ಅಫ್ಘಾನಿಸ್ತಾನ ಆಟಗಾರರು 
ಕ್ರಿಕೆಟ್

ಕೆರಿಬಿಯನ್ ನಾಡಲ್ಲಿ ಹಲಾಲ್​ ಮಾಂಸದೂಟ ಸಿಗದೆ ಅಫ್ಘಾನ್ ಕ್ರಿಕೆಟಿಗರ ಒದ್ದಾಟ; ಹಸಿವು ತಾಳಲಾರದೆ ಕ್ರಿಕೆಟಿಗರು ಮಾಡಿದ್ದೇನು?

ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನಲ್ಲಿರುವ ತಮ್ಮ ತಂಡದ ಹೋಟೆಲ್‌ನಲ್ಲಿ ಹಲಾಲ್ ಮಾಂಸ ಲಭ್ಯವಿಲ್ಲದ ಕಾರಣ ಅಫ್ಘಾನಿಸ್ತಾನ ಆಟಗಾರರು ತಾವೇ ಅಡುಗೆಯನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನಲ್ಲಿರುವ ತಮ್ಮ ತಂಡದ ಹೋಟೆಲ್‌ನಲ್ಲಿ ಹಲಾಲ್ ಮಾಂಸ ಲಭ್ಯವಿಲ್ಲದ ಕಾರಣ ಅಫ್ಘಾನಿಸ್ತಾನ ಆಟಗಾರರು ತಾವೇ ಅಡುಗೆಯನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲಾಲ್ ಮಾಂಸ ಸಿಗುತ್ತಿಲ್ಲ. ಇನ್ನು ಆಹಾರದ ಅವಶ್ಯಕತೆಗಳಲ್ಲಿ ಹಲಾಲ್ ಮಾಂಸ ಅತ್ಯಗತ್ಯ ಅಂಶವಾಗಿದೆ. ಹೀಗಾಗಿ ಅದನ್ನು ಸ್ವತಃ ಬೇಯಿಸುವುದು ಅಥವಾ ಹೊರಗೆ ಹೋಗಿ ತಿನ್ನುವುದನ್ನು ಬಿಟ್ಟು ಅವರಿಗೆ ಯಾವುದೇ ಆಯ್ಕೆಯಿಲ್ಲ. ಭಾರತದಲ್ಲಿ ನೀಡಲಾಗುವ ಅದ್ದೂರಿ ಆತಿಥ್ಯಕ್ಕೆ ಒಗ್ಗಿಕೊಂಡಿರುವ ಅಫ್ಘಾನಿಸ್ತಾನ ತಂಡ ಕೆರಿಬಿಯನ್ ದ್ವೀಪದಲ್ಲಿ ವಿಭಿನ್ನ ಸನ್ನಿವೇಶವನ್ನು ಎದುರಿಸಬೇಕಾಗಿದೆ.

ಭಾರತದಲ್ಲಿ ODI ವಿಶ್ವಕಪ್ 2023 ರಲ್ಲಿ ಉತ್ತಮ ಆತಿಥ್ಯವನ್ನು ಅನುಭವಿಸಿದ ನಂತರ, ಅಫ್ಘಾನ್ ತಂಡವು 2024 ರ T20 ವಿಶ್ವಕಪ್‌ಗಾಗಿ ವೆಸ್ಟ್ ಇಂಡೀಸ್‌ಗೆ ತಲುಪಿದೆ. ಆದರೆ, ಬ್ರಿಡ್ಜ್ ಟೌನ್ ಹೋಟೆಲ್ ನಲ್ಲಿ ಸಿಗುವ ಮಾಂಸ ಹಲಾಲ್ ಆಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನಿಶ್ಚಿತತೆ ಇತ್ತು. ಹಲಾಲ್ ಮಾಂಸವು ಕೆರಿಬಿಯನ್ ದ್ವೀಪಗಳಲ್ಲಿ ಲಭ್ಯವಿದೆ. ಆದರೆ ಎಲ್ಲಾ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಅದನ್ನು ತಮ್ಮ ಮೆನುಗಳಲ್ಲಿ ಸೇರಿಸುತ್ತವೆಯೇ ಎಂಬುದು ಖಚಿತವಾಗಿಲ್ಲ. ನಮ್ಮ ಹೋಟೆಲ್‌ನಲ್ಲಿ ಹಲಾಲ್ ಮಾಂಸ ಲಭ್ಯವಿಲ್ಲ, ಕೆಲವೊಮ್ಮೆ ನಾವೇ ಅಡುಗೆ ಮಾಡುತ್ತೇವೆ ಅಥವಾ ಕೆಲವೊಮ್ಮೆ ಹೊರಗೆ ಹೋಗುತ್ತೇವೆ ಎಂದು ಆಟಗಾರರೊಬ್ಬರು ತಿಳಿಸಿದ್ದಾರೆ.

"ನಾವು ಹಲಾಲ್ ಮಾಂಸದೂಟವನ್ನು ಸೇಂಟ್ ಲೂಸಿಯಾದಲ್ಲಿ ತಿಂದಿದ್ದೇವೆ. ಆದರೆ ಇದು ಎಲ್ಲಾ ಸ್ಥಳಗಳಲ್ಲಿ ಲಭ್ಯವಿಲ್ಲ. ಸ್ನೇಹಿತರೊಬ್ಬರು ಹಲಾಲ್ ಮಾಂಸವನ್ನು ನಮಗೆ ವ್ಯವಸ್ಥೆ ಮಾಡಿದ್ದು ಅದನ್ನು ನಾವೇ ಬೇಯಿಸಿ ತಿಂದೆವು ಎಂದು ಆಟಗಾರರೊಬ್ಬರು ತಿಳಿಸಿದರು. 2024ರ T20 ವಿಶ್ವಕಪ್‌ನಲ್ಲಿ ಸೂಪರ್ 8ರ ವೇಳಾಪಟ್ಟಿಯು ತೀವ್ರವಾಗಿದೆ. ತಂಡಗಳು ಮೂರು ವಿಭಿನ್ನ ದೇಶಗಳಲ್ಲಿ ಮೂರು ಪಂದ್ಯಗಳನ್ನು ಆಡುತ್ತವೆ. ಇದು ಒಂದು ದುಃಸ್ವಪ್ನವಾಗಿದ್ದು, ಗೆಲ್ಲಲು ಅಗತ್ಯವಿರುವ ಪಂದ್ಯಗಳ ನಡುವೆ ಒಂದು ದಿನದ ಪ್ರಯಾಣವನ್ನು ಒಳಗೊಂಡಿರುತ್ತದೆ. ಸೂಪರ್ 8ರ ಸಮಯದಲ್ಲಿ ವ್ಯವಸ್ಥಾಪನಾ ಸಮಸ್ಯೆಗಳು ಅಫ್ಘಾನಿಸ್ತಾನ ತಂಡದ ಇನ್ನೊಬ್ಬ ಸದಸ್ಯನು ವೇಳಾಪಟ್ಟಿಯು ಅವರ ಸಿದ್ಧತೆಗಳ ಮೇಲೆ ಪರಿಣಾಮ ಬೀರಿದೆ ಎಂದು ಒಪ್ಪಿಕೊಂಡರು.

ವಿಮಾನಗಳು ಮತ್ತು ತರಬೇತಿ ವೇಳಾಪಟ್ಟಿಗಳಿಗೆ ಸಂಬಂಧಿಸಿದಂತೆ ಅನಿಶ್ಚಿತತೆ ಇದೆ. ಕೊನೆಯ ಗಳಿಗೆಯಲ್ಲಿ ನಮಗೆ ಇದರ ಬಗ್ಗೆ ತಿಳಿಸಲಾಗುತ್ತದೆ. ಕೆರಿಬಿಯನ್‌ನಲ್ಲಿ ಬೇರೆಡೆ ಉಂಟಾಗಬಹುದಾದ ವ್ಯವಸ್ಥಾಪನಾ ಸವಾಲುಗಳನ್ನು ಗಣನೆಗೆ ತೆಗೆದುಕೊಂಡು ಸಂಘಟಕರು ತಮ್ಮ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು. ಸೂಪರ್ 8 ರ ತಮ್ಮ ಮೊದಲ ಪಂದ್ಯದಲ್ಲಿ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಭಾರತದ ವಿರುದ್ಧ 47 ರನ್‌ಗಳಿಂದ ಸೋಲು ಅನುಭವಿಸಿದೆ. ಜೂನ್ 23ರಂದು ಬಲಿಷ್ಠ ಆಸ್ಟ್ರೇಲಿಯದ ವಿರುದ್ಧ ಎರಡನೇ ಪಂದ್ಯವನ್ನಾಡಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT