ರಾಬಿನ್ ಉತ್ತಪ್ಪ  
ಕ್ರಿಕೆಟ್

ಮಾನಸಿಕ ಅನಾರೋಗ್ಯವನ್ನು ಹೇಗೆ ಕಳಂಕವಾಗಿ ನೋಡಲಾಗುತ್ತದೆ ಎಂಬುದನ್ನು ನಾನೇ ಸ್ವತಃ ಅನುಭವಿಸಿದ್ದೇನೆ: ರಾಬಿನ್ ಉತ್ತಪ್ಪ

ಮನುಷ್ಯರಾಗಿ, ನಮಗೆ ಸಂಪೂರ್ಣವಾಗಿ ಅರ್ಥವಾಗದ ವಿಷಯಗಳಿಗೆ ನಾವು ಭಯಪಡುತ್ತೇವೆ. ಮಾನಸಿಕ ಆರೋಗ್ಯದ ಹೋರಾಟಗಳು ಕತ್ತಲೆಯಾದ, ಪ್ರತ್ಯೇಕವಾದ ಸ್ಥಳದಂತೆ ಭಾಸವಾಗಬಹುದು.

ಬೆಂಗಳೂರು: ಕ್ರಿಕೆಟ್‌ನಿಂದ ನಿವೃತ್ತಿಯಾದ ಎರಡು ವರ್ಷಗಳ ನಂತರ, ಕರ್ನಾಟಕ ಮೂಲದ ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಇತ್ತೀಚೆಗೆ ದುಬೈಗೆ ವಲಸೆ ಹೋಗಿ ನೆಲೆಸಿರುವ ರಾಬಿನ್ ಉತ್ತಪ್ಪ ಅವರು ಭವಿಷ್ಯ ನಿಧಿ ವಂಚನೆ ಆರೋಪದ ಮೇಲೆ ಇತ್ತೀಚೆಗೆ ಸುದ್ದಿಯಾಗಿದ್ದರು.

ತಾವು ಆ ಕಂಪೆನಿಯ ಕಾರ್ಯನಿರ್ವಾಹಕ ಅಲ್ಲ ಮತ್ತು ಅದರ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ರಾಬಿನ್ ಉತ್ತಪ್ಪ ಸ್ಪಷ್ಟಪಡಿಸಿದ್ದಾರೆ. ಈ ವಿವಾದ ಭುಗಿಲೆದ್ದ ದಿನಗಳ ಮೊದಲು, ವೈಟ್‌ಫೀಲ್ಡ್‌ನ ಶೆರಟನ್ ಗ್ರ್ಯಾಂಡ್‌ನಲ್ಲಿ ನಡೆದ SOG ಗ್ರ್ಯಾಂಡ್‌ಮಾಸ್ಟರ್ಸ್ ಸರಣಿಯ ದಕ್ಷಿಣ ವಲಯ1 ರ ಅಂತಿಮ ಸುತ್ತಿನ ವೇಳೆ ರಾಬಿನ್ ಉತ್ತಪ್ಪ ಸಿಟಿ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ಮಾತನಾಡಿದ್ದಾರೆ.

2022 ರಲ್ಲಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬಳಿಕ 2023 ರಲ್ಲಿ ದುಬೈಗೆ ಸ್ಥಳಾಂತರಗೊಂಡೆ. ಅಲ್ಲಿಂದ ಕ್ರಿಕೆಟ್ ನಿರೂಪಕರಾಗಿ, ಸರ್ಟಿಫೈಡ್ ಲೈಫ್ ಕೋಚ್, ಯೂಟ್ಯೂಬರ್ ಮತ್ತು ಮಾನಸಿಕ ಆರೋಗ್ಯ ಸಲಹೆಗಾರನಾಗಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದೇನೆ. “ನಾನು ಮಾಡುವ ಪ್ರತಿಯೊಂದೂ ಕೆಲಸವನ್ನು ಆಳವಾದ ಪ್ರೀತಿ ಮತ್ತು ಉತ್ಸಾಹದಿಂದ ಮಾಡುತ್ತೇನೆ. ಅದು ಕ್ರಿಕೆಟ್ ಬಗ್ಗೆ ಮಾತನಾಡುತ್ತಿರಲಿ, ಆಟ ಆಡುತ್ತಿರಲಿ ಅಥವಾ ಜೀವನ ತರಬೇತುದಾರರಾಗಿ ತರಬೇತಿ ನೀಡುತ್ತಿರಲಿ, ನನ್ನ ಜೀವನದ ಉದ್ದೇಶವನ್ನು ನಾನು ಪ್ರಾಮಾಣಿಕವಾಗಿ ಆರಾಧಿಸುತ್ತೇನೆ ಮತ್ತು ಪರಿಗಣಿಸುತ್ತೇನೆ ಎನ್ನುತ್ತಾರೆ.

ಮಾನಸಿಕ ಆರೋಗ್ಯ ಸಲಹೆಗಾರನಾಗಿ, ಸಮಾಜದಲ್ಲಿ ಜನರಲ್ಲಿರುವ ಮಾನಸಿಕ ಆರೋಗ್ಯದ ಸುತ್ತಲಿನ ಕಳಂಕವನ್ನು ಮುರಿಯುವ ಮತ್ತು ನಿಖರವಾದ ಮಾಹಿತಿಯೊಂದಿಗೆ ಜನರನ್ನು ಮಾನಸಿಕವಾಗಿ ಸಬಲೀಕರಣಗೊಳಿಸುವ ಗುರಿಯಿಂದ ನಾನು ನಡೆಸುತ್ತಿದ್ದೇನೆ. ಈ ಮಿಷನ್ ನ್ನು ಉತ್ಸಾಹದಿಂದ ಮಾಡುತ್ತೇನೆ, ಪ್ರತಿ ದಿನವೂ ನನಗೆ ಸ್ಫೂರ್ತಿ ನೀಡುತ್ತದೆ. ಇಬ್ಬರು ಚಿಕ್ಕ ಮಕ್ಕಳ ತಂದೆಯಾಗಿ, ಕುಟುಂಬವು ದೊಡ್ಡ ಪಾತ್ರವನ್ನು ವಹಿಸುತ್ತದೆ, ನಿಸ್ಸಂದೇಹವಾಗಿ, ನನ್ನ ಕುಟುಂಬವು ನನ್ನ ಪ್ರೇರಣೆಯ ಅತ್ಯುತ್ತಮ ಮೂಲವಾಗಿದೆ ಹಾಗೂ ನನ್ನ ನಿರಂತರ ಬೆಂಬಲ ವ್ಯವಸ್ಥೆಯಾಗಿದೆ ಎಂದು ಹೇಳುತ್ತಾರೆ.

ಇಂದು, ಮಾನಸಿಕ ಆರೋಗ್ಯದ ಬಗ್ಗೆ ಜನರು ಸ್ವಲ್ಪ ಮುಕ್ತವಾಗಿ ಮಾತನಾಡುತ್ತಾರೆ, ಆದರೆ ಪುರುಷರು, ವಿಶೇಷವಾಗಿ ಕ್ರೀಡಾಪಟುಗಳು, ತಮ್ಮ ಮಾನಸಿಕ ಯೋಗಕ್ಷೇಮದ ಬಗ್ಗೆ ಮಾತನಾಡಲು ಇನ್ನೂ ಹೆಣಗಾಡುತ್ತಿದ್ದಾರೆ, ನಾನು ನನ್ನ ಕ್ರೀಡಾ ವೃತ್ತಿಜೀವನದ ಉತ್ತುಂಗದಲ್ಲಿ ಖಿನ್ನತೆಯೊಂದಿಗಿನ ಹೋರಾಡುತ್ತಿದ್ದೆ.ನನ್ನ ಚೇತರಿಕೆಯ ಸಮಯದಲ್ಲಿ, ನಮ್ಮ ಸಮಾಜದಲ್ಲಿ ಇನ್ನೂ ಎಷ್ಟು ಆಳವಾಗಿ ಕಳಂಕಿತವಾಗಿದೆ ಎಂದು ನೋಡುತ್ತಿದ್ದೇನೆ, ಇದು ತೀವ್ರವಾಗಿ ಬದಲಾಗಬೇಕಾಗಿದೆ.

ಮನುಷ್ಯರಾಗಿ, ನಮಗೆ ಸಂಪೂರ್ಣವಾಗಿ ಅರ್ಥವಾಗದ ವಿಷಯಗಳಿಗೆ ನಾವು ಭಯಪಡುತ್ತೇವೆ. ಮಾನಸಿಕ ಆರೋಗ್ಯದ ಹೋರಾಟಗಳು ಕತ್ತಲೆಯಾದ, ಪ್ರತ್ಯೇಕವಾದ ಸ್ಥಳದಂತೆ ಭಾಸವಾಗಬಹುದು. ಈ ವಿಷಯದ ಮೇಲೆ ಬೆಳಕು ಚೆಲ್ಲುವುದು, ಈ ಅನುಭವಗಳನ್ನು ಸಾಮಾನ್ಯೀಕರಿಸುವುದು ಮತ್ತು ನೀನು ಒಬ್ಬಂಟಿಯಾಗಿಲ್ಲ ಎಂದು ಜನರಿಗೆ ನೆನಪಿಸುವುದು ಮುಖ್ಯ ಎಂದು ನಾನು ನಂಬುತ್ತೇನೆ - ಇದು ಮಾನವನ ಒಂದು ಭಾಗವಾಗಿದೆ ಎಂದರು.

ಮೈಂಡ್‌ಸ್ಪೋರ್ಟ್ಸ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಭಾರತದಾದ್ಯಂತ ಆಟಗಾರರು ಚೆಸ್, ಆನ್‌ಲೈನ್ ಚೆಸ್, ಬ್ಲೈಂಡ್ ಚೆಸ್ ಮತ್ತು ಆನ್‌ಲೈನ್ ರಮ್ಮಿಯಂತಹ ಮೈಂಡ್ ಸ್ಪೋರ್ಟ್ಸ್‌ನಲ್ಲಿ ಸ್ಪರ್ಧಿಸುವುದನ್ನು ಕಂಡಿತು. ಅತ್ಯುತ್ತಮ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿದ ಉತ್ತಪ್ಪ, “ಆನ್‌ಲೈನ್‌ನಲ್ಲಿ ಅಥವಾ ವೈಯಕ್ತಿಕವಾಗಿ ಆಡಲಿ, ಚೆಸ್ ಕ್ಷೇತ್ರದಲ್ಲಿ ನಾವು ಮುಂದುವರಿಯುತ್ತೇವೆ. ಏಕೆಂದರೆ ಅದು ನಮ್ಮ ಸಂಸ್ಕೃತಿ ಮತ್ತು ಮನಸ್ಥಿತಿಯ ಭಾಗವಾಗಿದೆ. ನಮ್ಮ ಜನರಲ್ಲಿ ಇದು ಆಳವಾಗಿ ಬೋರೂರಿದೆ ಎಂದರು.

ಕ್ರಿಕೆಟ್ ಮತ್ತು ಚೆಸ್‌ಗೆ ಅಗತ್ಯವಿರುವ ಮನಸ್ಥಿತಿಗಳಲ್ಲಿನ ಹೋಲಿಕೆಯನ್ನು ಪ್ರತಿಬಿಂಬಿಸುತ್ತಾ, "ಚೆಸ್ ಆಟಗಾರರು ಕ್ರಿಕೆಟ್‌ನಿಂದ ತೆಗೆದುಕೊಳ್ಳಬಹುದಾದ ಒಂದು ಅಮೂಲ್ಯವಾದ ಪಾಠವೆಂದರೆ ಸ್ವಿಚ್ ಆನ್ ಮತ್ತು ಆಫ್ ಮಾಡುವ ಸಾಮರ್ಥ್ಯ. ಕ್ರಿಕೆಟ್‌ನಲ್ಲಿ, ಬ್ಯಾಟ್ಸ್ ಮನ್ ಗಳು ಮತ್ತು ಬೌಲರ್‌ಗಳು ಸಾಮಾನ್ಯವಾಗಿ ಎಸೆತಗಳ ನಡುವೆ ಮಾನಸಿಕವಾಗಿ ಸ್ವಿಚ್ ಆಫ್ ಆಗುತ್ತಾರೆ ಮತ್ತು ನಂತರ ಕ್ರಿಯೆಯು ಪ್ರಾರಂಭವಾಗುವ ಸ್ವಲ್ಪ ಮೊದಲು ಗಮನಹರಿಸುತ್ತಾರೆ. ಈ ಕೌಶಲ್ಯವು ಚೆಸ್ ಆಟಗಾರರಿಗೆ ಉಪಯುಕ್ತವಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT