ್ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಮಗ್ರತೆ, ಸಮರ್ಪಣೆ ಉದ್ದೇಶದೊಂದಿಗೆ ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ಬದ್ಧ: ಡಿಕೆ ಶಿವಕುಮಾರ್

ದೆಹಲಿಯ ಮೆಹ್ರೌಲಿಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ!

ಸಿದ್ದರಾಮಯ್ಯಗೆ ವಿಶ್ರಾಂತಿ ನೀಡಲ್ಲ, ಅವರ ಸೇವೆ ಇನ್ನೂ ಅಗತ್ಯವಿದೆ: CLP ಸಭೆಯಲ್ಲಿ ವೇಣುಗೋಪಾಲ್ ಭಾವುಕ

ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ: ಡಿಕೆಶಿಗೆ ಸಿದ್ದು ಪತ್ರ!

ಲೋಕಭವನಕ್ಕೆ ತೆರಳಿದ ಡಿ.ಕೆ ಶಿವಕುಮಾರ್: ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ; ಜೂನ್ 3ಕ್ಕೆ ಸಿಎಂ ಆಗಿ ಪ್ರಮಾಣವಚನ!

SCROLL FOR NEXT