ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ಕ್ರಿಕೆಟ್

IPL 2024 Record: ಮೊದಲ 5 ಓವರ್ ಗಳಲ್ಲಿ 100 ರನ್ ಚಚ್ಚಿ ವಿಶ್ವ ದಾಖಲೆ ಬರೆದ ಹೈದರಾಬಾದ್, ಪತರುಗುಟ್ಟಿದ ಡೆಲ್ಲಿ!

Vishwanath S

ನವದೆಹಲಿ: 2024ರ ಐಪಿಎಲ್ ಟೂರ್ನಿನಲ್ಲಿ ದಾಖಲೆಗಳ ಪಟ್ಟಿಯೇ ಬೆಳೆಯುತ್ತಿದೆ. ಈ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ತಂಡವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊರಹೊಮ್ಮಿದೆ. RCB ವಿರುದ್ಧ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 287 ರನ್ ಪೇರಿಸಿತ್ತು.

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿರುವ ಹೈದರಾಬಾದ್ ತಂಡ ಮೊದಲ ಆರು ಓವರ್ ಗಳಲ್ಲಿ 125 ರನ್ ಸಿಡಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಹೈದರಾಬಾದ್ ಪರ ಟ್ರಾವಿಸ್ ಹೆಡ್ 27 ಎಸೆತಗಳಲ್ಲಿ ಅಜೇಯ 85 ರನ್ ಪೇರಿದ್ದರೆ, ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 46 ರನ್ ಬಾರಿಸಿ ಔಟಾಗಿದ್ದಾರೆ. ಹೆಡ್ 6 ಸಿಕ್ಸರ್ ಮತ್ತು 11 ಬೌಂಡರಿ ಬಾರಿಸಿದ್ದರೆ ಅಭಿಷೇಕ್ 6 ಸಿಕ್ಸ್ ಮತ್ತು 2 ಬೌಂಡರಿ ಸಿಡಿಸಿದ್ದಾರೆ.

ಡೆಲ್ಲಿ ಪರ ಬೌಲಿಂಗ್ ಮಾಡಿರುವ ಖಲೀಲ್ ಅಹ್ಮದ್ 1 ಓವರ್ ನಲ್ಲಿ 19 ರನ್ ನೀಡಿದ್ದಾರೆ. ಇನ್ನು ಲಲಿತ್ ಯಾದವ್ 2 ಓವರ್ ನಲ್ಲಿ 41 ರನ್, ಅನ್ರಿಚ್ ನೋರ್ಟ್ಜೆ 1 ಓವರ್ ನಲ್ಲಿ 22 ರನ್ ಹಾಗೂ ಮುಕೇಶ್ ಕುಮಾರ್ 1 ಓವರ್ ನಲ್ಲಿ 22 ರನ್ ಹೊಡೆಸಿಕೊಂಡಿದ್ದಾರೆ.

ಸನ್‌ರೈಸರ್ಸ್ ಕೇವಲ 5 ಓವರ್‌ಗಳಲ್ಲಿ 100 ರನ್ ಗಳಿಸುತ್ತಿದ್ದಂತೆ ಅವರು ಅತ್ಯಂತ ವೇಗವಾಗಿ ಮೂರು ಅಂಕಿಗಳ ಗಡಿ ತಲುಪಿ ವಿಶ್ವದಾಖಲೆಯನ್ನು ನಿರ್ಮಿಸಿದೆ.

ಐಪಿಎಲ್‌ನಲ್ಲಿ ಅತ್ಯಧಿಕ ಪವರ್‌ಪ್ಲೇ ಸ್ಕೋರ್‌ಗಳು

125/0 - SRH vs DC, 2024*

105/0 - KKR vs RCB, 2017

100/2 - CSK vs PBKS, 2014

90/0 - CSK vs MI, 2015

88/1 - KKR vs DC, 2024*

SCROLL FOR NEXT