ಕೊಹ್ಲಿ-ಶುಭ್ ಮನ್ ಗಿಲ್
ಕೊಹ್ಲಿ-ಶುಭ್ ಮನ್ ಗಿಲ್ 
ಕ್ರಿಕೆಟ್

IPL 2024: ವಿರಾಟ್ ಕೊಹ್ಲಿಯ ಅಪರೂಪದ ದಾಖಲೆ ಮುರಿದ ಶುಭ್ ಮನ್ ಗಿಲ್!

Srinivasamurthy VN

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್​ ಗಿಲ್ ಮತ್ತೊಂದು ಐಪಿಎಲ್ ಮೈಲಿಗಲ್ಲು ಸಾಧಿಸುವ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನ 40ನೇ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸುವ ಮೂಲಕ ವಿರಾಟ್ ಕೊಹ್ಲಿ (Virat Kohli) ದಾಖಲೆಯನ್ನು ಮುರಿದಿದ್ದಾರೆ.

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾದ ನಂತರ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಗುಜರಾತ್ ಟೈಟನ್ಸ್ ನಾಯಕನಾದ ಶುಭ್ಮನ್ ಗಿಲ್ ಈಗ ಐಪಿಎಲ್​ನಲ್ಲಿ ನೂರು ಪಂದ್ಯಗಳನ್ನು ಪೂರೈಸಿದ್ದಾರೆ.

ಐಪಿಎಲ್​ನ 40ನೇ ಪಂದ್ಯದಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ಗಿಲ್ ಈ ದಾಖಲೆ ಬರೆದಿದ್ದು, ಆ ಮೂಲಕ ಐಪಿಎಲ್​​ನಲ್ಲಿ 100 ಪಂದ್ಯಗಳನ್ನು ಆಡಿದ 2ನೇ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಶುಭ್ ಮನ್ ಗಿಲ್ (24 ವರ್ಷ 229 ದಿನಗಳು) ವಿಶ್ವದ ಶ್ರೀಮಂತ ಟಿ20 ಲೀಗ್​​ನಲ್ಲಿ 100 ಪಂದ್ಯಗಳನ್ನು ಪೂರ್ಣಗೊಳಿಸಿದ ಐಪಿಎಲ್​ನ 2ನೇ ಕಿರಿಯ ಮತ್ತು ವೇಗದ ಭಾರತೀಯ ಎನಿಸಿದ್ದಾರೆ.

24ನೇ ವಯಸ್ಸಿನಲ್ಲಿ ಗಿಲ್, ಕೊಹ್ಲಿಯನ್ನು ಹಿಂದಿಕ್ಕಿ 100 ಐಪಿಎಲ್​​ ಪಂದ್ಯಗಳನ್ನು ಆಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ ನಂತರದ ಸ್ಥಾನಗಳಲ್ಲಿ ಸ್ಯಾಮ್ಸನ್ (25) ಮತ್ತು ಪಿಯೂಷ್ ಚಾವ್ಲಾ (26) ಇದ್ದಾರೆ.

ಐಪಿಎಲ್​​ನಲ್ಲಿ 100 ಪಂದ್ಯಗಳನ್ನು ಆಡಿದ ಅತ್ಯಂತ ಕಿರಿಯ ಆಟಗಾರ

1) ರಶೀದ್ ಖಾನ್ (24 ವರ್ಷ, 221 ದಿನ)

2) ಶುಭ್ಮನ್ ಗಿಲ್ (24 ವರ್ಷ, 229 ದಿನ)

3) ವಿರಾಟ್ ಕೊಹ್ಲಿ (25 ವರ್ಷ, 182 ದಿನ)

4) ಸಂಜು ಸ್ಯಾಮ್ಸನ್ (25 ವರ್ಷ, 335 ದಿನ)

5) ಪಿಯೂಷ್ ಚಾವ್ಲಾ (26 ವರ್ಷ, 108 ದಿನ)

SCROLL FOR NEXT