ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಲ್ಪ ಮೊತ್ತದ ಗುರಿಯ ಹೊರತಾಗಿಯೂ ಅಮೋಘ ಜಯ ದಾಖಲಿಸಿದ ಭಾರತ ತಂಡ ಈ ಪಂದ್ಯದ ಮೂಲಕ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದೆ.
ಹೌದು.. ನಿನ್ನೆ ನ್ಯೂಯಾರ್ಕ್ ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಹೋರಾಡಿ ಭಾರತ ತಂಡ ವಿರೋಚಿತ ಜಯ ಸಾಧಿಸಿತು.
ಭಾರತ ನೀಡಿದ್ದ 120 ರನ್ ಗಳ ಅಲ್ಪ ಗುರಿಯನ್ನು ಬೆನ್ನುಹತ್ತಿದ ಪಾಕಿಸ್ತಾನ ಮೊದಲ 10 ಓವರ್ ನಲ್ಲಿ ಯಾವುದೇ ರೀತಿಯ ಒತ್ತಡವಿಲ್ಲದೇ ನಿಧಾನವಾಗಿ ರನ್ ಕಲೆಹಾಕುತ್ತಾ ಜಯದತ್ತ ದಾಪುಗಾಲಿರಿಸಿತ್ತು. ಆದರೆ 10 ಓವರ್ ನಂತರ ಕ್ರಮೇಣ ವಿಕೆಟ್ ಕಬಳಿಸುತ್ತಾ ಸಾಗಿದ ಟೀಂ ಇಂಡಿಯಾ ಬೌಲರ್ ಗಳು ಪಾಕ್ ಮೇಲೆ ಒತ್ತಡ ಹೇರಿ ಅಂತಿಮ ಎಸೆತದಲ್ಲಿ ಜಯ ತಮ್ಮದಾಗಿಸಿಕೊಂಡರು.
ಹಲವು ದಾಖಲೆಗಳ ನಿರ್ಮಾಣ
ಇನ್ನು ಈ ಪಂದ್ಯದಲ್ಲಿ ಭಾರತ ತಂಡ ವಿರೋಚಿತ ಜಯ ದಾಖಲಿಸಿದ್ದು ಮಾತ್ರವಲ್ಲದೇ ಹಲವು ದಾಖಲೆಗಳ ಸರಮಾಲೆಯನ್ನೇ ನಿರ್ಮಿಸಿದೆ.
ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಬುಮ್ರಾ ದಾಖಲೆ
ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಭಾರತದ ಜಸ್ ಪ್ರೀತ್ ಬುಮ್ರಾ 4 ಓವರ್ ನಲ್ಲಿ ಕೇವಲ 14 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದಿದ್ದರು. ಅಲ್ಲದೆ ತಮ್ಮ ಅಮೋಘ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಆ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಸತತ 2ನೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕೀರ್ತಿಗೆ ಬುಮ್ರಾ ಪಾತ್ರರಾದರು. ಈ ಹಿಂದೆ 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಗೆಲುವಿನ ಪಾಕ್ ದಾಖಲೆ ಮುರಿದ ಭಾರತ
ಇನ್ನು ತಂಡವೊಂದರ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಅತೀ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಹಿಂದಿಕ್ಕಿದೆ. ನಿನ್ನೆ ಭಾರತಕ್ಕೆ ಪಾಕ್ ವಿರುದ್ಧ ಸಿಕ್ಕ ಜಯ 7ನೇಯದ್ದಾಗಿದ್ದು, ಆ ಮೂಲಕ ಟಿ20 ವಿಶ್ವಕಪ್ ನಲ್ಲಿ ತಂಡವೊಂದರ ವಿರುದ್ಧ ಗರಿಷ್ಟ ಜಯ ದಾಖಲಿಸಿದ ತಂಡ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ. ಈ ಹಿಂದೆ ಈ ದಾಖಲೆ ಪಾಕಿಸ್ತಾನದ ಹೆಸರಿನಲ್ಲಿತ್ತು. ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 6 ಜಯ ದಾಖಲಿಸಿ ಅಗ್ರಸ್ಥಾನದಲ್ಲಿತ್ತು. ಈ ದಾಖಲೆಯನ್ನು ಇದೀಗ ಭಾರತ ಮುರಿದಿದೆ.
Most wins against an opponent in T20 WC (including wins in ties)
ಪಾಕ್ ವಿರುದ್ಧ ಅಲ್ಪ ಮೊತ್ತ; ಭಾರತದ ದಾಖಲೆ
ಇನ್ನು ಪಾಕಿಸ್ತಾನ ವಿರುದ್ಧ ಅಲ್ಪ ಮೊತ್ತದ ಹೊರತಾಗಿಯೂ ಗೆದ್ದ ಭಾರತ ಪಾಕ್ ವಿರುದ್ಧ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದೆ. ಅಲ್ಪ ಮೊತ್ತ ಗಳಿಕೆ ಹೊರತಾಗಿಯೂ ಪಾಕ್ ವಿರುದ್ಧ ಗೆದ್ದ 2ನೇ ತಂಡ ಎಂಬ ಕೀರ್ತಿಗೆ ಭಾರತ ತಂಡ ಭಾಜನವಾಗಿದೆ. ಈ ಹಿಂದೆ 2021ರಲ್ಲಿ ಜಿಂಬಾಬ್ವೆ ತಂಡ 119ರನ್ ಗಳಿಸಿ ಆ ಪಂದ್ಯವನ್ನು ಗೆದ್ದು ಬೀಗಿತ್ತು. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
Lowest targets successfully defended vs Pakistan in T20Is
119 by Zim Harare 2021
120 by India New York 2024 *
128 by Aus Melbourne 2010
130 by Eng Abu Dhabi 2012
131 by Zim Perth 2022
ಟಿ20 ವಿಶ್ವಕಪ್ ಅಲ್ಪಮೊತ್ತ ಗಳಿಸಿ ಜಯ ದಾಖಲಿಸಿದ 2ನೇ ತಂಡ
ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಲ್ಪಮೊತ್ತ ಗಳಿಸಿ ಜಯ ದಾಖಲಿಸಿದ 2ನೇ ತಂಡ ಎಂಬ ಕೀರ್ತಿಗೆ ಭಾರತ ತಂಡ ಭಾಜನವಾಗಿದೆ. ಈ ಹಿಂದೆ 2014ರಲ್ಲಿ ನ್ಯೂಜಿಲೆಂಡ್ ತಂಡ ಕೂಡ 120 ರನ್ ಗಳಿಸಿ ಆ ಪಂದ್ಯವನ್ನು ಗೆದ್ದು ಕೊಂಡಿತ್ತು. ಈ ಪಟ್ಟಿಯಲ್ಲಿ ನಿನ್ನೆಯ ಪಂದ್ಯ 2ನೇ ಸ್ಥಾನದಲ್ಲಿದೆ.
Lowest targets successfully defended in T20 WCs
120 SL vs NZ Chattogram 2014
120 Ind vs Pak New York 2024 *
124 Afg vs WI Nagpur 2016
127 NZ vs Ind Nagpur 2016
129 SA vs NZ Lord's 2009
ಟಿ20ಯಲ್ಲಿ ಭಾರತ ಜಯ ಗಳಿಸಿದ ಅಲ್ಪ ಮೊತ್ತದ ಪಂದ್ಯ
ಇನ್ನು ಭಾರತ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಲ್ಪಮೊತ್ತ ಗಳಿಸಿಯೂ ಜಯ ಸಿಕ್ಕ ಮೊದಲ ಪಂದ್ಯ ಇದಾಗಿದೆ. ಈ ಹಿಂದೆ 2016ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತ 139 ರನ್ ಗಳಿಸಿ ಆ ಪಂದ್ಯವನ್ನೂ ಯಶಸ್ವಿಯಾಗಿ ಜಯಿಸಿತ್ತು. ಇದೀಗ ನಿನ್ನೆಯ ಪಂದ್ಯದಲ್ಲಿ ಅದಕ್ಕಿಂತಲೂ ಕಡಿಮೆ ಮೊತ್ತವಾದ 120 ರನ್ ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡು ಜಯ ಗಳಿಸಿದೆ.
Lowest targets successfully defended by India in T20I
120 vs Pak New York 2024 *
139 vs Zim Harare 2016
145 vs Eng Nagpur 2017
147 vs Ban Bengaluru 2016