ನಿತೀಶ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಜೋಡಿ 
ಕ್ರಿಕೆಟ್

BGT 2025: ಆಸಿಸ್ ವಿರುದ್ಧ ಭರ್ಜರಿ ಜೊತೆಯಾಟ, ಕುಂಬ್ಳೆ-ಭಜ್ಜಿ ದಾಖಲೆ ಮುರಿದ ನಿತೀಶ್ ರೆಡ್ಡಿ-ಸುಂದರ್ ಜೋಡಿ!

ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಆಸರೆಯಾದರು. ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿದರು.

ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಭಾರತದ ನಿತೀಶ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಜೋಡಿ ದಾಖಲೆ ನಿರ್ಮಿಸಿದ್ದು, ಮಾಜಿ ನಾಯಕ ಅನಿಲ್ ಕುಂಭ್ಳೆ ಮತ್ತು ಹರ್ಭಜನ್ ಸಿಂಗ್ ಜೋಡಿ ನಿರ್ಮಿಸಿದ್ದ ದಾಖಲೆ ಮುರಿದ್ದಾರೆ.

ಹೌದು... 4ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದಿಢೀರ್ ಕುಸಿತಗೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಆಸರೆಯಾದರು. ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿ ಲೈಯಾನ್ ಬೌಲಿಂಗ್ ನಲ್ಲಿ ಔಟಾದರು.

ಕುಂಬ್ಳೆ-ಭಜ್ಜಿ ದಾಖಲೆ ಪತನ

ಈ ಜೋಡಿ ಒಟ್ಟಾರೆ 8ನೇ ವಿಕೆಟ್ ಗೆ ಬರೊಬ್ಬರಿ 127ರನ್ ಗಳ ಜೊತೆಯಾಟವಾಡಿತು. ಇದು ಅಪರೂಪದ ದಾಖಲೆಯಾಗಿದ್ದು ಆಸ್ಟ್ರೇಲಿಯಾ ನೆಲದಲ್ಲಿ ಭಾರತದ 8ನೇ ವಿಕೆಟ್ ನಲ್ಲಿ ಬಂದ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ. ಅಂತೆಯೇ ಈ ಜೋಡಿ ಈ ಹಿಂದೆ 2008ರಲ್ಲಿ ಅಡಿಲೇಡ್ ನಲ್ಲಿ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಗಳಿಸಿದ್ದ 107 ರನ್ ಗಳ 8ನೇ ವಿಕೆಟ್ ಜೊತೆಯಾಟದ ದಾಖಲೆಯನ್ನೂ ಹಿಂದಿಕ್ಕಿದೆ.

2 ರನ್ ಅಂತರದಲ್ಲಿ ಮತ್ತೊಂದು ದಾಖಲೆ ಮಿಸ್

ಇನ್ನು ಈ ಜೋಡಿ ಇಂದು ಕೇವಲ 2ರನ್ ಗಳಿಸಿದ್ದರೆ 2008ರಲ್ಲಿ ಸಿಡ್ನಿಯಲ್ಲಿ ಸಚಿನ್ ಮತ್ತು ಹರ್ಭಜನ್ ಸಿಂಗ್ ಗಳಿಸಿದ್ದ 129ರನ್ ಗಳ ದಾಖಲೆಯನ್ನೂ ಮುರಿಯಬಹುದಿತ್ತು. ಆದರೆ ಕೇವಲ 2 ರನ್ ಗಳ ಅಂತರದಲ್ಲಿ ಈ ದಾಖಲೆ ಮಿಸ್ ಮಾಡಿಕೊಂಡಿದೆ.

Highest partnership for 8th wicket or lower for India in Australia

  • 129 S Tendulkar - Harbhajan Sydney 2008

  • 127 N Reddy - W Sundar Melbourne 2024

  • 107 A Kumble - Harbhajan Adelaide 2008

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT