ಸೆಮೀಸ್ ಗೆ ಇಂಗ್ಲೆಂಡ್ ಲಗ್ಗೆ 
ಕ್ರಿಕೆಟ್

ICC T20 World Cup 2024: USA ವಿರುದ್ಧ 10 ವಿಕೆಟ್ ಭರ್ಜರಿ ಜಯ, ಸೆಮೀಸ್ ಗೆ ಇಂಗ್ಲೆಂಡ್ ಲಗ್ಗೆ!

ಬಾರ್ಬಡೋಸ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ನೀಡಿದ 116 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ 117 ರನ್ ಗಳಿಸಿ 10 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

ಬಾರ್ಬಡೋಸ್​: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಇಂಗ್ಲೆಂಡ್ ತಂಡ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಮೂಲಕ ಸೆಮಿ ಫೈನಲ್ ಗೆ ಅಧಿಕೃತವಾಗಿ ಲಗ್ಗೆ ಇರಿಸಿದೆ.

ಬಾರ್ಬಡೋಸ್​ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಅಮೆರಿಕ ನೀಡಿದ 116 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ 117 ರನ್ ಗಳಿಸಿ 10 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

ಇಂಗ್ಲೆಂಡ್ ಪರ ಜಾಸ್ ಬಟ್ಲರ್ ಅಜೇಯ 83ರನ್ ಗಳಿಸಿದರೆ, ಫಿಲಿಪ್ ಸಾಲ್ಟ್ 25ರನ್ ಗಳಿಸಿದರು. ಆ ಮೂಲಕ ಕೇವಲ 9.4 ಓವರ್ ನಲ್ಲಿ ಇಂಗ್ಲೆಂಡ್ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಆ ಮೂಲಕ ಇಂಗ್ಲೆಂಡ್ ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಧಿಕೃತವಾಗಿ ಸೆಮಿ ಫೈನಲ್ ಪ್ರವೇಶಿಸಿದೆ.

ಕಮರಿದ ಯುಎಸ್ಎ ಕನಸು

ಅಂತೆಯೇ ಈ ಪಂದ್ಯದ ಹೀನಾಯ ಸೋಲಿನ ಮೂಲಕ ಸೆಮೀಸ್ ಗೇರುವ ಅಮೆರಿಕ ತಂಡದ ಕನಸು ಕಮರಿದ್ದು, ಈ ಹಂತದಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದಾಗ್ಯೂ ಮೊಟ್ಟ ಮೊದಲ ಬಾರಿಗೆ ವಿಶ್ವ ಕಪ್​ ವೇದಿಕೆ ಪ್ರವೇಶಿಸಿದ್ದ ಯುಎಸ್​ಎ ತಂಡ ಸೂಪರ್ 8 ಹಂತಕ್ಕೇರುವ ಮೂಲಕ ಮೂಲಕ ಅವಿಸ್ಮರಣೀಯ ಸಾಧನೆ ಮಾಡಿದೆ. ಅತ್ತ ಇಂಗ್ಲೆಂಡ್ ತಂಡ ಆಡಿರುವ ಮೂರರಲ್ಲಿ 2 ಪಂದ್ಯಗಳನ್ನು ಗೆದ್ದು ಸದ್ಯ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಯುಎಸ್​​ಎ ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಯುಎಸ್​ಎ ತಂಡ ಉತ್ತಮವಾಗಿ ಆಡಲಿಲ್ಲ. ಅಂಡ್ರೀಸ್ ಗೌಸ್​ 8 ರನ್​ಗೆ ವಿಕೆಟ್ ಒಪ್ಪಿಸಿದರೆ ಸ್ಟೀವನ್ ಟೈಲರ್​ 12 ರನ್​ಗಳಿಗೆ ಸೀಮಿತಗೊಂಡರು. ನಿತೀಶ್ ಕುಮಾರ್​ 30 ರನ್ ಬಾರಿಸಿದರೆ ಆ್ಯರೋನ್ ಜೋನ್ಸ್​ 10 ರನ್​ಗೆ ಔಟಾದರು. ಕೋರಿ ಆ್ಯಂಡರ್ಸನ್​​ 29 ರನ್ ಬಾರಿಸಿದರೆ ಮಿಲಿಂದ್ ಕುಮಾರ್ 4 ರನ್​ಗೆ ವಿಕೆಟ್​ ಒಪ್ಪಿಸಿದರು. ಹರ್ಮೀತ್​ ಸಿಂಗ್​ 21 ರನ್​ಗೆ ಔಟಾದಾಗ ಯುಎಸ್​ಎ 115 ರನ್​ಗೆ 6 ವಿಕೆಟ್ ಕಳೆದುಕೊಂಡಿತ್ತು. ಆದರೆ, ಅ ಬಳಿಕ ಬಂದ ಎಲ್ಲ ಬ್ಯಾಟರ್​​ಗಳು ಶೂನ್ಯಕ್ಕೆ ಔಟಾದರು. ಕ್ರಿಸ್​ ಜೋರ್ಡಾನ್​ ಸತತ ನಾಲ್ಕು ವಿಕೆಟ್ ಪಡೆದರು. ಹೀಗಾಗಿ ಯುಎಸ್​ಎ 115 ರನ್​ಗಳಿಗೆ ಆಲ್​ಔಟ್​ ಆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT