2024ರ ವರ್ಷ ಕ್ರಿಕೆಟ್ ಲೋಕಕ್ಕೆ ಕಹಿಯೆಂದರೆ ತಪ್ಪಾಗಲ್ಲ. ಭಾರತದ ದಿಗ್ಗಜರು ನಿವೃತ್ತಿ ಘೋಷಿಸಿದ್ದು ಇತ್ತೀಚೆಗೆಯಷ್ಟೇ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬ್ರಿಸ್ಬೇನ್ ಟೆಸ್ಟ್ ಫಲಿತಾಂಶದ ನಂತರ ಎಲ್ಲಾ ಮೂರು ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದರು. ಜೇಮ್ಸ್ ಆಂಡರ್ಸನ್, ಶಿಖರ್ ಧವನ್ ಮತ್ತು ಟಿಮ್ ಸೌಥಿ ಸೇರಿದಂತೆ ಅನೇಕ ಕ್ರಿಕೆಟಿಗರು ತಮ್ಮ ವೃತ್ತಿಜೀವನದ ಕಠಿಣ ನಿರ್ಧಾರದಿಂದ ಸುದ್ದಿಯಾಗಿದ್ದರು. ಈ ವರ್ಷ ಕ್ರಿಕೆಟ್ ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟಿಗರ ಪಟ್ಟಿ ಇಂತಿದೆ.
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಡೀನ್ ಎಲ್ಗಾರ್ ಭಾರತದ ವಿರುದ್ಧ ಜನವರಿಯಲ್ಲಿ ನಡೆದ ಟೆಸ್ಟ್ ಸರಣಿ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. ಎಲ್ಗಾರ್ ದಕ್ಷಿಣ ಆಫ್ರಿಕಾ ಪರ 86 ಟೆಸ್ಟ್ ಪಂದ್ಯ ಮತ್ತು ಕೇವಲ 8 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದರು. ಎಲ್ಗಾರ್ 37.92 ಸರಾಸರಿಯಲ್ಲಿ ಒಟ್ಟು 5347 ರನ್ ಗಳಿಸಿದ್ದು, ಈ ಪೈಕಿ 14 ಶತಕ ಮತ್ತು 23 ಅರ್ಧಶತಕಗಳು ಸೇರಿವೆ.
2023ರ ಜೂನ್ ತಿಂಗಳಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಆ್ಯಷಸ್ ಟೆಸ್ಟ್ ಸರಣಿ ವೇಳೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ವಾರ್ನರ್ ಆಸ್ಟ್ರೇಲಿಯಾ ಪರ 112 ಟೆಸ್ಟ್ ಮ್ಯಾಚ್ ಗಳಲ್ಲಿ ಒಟ್ಟಾರೆ 8786 ರನ್ ಗಳಿಸಿದ್ದು, 161 ಏಕದಿನ ಪಂದ್ಯಗಳಲ್ಲಿ 6932 ರನ್ ಗಳಿಸಿದ್ದಾರೆ. ಈ ಪೈಕಿ ವಾರ್ನರ್ ಒಟ್ಟು 48 ಶತಕ ಕೂಡ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಹಾಗೂ ಕೀಪರ್ ಹೆನ್ರಿಚ್ ಕ್ಲಾಸನ್ ಜನವರಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. 4 ಟೆಸ್ಟ್ ಪಂದ್ಯಗಳನ್ನಾಡಿರುವ ಕ್ಲಾಸನ್ 104 ರನ್ ಗಳಿಸಿದ್ದು, ಅವರ ವೈಯುಕ್ತಿಕ ಗರಿಷ್ಛ 35 ರನ್ ಗಳಾಗಿವೆ. ನಿಗದಿತ ಓವರ್ ಗಳ ಮಾದರಿಯಲ್ಲಿ ಹೆಚ್ಚು ಫೋಕಸ್ ನೀಡುವ ದೃಷ್ಟಿಯಿಂದ ಕ್ಲಾಸನ್ ಟೆಸ್ಟ್ ಕ್ರಿಕೆಟ್ ವಿದಾಯ ಘೋಷಿಸಿದ್ದಾರೆ ಎನ್ನಲಾಗಿದೆ.
ನ್ಯೂಜಿಲೆಂಡ್ ಬೌಲರ್ ನೀಲ್ ವಾಗ್ನರ್ ಫೆಬ್ರವರಿಯಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. ನ್ಯೂಜಿಲೆಂಡ್ ಪರ 64 ಟೆಸ್ಟ್ ಪಂದ್ಯಗಳನ್ನಾಡಿರುವ ವಾಗ್ನರ್ ಒಟ್ಟು 260 ವಿಕೆಟ್ ಕಬಳಿಸಿದ್ದು, 39 ರನ್ ಗೆ 7 ವಿಕೆಟ್ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.
ನ್ಯೂಜಿಲೆಂಡ್ ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟ ಬಳಿಕ ಕೊಲಿನ್ ಮನ್ರೋ ಮೇ ತಿಂಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. ನ್ಯೂಜಿಲೆಂಡ್ ಪರ ಮನ್ರೋ 57 ಏಕದಿನ ಪಂದ್ಯ ಮತ್ತು 1 ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಅಂತೆಯೇ 65 ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಆಲ್ರೌಂಡರ್ ಡೇವಿಡ್ ವೈಸ್ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾ ದೇಶಗಳ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. 2024 ರ ಟಿ20 ವಿಶ್ವಕಪ್ ನಂತರ ಅವರು 54 ಟಿ20ಐ ಮತ್ತು 15 ಏಕದಿನ ಪಂದ್ಯಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಅವರು 2016 ರಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡವನ್ನು ತೊರೆದಿದ್ದ ಅವರು ಕೋಲ್ಪಾಕ್ ಒಪ್ಪಂದವನ್ನು ಪಡೆದರು. 2021 ರಲ್ಲಿ ಯುಎಇಯಲ್ಲಿ ನಡೆದ 2021 ರ ಟಿ20 ವಿಶ್ವಕಪ್‌ನ ಸೂಪರ್ 12 ಸುತ್ತಿಗೆ ಅರ್ಹತೆ ಪಡೆಯಲು ಅವರು ನಮೀಬಿಯಾ ಪರ ಪಾದಾರ್ಪಣೆ ಮಾಡಿದರು. ಅವರು ನಮೀಬಿಯಾ ಪರ 34 ಟಿ20ಐ ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
2024 ರಲ್ಲಿ ವಿದಾಯ ಘೋಷಿಸಿದ ಪ್ರಮುಖ ಕ್ರಿಕೆಟಿಗರಲ್ಲಿ ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ ಕೂಡ ಒಬ್ಬರು. ಆಂಡರ್ಸನ್ ಮೇ ತಿಂಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. 188 ಟೆಸ್ಟ್ ಪಂದ್ಯಗಳನ್ನಾಡಿರುವ ಆ್ಯಂಡರ್ಸನ್ ಒಟ್ಟು 704 ವಿಕೆಟ್ ಕಬಳಿಸಿದ್ದಾರೆ. ಅಂತೆಯೇ 194 ಏಕದಿನ ಪಂದ್ಯಗಳಿಂದ 269 ಮತ್ತು 19 ಟಿ20 ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ತಂಡ ಮಾಜಿ ಸ್ಟಾರ್ ಬ್ಯಾಟರ್ ಡೇವಿಡ್ ಮಲನ್ ಆಗಸ್ಟ್ ನಲ್ಲಿ ನಿವೃತ್ತಿ ಘೋಷಿಸಿದ್ದರು. ಒಟ್ಟು 22 ಟೆಸ್ಟ್ ಪಂದ್ಯಗಳನ್ನಾಡಿರುವ ಮಲನ್ 1074 ರನ್ ಗಳಿಸಿದ್ದು, 30 ಏಕದಿನ ಪಂದ್ಯಗಳಿಂದ 1450 ಮತ್ತು 62 ಟಿ20 ಪಂದ್ಯಗಳಿಂದ 1892 ರನ್ ಗಳಿಸಿದ್ದರು.
ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೋಯಿನ್ ಅಲಿ ಸೆಪ್ಟೆಂಬರ್ ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. 68 ಟೆಸ್ಟ್ ಪಂದ್ಯಗಳನ್ನಾಡಿರುವ ಅಲಿ 3094 ರನ್ ಗಳಿಸಿದ್ದು, 138 ಏಕದಿನ ಪಂದ್ಯಗಳಿಂದ 2355 ರನ್ ಮತ್ತು 92 ಪಂದ್ಯಗಳಿಂದ 1229 ರನ್ ಗಳಿಸಿದ್ದಾರೆ.
ಬಾಂಗ್ಲಾದೇಶದ ಮಾಜಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಇದೇ ವರ್ಷ ಟೆಸ್ಟ್ ಕ್ರಿಕೆಟ್ ಗೆ ನಿವೃತಿ ಘೋಷಿದ್ದರು. ಆದರೆ ಶಕೀಬ್ ಏಕದಿನ ಕ್ರಿಕೆಟ್ ನಲ್ಲಿ ಮುಂದುವರೆದಿದ್ದಾರೆ. 71 ಪಂದ್ಯಗಳನ್ನಾಡಿರುವ ಶಕೀಬ್ 4609 ರನ್ ಗಳಿಸಿದ್ದಾರೆ. ಅಂತೆಯೇ ಬೌಲಿಂಗ್ ನಲ್ಲಿ 246 ವಿಕೆಟ್ ಕಬಳಿಸಿದ್ದಾರೆ.
ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂವೇಡ್ ಅಕ್ಟೋಬರ್ ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ವೇಡ್, 36 ಟೆಸ್ಟ್, 97 ಏಕದಿನ ಮತ್ತು 92 ಟಿ20 ಪಂದ್ಯಗಳನ್ನಾಡಿದ್ದಾರೆ.
ಪಾಕಿಸ್ತಾನದ ಮತ್ತೋರ್ವ ಆಟಗಾರ ಇಮಾದ್ ವಾಸಿಮ್ ಕೂಡ ಡಿಸೆಂಬರ್ ನಲ್ಲಿ ವಿದಾಯ ಘೋಷಿಸಿದ್ದರು. ಪಾಕ್ ಪರ ಇಮಾದ್ ವಾಸೀಂ 55 ಏಕದಿನ, 75 ಟಿ20 ಪಂದ್ಯಗಳನ್ನಾಡಿದ್ದಾರೆ.
ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಎಡಗೈ ವೇಗಿ ಮೊಹಮ್ಮದ್ ಅಮೀರ್ ಡಿಸೆಂಬರ್ ನಲ್ಲಿ ವಿದಾಯ ಘೋಷಿಸಿದ್ದಾರೆ. 32 ವರ್ಷದ ಮಹಮದ್ ಆಮೀರ್ ಪಾಕಿಸ್ತಾನ ಪರ 36 ಟೆಸ್ಟ್, 61 ಏಕದಿನ ಮತ್ತು 62 ಟಿ20ಐ ಆಡಿದ್ದಾರೆ.