ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಐಪಿಎಲ್ 2024: ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 10 ರನ್ ಗೆಲುವು!

ದೆಹಲಿಯಲ್ಲಿ ನಡೆದ ಮುಂಬೈ-ದೆಹಲಿ ತಂಡದ ನಡುವಿನ ಐಪಿಎಲ್ 2024 ರ 43 ನೇ ಪಂದ್ಯದಲ್ಲಿ ದೆಹಲಿ ತಂಡ ಮುಂಬೈ ತಂಡವನ್ನು 10 ರನ್ ಗಳಿಂದ ಮಣಿಸಿದೆ.

ಮುಂಬೈ — online desk
Srinivas Rao BV
Updated On : 28 Apr 2024, 1:18 am

ನವದೆಹಲಿ: ದೆಹಲಿಯಲ್ಲಿ ನಡೆದ ಮುಂಬೈ-ದೆಹಲಿ ತಂಡದ ನಡುವಿನ ಐಪಿಎಲ್ 2024 ರ 43 ನೇ ಪಂದ್ಯದಲ್ಲಿ ದೆಹಲಿ ತಂಡ ಮುಂಬೈ ತಂಡವನ್ನು 10 ರನ್ ಗಳಿಂದ ಮಣಿಸಿದೆ.

ಟಾಸ್ ಗೆದ್ದ ಮುಂಬೈ ತಂಡ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಭರ್ಜರಿ ಬ್ಯಾಟಿಂಗ್ ಮಾಡಿದ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತು.

ಜೇಕ್ ಫ್ರೇಸರ್-ಮೆಕ್‌ಗುರ್ಕ್ (84 ರನ್) ಮತ್ತು ಅಭಿಷೇಕ್ ಪೋರಲ್ (36 ರನ್) ಗಳಿಸಿ ತಂಡಕ್ಕೆ 100ಕ್ಕೂ ಅಧಿಕ ರನ್ ಗಳ ಜೊತೆಯಾಟ ನೀಡಿದರು. ಶಾಯ್ ಹೋಪ್ 41 ರನ್, ರಿಷಬ್ ಪಂತ್ 29 ರನ್, ಟ್ರಿಸ್ಟಿನ್ ಸ್ಟಬ್ 48 ರನ್ ಮತ್ತು ಅಕ್ಷರ್ ಪಟೇಲ್ 11 ರನ್ ಗಳಿಸಿದರು.

Advertisement

Advertisement

Also Read

ಮುಂಬೈ: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ (8 ರನ್)​ ಮತ್ತು ಇಶಾನ್​ ಕಿಶನ್​ (20 ರನ್) ಗಳಿಸಿ ಬೇಗ ವಿಕೆಟ್ ಒಪ್ಪಿಸಿದರು ಸೂರ್ಯಕುಮಾರ್ (26 ರನ್) ನೆಹಾಲ್​ ವಡೇರಾ (4ರನ್) ಮೊಹಮ್ಮದ್ ನಬಿ (7 ರನ್) ಗಳಿಸಿದರೆ, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್​ ವರ್ಮಾ 32 ಎಸೆತಗಳಲ್ಲಿ 63 ರನ್​ ಗಳಿಸಿದರು. ನಾಯಕ ಹಾರ್ದಿಕ್​ ಪಾಂಡ್ಯ 24 ಎಸೆತದಲ್ಲಿ 46 ರನ್ ಗಳಿಸಿ ತಂಡಕ್ಕೆ ನೆರವಾದರಾದರೂ ನಿಗದಿತ 20 ಓವರ್​ಗೆ 9 ವಿಕೆಟ್ ನಷ್ಟಕ್ಕೆ 247 ರನ್​ ಗಳಿಸುವ ಮೂಲಕ 10 ರನ್​ ಗಳಿಂದ ಸೋಲನ್ನಪ್ಪಿದೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದ್ದು, ಇದಕ್ಕಾಗಿ ಇನ್ನೂ ಒಂದು ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement