ಪಾಕ್ ಕ್ರಿಕೆಟ್ ತಂಡ
ಪಾಕ್ ಕ್ರಿಕೆಟ್ ತಂಡ PTI
ಕ್ರಿಕೆಟ್

ಏಕದಿನ ವಿಶ್ವಕಪ್‌ಗೂ ಮುನ್ನ ಪಾಕ್ ತಂಡದ ಫಿಟ್‌ನೆಸ್‌ಗೆ ಹೆಚ್ಚಿನ ಆದತ್ಯೆ ನೀಡಿರಲಿಲ್ಲ: ಬಾಬರ್, ಕೋಚ್ ಆರ್ಥರ್ ವಿರುದ್ಧ ಹಫೀಜ್ ಆರೋಪ

Vishwanath S

ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಮತ್ತು ವಿದೇಶಿ ಕೋಚ್‌ಗಳಾದ ಮಿಕ್ಕಿ ಆರ್ಥರ್ ಮತ್ತು ಗ್ರಾಂಟ್ ಬ್ರಾಡ್‌ಬರ್ನ್ ಅವರು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ಗೆ ಮುನ್ನ ತಂಡದ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟ್ ನಿರ್ದೇಶಕ ಮೊಹಮ್ಮದ್ ಹಫೀಜ್ ಆರೋಪಿಸಿದ್ದಾರೆ.

ಬಾಬರ್ ನಾಯಕತ್ವದಲ್ಲಿ, ಪಾಕಿಸ್ತಾನ ತಂಡವು ಒಂಬತ್ತು ಲೀಗ್ ಪಂದ್ಯಗಳಲ್ಲಿ ಐದರಲ್ಲಿ ಸೋತ ನಂತರ ODI ವಿಶ್ವಕಪ್‌ನಲ್ಲಿ ಐದನೇ ಸ್ಥಾನ ಗಳಿಸಿದ್ದು ನಾಕೌಟ್ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇತ್ತೀಚೆಗೆ ಹಫೀಜ್ ಅವರ ಒಪ್ಪಂದವನ್ನು ವಿಸ್ತರಿಸಲು ನಿರಾಕರಿಸಿದೆ. ಇದರ ಬೆನ್ನಲ್ಲೇ ಹಫೀಜ್‌ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ನಿರಾಶಾದಾಯಕ ವಿಶ್ವಕಪ್ ಪ್ರದರ್ಶನದ ನಂತರ ಹಫೀಜ್ ರನ್ನು 2023ರ ಕೊನೆಯಲ್ಲಿ ತಂಡದ ನಿರ್ದೇಶಕರನ್ನಾಗಿ ಮಾಡಲಾಯಿತು. ಹಫೀಜ್ ಅಧಿಕಾರ ವಹಿಸಿಕೊಂಡ ನಂತರ, ಪಾಕಿಸ್ತಾನವು ಆಸ್ಟ್ರೇಲಿಯಾದಲ್ಲಿ ಮೂರು-ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಅನ್ನು ಎದುರಿಸಿತು. ನಂತರ ಐದು ಪಂದ್ಯಗಳ T20 ಅಂತರರಾಷ್ಟ್ರೀಯ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 1-4 ರಿಂದ ಸೋತಿತು. ನಾನು ತಂಡದ ನಿರ್ದೇಶಕನಾಗಿ ಆಯ್ಕೆಯಾದ ಕೂಡಲೇ ಆಸ್ಟ್ರೇಲಿಯಾಕ್ಕೆ ತೆರಳಿದೆ. ಅಲ್ಲಿ ಆಟಗಾರರ ಫಿಟ್‌ನೆಸ್ ಮಾನದಂಡಗಳ ಬಗ್ಗೆ ವರದಿಯನ್ನು ನೀಡುವಂತೆ ತಂಡದ ತರಬೇತುದಾರರನ್ನು ಕೇಳಿದೆ. ಹೊಸ ಫಿಟ್‌ನೆಸ್ ದಿನಚರಿಯನ್ನು ಸಿದ್ಧಪಡಿಸಲು ನಾನು ಅವರನ್ನು ಕೇಳಿದೆ.

ಆಗ ಅವರು, ಮಾಜಿ ನಾಯಕ (ಬಾಬರ್ ಅಜಂ) ಮತ್ತು ಮುಖ್ಯ ಕೋಚ್‌ (ಮಿಕ್ಕಿ ಅರ್ಥರ್‌) ಈ ಹಂತದಲ್ಲಿ ಫಿಟ್‌ನೆಸ್‌ಗೆ ಆದ್ಯತೆ ನೀಡಬೇಕಾಗಿಲ್ಲ. ಆಟಗಾರರನ್ನು ಅವರು ಬಯಸಿದಂತೆ ಆಡಲು ಬಿಡಿ ಎಂದು 6 ತಿಂಗಳ ಹಿಂದೆಯೇ ಸೂಚಿಸಿದ್ದರು ಎಂಬುದಾಗಿ ತಿಳಿಸಿದ್ದರು. ಇದನ್ನು ಕೇಳಿ ಆಶ್ಚರ್ಯವಾಯಿತು ಎಂದು ಹೇಳಿದರು.

ಪಾಕಿಸ್ತಾನದ ಆಟಗಾರರ ದೇಹದ ಬೊಜ್ಜು, ಸಹಿಷ್ಣುತೆ ಮಟ್ಟ ಅಂತಾರಾಷ್ಟ್ರೀಯ ಮಾನದಂಡಕ್ಕಿಂತ ತೀರಾ ಕಳಪೆಯಾಗಿತ್ತು. ಆಧುನಿಕ ಕ್ರಿಕೆಟ್‌ನಲ್ಲಿ ಎಲ್ಲಾ ತಂಡಗಳಿಗೆ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಫಿಟ್‌ನೆಸ್‌ ಟೆಸ್ಟ್‌ ನಡೆಸಿದ್ದಾಗ ಕೆಲವು ಆಟಗಾರರು ಎರಡು ಕಿ.ಮೀ ದೂರವನ್ನು ಪೂರ್ಣಗೊಳಿಸಿರಲಿಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT