ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿರುವ ಆರ್‌ಸಿಬಿ
ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿರುವ ಆರ್‌ಸಿಬಿ 
ಕ್ರಿಕೆಟ್

IPL 2024: KKR ವಿರುದ್ಧ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ RCB; ಕಾರಣ ಏನು?

Ramyashree GN

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಆವೃತ್ತಿಯಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಆರ್‌ಸಿಬಿ 2011 ರಿಂದಲೂ ನಿರಂತರವಾಗಿ ಹಸಿರು ಜೆರ್ಸಿ ತೊಟ್ಟು ಆಡುತ್ತಿದೆ.

ಜಾಗತಿಕ ತಾಪಮಾನ ಏರಿಕೆ ಪರಿಣಾಮವನ್ನು ಕಡಿಮೆ ಮಾಡಲು ಮರ ನೆಡುವಿಕೆಯನ್ನು ಉತ್ತೇಜಿಸಲು ಆರ್‌ಸಿಬಿ ಈ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಭಾಗವಾಗಿ, ಆರ್‌ಸಿಬಿ ನಾಯಕ ಟಾಸ್ ಸಮಯದಲ್ಲಿ ಎದುರಾಳಿ ನಾಯಕನಿಗೆ ಗಿಡವನ್ನು ಉಡುಗೊರೆಯಾಗಿ ನೀಡುತ್ತಾರೆ. ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧದ ಮೊದಲ ಪಂದ್ಯದ ವೇಳೆ ಆರ್‌ಸಿಬಿ ತನ್ನ ಹಸಿರು ಜೆರ್ಸಿಯನ್ನು ಅನಾವರಣಗೊಳಿಸಿತು. ಆರ್‌ಸಿಬಿ ಸಾಮಾನ್ಯವಾಗಿ ಮಧ್ಯಾಹ್ನದ ವೇಳೆ ನಡೆಯುವ ಪಂದ್ಯದಲ್ಲಿ ಹಸಿರು ಜೆರ್ಸಿ ತೊಡುತ್ತದೆ.

ಕೆಕೆಆರ್ ಎದುರಿಸಲಿರುವ ಆರ್‌ಸಿಬಿ

ಏಪ್ರಿಲ್ 21ರ ಭಾನುವಾರ ಮಧ್ಯಾಹ್ನ ನಡೆಯಲಿರವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ತಂಡವನ್ನು ಎದುರಿಸಲಿದೆ. ಆಡಿರುವ 6 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ಕೆಕೆಆರ್ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ತಂಡ ಎಂದೇ ಕರೆಸಿಕೊಂಡಿದ್ದು, ಆರ್‌ಸಿಬಿ ಬಲಿಷ್ಠ ತಂಡದ ವಿರುದ್ಧ ಸೆಣಸಲಿದೆ.

ಆರ್‌ಸಿಬಿ ಈವರೆಗೂ ಏಳು ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಮತ್ತೊಂದೆಡೆ, ಆರ್‌ಸಿಬಿ ಎಲ್ಲ ವಿಭಾಗಗಳಲ್ಲಿ ಪ್ರದರ್ಶನ ನೀಡಲು ಹೆಣಗಾಡುತ್ತಿದ್ದು, ದಿನೇಶ್ ಕಾರ್ತಿಕ್ ಮತ್ತು ವಿರಾಟ್ ಕೊಹ್ಲಿ ಸದ್ಯ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಈ ಪಂದ್ಯಾವಳಿಯ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿಗೆ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಲು ವಿಫಲರಾಗಿದ್ದಾರೆ. ಫಾಫ್ ಏಳು ಪಂದ್ಯಗಳಲ್ಲಿ 33.14 ರ ಸರಾಸರಿಯಲ್ಲಿ 232 ರನ್ ಗಳಿಸಿದ್ದಾರೆ ಮತ್ತು ಮ್ಯಾಕ್ಸ್‌ವೆಲ್ ಆರು ಪಂದ್ಯಗಳಲ್ಲಿ 5.33ರ ಸರಾಸರಿಯಲ್ಲಿ ಕೇವಲ 32 ರನ್ ಗಳಿಸಿದ್ದಾರೆ. ಮ್ಯಾಕ್ಸ್‌ವೆಲ್ ತಮ್ಮ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಉಲ್ಲೇಖಿಸಿ ಐಪಿಎಲ್‌ನಿಂದ ಅನಿರ್ದಿಷ್ಟಾವಧಿಗೆ ವಿರಾಮ ತೆಗೆದುಕೊಂಡಿದ್ದಾರೆ.

ಆರ್‌ಸಿಬಿ ಬೌಲರ್‌ಗಳು ಕೂಡ ಕಳಪೆ ಫಾರ್ಮ್‌ನಲ್ಲಿದ್ದು, ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ವೇಗಿ ಮೊಹಮ್ಮದ್ ಸಿರಾಜ್ ಆರು ಐಪಿಎಲ್ ಪಂದ್ಯಗಳಲ್ಲಿ 10.41 ಎಕಾನಮಿಯೊಂದಿಗೆ ಕೇವಲ 4 ವಿಕೆಟ್ ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

SCROLL FOR NEXT