ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್: 153 ರನ್ ಗಳಿಗೆ ಭಾರತ ಆಲೌಟ್, 11 ಎಸೆತಗಳಲ್ಲಿ 6 ವಿಕೆಟ್ ಪತನ

Nagaraja AB

ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ 153 ರನ್ ಗಳಿಗೆ ಆಲೌಟ್ ಆಗಿದೆ. ಕೇಪ್ ಟೌನ್ ನ ನ್ಯೂ ಲ್ಯಾಂಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಯಾವುದೇ ರನ್ ಗಳಿಲ್ಲದೆ 11 ಎಸೆತಗಳಲ್ಲಿ ಆರು ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. 

3ನೇ ಸೆಷನ್‌ನ ಮೊದಲ ಗಂಟೆಯಲ್ಲಿ ಕೊಹ್ಲಿ ಮತ್ತು ರಾಹುಲ್ ಸರಾಗವಾಗಿ ಆಡಿದರು ಮತ್ತು ಓವರ್‌ಗೆ 4 ರನ್‌ಗಳಿಗಿಂತ ಹೆಚ್ಚು ರನ್ ಗಳಿಸಿದರು. ಆದರೆ ಒಮ್ಮೆ ಲುಂಗಿ ಎನ್ಗಿಡಿ ದಾಳಿಗೆ ಮರಳಿದ ನಂತರ ಭಾರತದ ವಿಕೆಟ್ ಗಳು ಒಂದಾದ ಮೇಲೊಂದರಂತೆ ಬೀಳತೊಡಗಿದವು. 

ಎನ್ಗಿಡಿ ಮೊದಲಿಗೆ ರಾಹುಲ್ ಅವರನ್ನು 8 ರನ್ ಗಳಿಗೆ ಔಟ್ ಮಾಡಿದರು. ಇದೇ ಓವರ್ ನಲ್ಲಿ ಜಡೇಜಾ, ಬೂಮ್ರಾ ಔಟಾದರು. ಇದರಿಂದಾಗಿ ಭಾರತ ಏಳು ವಿಕೆಟ್ ಗಳಿಗೆ 153 ರನ್ ಗಳಿಸಿತು. ನಂತರ ರಬಾಡ 35ನೇ ಓವರ್‌ನಲ್ಲಿ ಕೊಹ್ಲಿ, ಸಿರಾಜ್ ಮತ್ತು ಕೃಷ್ಣ ಅವರನ್ನು ಬಲೆಗೆ ಬೀಳಿಸಿ ಭಾರತವನ್ನು ಆಲೌಟ್ ಮಾಡಿದರು. ಎರಡನೇ ಇನ್ಸಿಂಗ್ಸ್ ಮುಂದುವರೆಸಿದ ದಕ್ಷಿಣ ಆಫ್ರಿಕಾ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತು.

SCROLL FOR NEXT