ಭುವನೇಶ್ವರ: ಟಿ20 ವಿಶ್ವಕಪ್ ಜಯಿಸಿದ ಭಾರತ ತಂಡದ ನೆನಪಿನಾರ್ಥವಾಗಿ ಇಲ್ಲೊಬ್ಬ ವಿಶೇಷ ಅಭಿಮಾನಿ T20 ವಿಶ್ವಕಪ್ ವಿಜೇತ ಇಡೀ ಭಾರತ ತಂಡದ ಆಟಗಾರರ ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ಹೌದು.. ಬಾರ್ಬಡೋಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ನಿನ್ನೆಯಷ್ಟೇ ಸ್ವದೇಶಕ್ಕೆ ಆಗಮಿಸಿತ್ತು. ದೆಹಲಿ ಮತ್ತು ಮುಂಬೈನಲ್ಲಿ ಭಾರತ ತಂಡಕ್ಕೆ ಅದ್ದೂರಿ ಸ್ವಾಗತ ನೀಡಲಾಗಿತ್ತು.
ದೆಹಲಿಯಲ್ಲಿ ಭಾರತ ತಂಡವನ್ನು ಭೇಟಿ ಮಾಡಿದ್ದ ಪ್ರಧಾನಿ ಮೋದಿ ತಂಡಕ್ಕೆ ಶುಭ ಕೋರಿದ್ದರು. ಬಳಿಕ ಮುಂಬೈಗೆ ಆಗಮಿಸಿದ್ದ ಭಾರತ ತಂಡ ಮುಂಬೈಗೆ ಆಗಮಿಸಿತ್ತು.
ಈ ವೇಳೆ ತೆರೆದ ಬಸ್ ನಲ್ಲಿ ಭಾರತ ತಂಡವನ್ನು ಮೆರವಣಿಗೆ ಮೂಲಕ ವಾಂಖೆಡೆ ಕ್ರೀಡಾಂಗಣಕ್ಕೆ ಕರೆತರಲಾಯಿತು. ಈ ವೇಳೆ ನಡೆದ ವಿಕ್ಚರಿ ಪರೇಡ್ ನಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರನ್ನು ಸನ್ಮಾನಿಸಲಾಯಿತು.
ವಿಶ್ವಕಪ್ ವಿಜೇತ ಇಡೀ ತಂಡದ ಆಟಗಾರರ ಹೆಸರು ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ
ಇದೇ ವೇಳೆ ಅಭಿಮಾನಿಯೋರ್ವ ಟಿ20 ವಿಶ್ವಕಪ್ ಜಯಿಸಿದ ಭಾರತ ತಂಡದ ನೆನಪಿನಾರ್ಥವಾಗಿ T20 ವಿಶ್ವಕಪ್ ವಿಜೇತ ಇಡೀ ಭಾರತ ತಂಡದ ಆಟಗಾರರ ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಒಡಿಶಾದ ಭುವನೇಶ್ವರ ನಿವಾಸಿ ಮನೋಜ್ ನಾಯಕ್ ಎಂಬ ಅಭಿಮಾನಿ ಭಾರತ ಕ್ರಿಕೆಟ್ ತಂಡದ ಆಟಗಾರರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರರ ಟ್ಯೂಟೂ ಕೂಡ ಇದೆ
ಇದೇ ವೇಳೆ ಈ ಹಿಂದೆಯೇ ಇದೇ ಮನೋಜ್ ನಾಯಕ್ ತನ್ನ ಬೆನ್ನ ಮೇಲೆ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರರ ಹೆಸರುಗಳನ್ನು ಕೂಡ ಹಚ್ಚೆ ಹಾಕಿಸಿಕೊಂಡಿದ್ದಾನೆ. ಹಾಲಿ ಇರುವ ಟ್ಯೂಟೂ ಪಕ್ಕದಲ್ಲೇ ಈ ಹಿಂದಿನ ಟ್ಯಾಟೂ ಕೂಡ ಇದೆ.