ವಿನೋದ್ ಕಾಂಬ್ಳಿ 
ಕ್ರಿಕೆಟ್

'ವಿಪರೀತ ಕುಡಿತ, 14 ಬಾರಿ Rehab': Vinod Kambli ಆರೋಗ್ಯ ಸಮಸ್ಯೆ ಬಹಿರಂಗ ಮಾಡಿದ ಆಪ್ತ ಸ್ನೇಹಿತ

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್ ವೇದಿಕೆ ಮೇಲಿದ್ದ ತಮ್ಮ ಗೆಳೆಯ ವಿನೋದ್ ಕಾಂಬ್ಳಿ ಬಳಿ ಹೋಗಿ ಆರೋಗ್ಯ ವಿಚಾರಿಸಿದ್ದರು.

ಮುಂಬೈ: ಲೆಜೆಂಡರಿ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಸಚಿನ್ ತೆಂಡೂಲ್ಕರ್ ಆಪ್ತ ವಿನೋದ್ ಕಾಂಬ್ಳಿ ಆರೋಗ್ಯದ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿದ್ದು, ಅವರ ಹೀನಾಯ ಪರಿಸ್ಥಿತಿ ಕುರಿತು ಅವರ ಆಪ್ತ ಗೆಳೆಯ ಮಾಹಿತಿ ನೀಡಿದ್ದಾರೆ.

ಹೌದು.. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್ ವೇದಿಕೆ ಮೇಲಿದ್ದ ತಮ್ಮ ಗೆಳೆಯ ವಿನೋದ್ ಕಾಂಬ್ಳಿ ಬಳಿ ಹೋಗಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಸಚಿನ್ ರನ್ನು ಗುರುತಿಸಿದ ವಿನೋದ್ ಕಾಂಬ್ಳಿ ಸಚಿನ್ ರ ಕೈಯನ್ನು ಗಟ್ಟಿಯಾಗಿ ಹಿಡಿದು ಭಾವುಕರಾದರು.

ಅಪರೂಪಕ್ಕೆ ಈ ಇಬ್ಬರು ಸ್ನೇಹಿತರು (ತೆಂಡೂಲ್ಕರ್, ಕಾಂಬ್ಳಿ) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಗುರುತಿಸಲು ಕಷ್ಟವಾಗುವಷ್ಟರ ಮಟ್ಟಿಗೆ ಕಾಂಬ್ಳಿ ಅನಾರೋಗ್ಯ ಪೀಡಿತರಾಗಿದ್ದರು.

ಇಷ್ಟಕ್ಕೂ ವಿನೋದ್ ಕಾಂಬ್ಳಿಗೇನಾಗಿದೆ? ಅವರ ಆರೋಗ್ಯ ಯಾಕಿಷ್ಟು ಹದಗಟ್ಟಿದೆ?

ವಿನೋದ್ ಕಾಂಬ್ಳಿ ತಮ್ಮ ಜೀವನದಲ್ಲಿ ವಿಪರೀತ ಕುಡಿತದ ಚಟವನ್ನು ಬೆಳೆಸಿಕೊಂಡಿದ್ದದ್ದು, ಅವರ ಕ್ರೀಡಾ ಜಗತ್ತಿಗೆ ಭಾರೀ ಹಿನ್ನಡೆಗೆ ಕಾರಣವಾಯಿತು. ಕಾಂಬ್ಲಿ ದಿನದ ಬಹುತೇಕ ಸಮಯವನ್ನು ಬಾರ್ ನಲ್ಲಿ ಕಳೆಯುತ್ತಿದ್ದರು. ಕುಡಿತದ ಚಟ, ಸಣ್ಣಸಣ್ಣ ಅಪರಾಧಗಳನ್ನೂ ಅವರಿಂದ ಮಾಡಿಸಿತು. ತಮ್ಮ ಜೀವನದಲ್ಲಿ ಸುಧಾರಣೆ ತರುವ ಕಡೆ ಗಮನ ಕೊಡದ ವಿನೋದ್ ಕಾಂಬ್ಳಿ, ತನ್ನ ಕಷ್ಟದ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಕೈಹಿಡಿಯಲಿಲ್ಲ ಎಂದು ಬಹಿರಂಗವಾಗಿಯೇ ದೂರಿದರು. ಇವರು ತಮ್ಮ ಪತ್ನಿಯ ಜೊತೆಗೆ, ಬಾಲಿವುಡ್ ಗಾಯಕರೊಬ್ಬರು ಹೊಡೆದರು ಎನ್ನುವ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಲೇರುವಂತಾಗಿತ್ತು. ಪತ್ನಿ ಮೇಲೂ ಹಲ್ಲೆ ಮಾಡಿದ್ದ ಕಾಂಬ್ಳಿ ಪೊಲೀಸ್ ಠಾಣೆಗೂ ಹೋಗಿದ್ದರು.

ಆರೋಗ್ಯ ಸಮಸ್ಯೆ ಬಹಿರಂಗ ಮಾಡಿದ ಆಪ್ತ ಸ್ನೇಹಿತ

ಇದೆಲ್ಲದರ ನಡುವೆ ವಿನೋದ್ ಕಾಂಬ್ಳಿ ಆರೋಗ್ಯ ತೀರಾ ಹದಗೆಟ್ಟಿತ್ತು. ಇದು ಎಷ್ಟರಮಟ್ಟಿಗೆ ಎಂದರೆ ಒಂದು ಕಾಲದ ಸ್ಟಾರ್ ಕ್ರಿಕೆಟರ್ ಎದ್ದು ನಿಲ್ಲಲೂ ಕೂಡ ಆಗದ ಸ್ಥಿತಿಯಲ್ಲಿದ್ದ ವಿಡಿಯೋವೊಂದು ವ್ಯಾಪಕ ವೈರಲ್ ಆಗಿತ್ತು. ಇದೀಗ ಕಾಂಬ್ಳಿ ಅವರ ಆಪ್ತ ಸ್ನೇಹಿತರೊಬ್ಬರು ಅವರ ಆರೋಗ್ಯ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ. ಕಾಂಬ್ಳಿಗೆ ತೀವ್ರವಾದ, ಬಹು ಆರೋಗ್ಯ ಸಮಸ್ಯೆಗಳಿದ್ದು, ಅವರ ಕುಡಿತದ ಚಟ ಬಿಡಿಸಲು ಅವರನ್ನು ಬರೊಬ್ಬರಿ 14 ಬಾರಿ ಪುನರ್ವಸತಿ ಕೇಂದ್ರ (rehab)ಕ್ಕೆ ದಾಖಲಿಸಲಾಗಿತ್ತು ಎಂದು ಕಾಂಬ್ಳಿ ಆಪ್ತ ಹಾಗೂ ಮಾಜಿ ಪ್ರಥಮ ದರ್ಜೆ ಕ್ರಿಕೆಟ್ ಅಂಪೈರ್ ಮಾರ್ಕಸ್ ಕೌಟೊ ಹೇಳಿದ್ದಾರೆ.

ಕಾಂಬ್ಳಿ ಪುನರ್ವಸತಿ ಕೇಂದ್ರಕ್ಕೆ ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ.. ಕಾಂಬ್ಳಿ ಈಗಾಗಲೇ 14 ಬಾರಿ ಪುನರ್ವಸತಿಗೆ ಹೋಗಿದ್ದಾರೆ. ಮೂರು ಬಾರಿ ನಾವು ಅವನನ್ನು ವಸೈನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದೇವೆ ಎಂದು ಕೌಟೋ ಹೇಳಿದ್ದಾರೆ. ಕೋಟೊ ಅವರು ಆಗಸ್ಟ್‌ನಲ್ಲಿ ಬಾಂದ್ರಾದಲ್ಲಿನ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಾಂಬ್ಳಿ ನಡೆದಾಡಲೂ ಕೂಡ ಕಷ್ಟ ಪಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆಗ ಕಾಂಬ್ಳಿಗೆ ಭಾರತೀಯ ಕ್ರಿಕೆಟ್ ತಂಡದ ದಂತಕಥೆ ಕಪಿಲ್ ದೇವ್ ನೆರವು ನೀಡಿದ್ದರು. ಆಗ ಕಪಿಲ್ ಹೇಳಿದ್ದೇನು ಎಂದರೆ 'ಕಾಂಬ್ಳಿ ಚೇತರಿಕೆಯತ್ತ ಮೊದಲ ಹೆಜ್ಜೆ ಇಡಲು ಸಿದ್ಧರಿರಬೇಕು' ಎಂದು ಸ್ಪಷ್ಟಪಡಿಸಿದ್ದರು.

"ಕಾಂಬ್ಳಿ ಅವರು ಪುನಶ್ಚೇತನ ಕೇಂದ್ರಕ್ಕೆ ಹೋಗಲು ಬಯಸಿದರೆ, ನಾವು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ಕಪಿಲ್ ದೇವ್ ನನಗೆ ಸ್ಪಷ್ಟವಾಗಿ ಹೇಳಿದ್ದರು. ಅಲ್ಲದೆ ಅವನು ಮೊದಲು ಪುನರ್ವಸತಿ ಕೇಂದ್ರಕ್ಕೆ ಹೋಗಬೇಕು. ಅವನು ಹಾಗೆ ಮಾಡಿದರೆ ಮಾತ್ರ, ಚಿಕಿತ್ಸೆಯು ಎಷ್ಟು ಸಮಯದವರೆಗೆ ಇರುತ್ತದೆ ಎಂಬುದನ್ನೂ ಲೆಕ್ಕಿಸದೆ ನಾವು ಬಿಲ್ ಪಾವತಿಸಲು ಸಿದ್ಧರಿದ್ದೇವೆ ಎಂದು ಭಾರತದ ಮಾಜಿ ವೇಗದ ಬೌಲರ್ ಬಲ್ವಿಂದರ್ ಸಿಂಗ್ ಸಂಧು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT