ಕೆನಡಾ ವಿರುದ್ಧ ಯುಎಸ್ಎ ದಾಖಲೆಯ ಜಯ 
ಕ್ರಿಕೆಟ್

T20 World Cup 2024: ಕೆನಡಾ ವಿರುದ್ಧ USA ದಾಖಲೆಯ ಜಯ, ಟಿ20 ವಿಶ್ವಕಪ್ ಇತಿಹಾಸದ 3ನೇ ಗರಿಷ್ಠ ಚೇಸ್!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅತಿಥೇಯ ಯುಎಸ್ ಎ ತಂಡ ಕೆನಡಾ ವಿರುದ್ಧ ದಾಖಲೆಯ ಜಯ ದಾಖಲಿಸಿದೆ.

ಡಲ್ಲಾಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅತಿಥೇಯ ಯುಎಸ್ ಎ ತಂಡ ಕೆನಡಾ ವಿರುದ್ಧ ದಾಖಲೆಯ ಜಯ ದಾಖಲಿಸಿದೆ.

ಕೆನಡಾ ನೀಡಿದ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಯುಎಸ್ಎ ತಂಡ 17.4 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿ ಭರ್ಜರಿ ಜಯ ಗಳಿಸಿದೆ. ಯುಎಸ್ಎ ಪರ ಆರಂಭಿಕ ಆಟಗಾರ ಸ್ಟೀವೆನ್ ಟೈಲರ್ ಡಕೌಟ್ ಆಗಿ ಆರಂಭಿಕ ಆಘಾತ ನೀಡಿದರು.

ಆದರೂ ದೃತಿಗೆಡದ ಯುಎಸ್ ಎ ತಂಡ ಆ್ಯಂಡ್ರಿಸ್ ಗಾಸ್ 65 ರನ್ ಮತ್ತು ಆ್ಯರನ್ ಜೋನ್ಸ್ ರ ಅಜೇಯ 94 ರನ್ ಗಳ ನೆರವಿನಿಂದ 17.4 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿ ಭರ್ಜರಿ ಜಯ ಗಳಿಸಿತು.

ಇದು ಟಿ20 ಇತಿಹಾಸದಲ್ಲೇ ಮೂರನೇ ದಾಖಲೆಯ ಜಯವಾಗಿದೆ. ಚೇಸಿಂಗ್ ನಲ್ಲಿ 3ನೇ ಗರಿಷ್ಠ ರನ್ ಚೇಸಿಂಗ್ ಇದಾಗಿದೆ. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕೆನಡಾ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿತು. ಕೆನಡಾ ಪರ ಆರನ್ ಜೋನ್ಸ್ 23 ರನ್, ನವನೀತ್ ಧಲಿವಾಲ್ 61 ರನ್, ನಿಕೋಲಸ್ ಕಿರ್ಟನ್ 51 ರನ್, ಕನ್ನಡಿಗ ಕರ್ನಾಟಕದ ದಾವಣಗೆರೆ ಮೂಲದ ಶ್ರೇಯಸ್ ಮೊವ್ವಾ 32 ರನ್ ಕಲೆ ಹಾಕಿದರು.

ಟಿ20 ವಿಶ್ವಕಪ್ ನಲ್ಲಿ 3ನೇ ದಾಖಲೆಯ ಜಯ

ಇನ್ನು ಯುಎಸ್ಎ ಚೇಸ್ ಮಾಡಿದ 195 ರನ್ ಗಳ ಗುರಿ ಟಿ20 ವಿಶ್ವಕಪ್ ನಲ್ಲಿ ದಾಖಲಾದ 3ನೇ ಗರಿಷ್ಠ ರನ್ ಗಳ ಯಶಸ್ವಿ ಚೇಸಿಂಗ್ ಆಗಿದೆ. ಈ ಹಿಂದೆ 2016ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಅಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 230 ರನ್ ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದಕ್ಕೂ ಮೊದಲು 2007ರಲ್ಲಿ ಜೋಹನ್ಸ್ ಬರ್ಗ್ ನಲ್ಲಿ ನಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 206ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದೀಗ 194ರನ್ ಗಳನ್ನು ಯುಎಸ್ಎ ಯಶಸ್ವಿಯಾಗಿ ಚೇಸ್ ಮಾಡಿದೆ.

Highest targets succesfully chased in T20 WCs

  • 230 Eng vs SA Wankhede 2016

  • 206 SA vs WI Joburg 2007

  • 195 USA vs Can Dallas 2024 *

  • 193 WI vs Ind Wankhede 2016

  • 192 Aus vs Pak Gros Islet 2010

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT