ರೋಹಿತ್ ಶರ್ಮಾ ದಾಖಲೆ 
ಕ್ರಿಕೆಟ್

ICC T20 World Cup 2024: ಆಸ್ಟ್ರೇಲಿಯಾ ವಿರುದ್ಧ Rohit Sharma ದಾಖಲೆಗಳ ಸುರಿಮಳೆ; ಕ್ರಿಸ್ ಗೇಯ್ಲ್, ಯುವಿ, ಕೊಹ್ಲಿ, ಬಾಬರ್ ಅಜಂ ರೆಕಾರ್ಡ್ ಗಳೂ ಪತನ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಇಂದಿನ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಸೆಂಟ್ ಲೂಸಿಯಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಇಂದಿನ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ರೋಹಿತ್ ಶರ್ಮಾ ಕೇವಲ 41 ಎಸೆತಗಳನ್ನು ಎದುರಿಸಿ 8 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 92 ರನ್ ಕಲೆಹಾಕಿದರು. ಕೇವಲ 8 ರನ್ ಗಳ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು.

ರೋಹಿತ್ ಶರ್ಮಾ ದಾಖಲೆಗಳ ಪಟ್ಟಿ

ಟಿ20ಯಲ್ಲಿ ಅತಿ ಹೆಚ್ಚು ರನ್; ಬಾಬರ್ ಅಜಂ ದಾಖಲೆ ಪತನ

ರೋಹಿತ್ ಶರ್ಮಾ ಇಂದಿನ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರು ಇತ್ತೀಚೆಗೆ ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಆ ಮೂಲಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದು, ಬಾಬರ್‌ ಅಜಂ ಈವರೆಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 4,145 ರನ್‌ ಕಲೆಹಾಕಿದ್ದು, ರೋಹಿತ್ ಶರ್ಮಾ 4,165 ರನ್ ಕಲೆಹಾಕಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತೀಯ ನಾಯಕನ ಗರಿಷ್ಠ ಸ್ಕೋರ್

ಇಂದಿನ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ಮೊದಲ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ 2021 ರಲ್ಲಿ ದುಬೈನಲ್ಲಿ ಪಾಕಿಸ್ತಾನದ ವಿರುದ್ಧ 57 ರನ್‌ ಕಲೆಹಾಕಿ ಈ ಕೀರ್ತಿಗೆ ಭಾಜನರಾಗಿದ್ದರು. ಇದೀಗ ರೋಹಿತ್ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಂತೆಯೇ ಟಿ20 ವಿಶ್ವಕಪ್ ನಲ್ಲಿ ಪಂದ್ಯವೊಂದರಲ್ಲಿ ನಾಯಕ ಕಲೆಹಾಕಿದ 2ನೇ ಗರಿಷ್ಠ ರನ್ ಎಂಬ ಕೀರ್ತಿಗೂ ಈ ಇನ್ನಿಂಗ್ಸ್ ಪಾತ್ರವಾಗಿದೆ. ಈ ಹಿಂದೆ 2010ರಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಯ್ಲ್ 98ರನ್ ಕಲೆಹಾಕಿದ್ದರು.

Highest individual scores by a capatin in T20 World Cups

  • 98 C Gayle vs Ind Bridgetown 2010

  • 92 Rohit Sharma vs Aus Gros Islet 2024

  • 88 C Gayle vs Aus The Oval 2009

  • 85 K Williamson vs Aus Dubai 2021

ಟಿ20 ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಭಾರತೀಯ

ರೋಹಿತ್ ಶರ್ಮಾ ಇಂದು 8 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದ್ದು ಇದು ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ಭಾರತೀಯ ಆಟಗಾರ ಸಿಡಿಸಿದ ಗರಿಷ್ಠ ಸಿಕ್ಸರ್ ಗಳಾಗಿವೆ. ಈ ಹಿಂದೆ 2007ರ ಟಿ 20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದಾಖಲಿಸಿದ ಯುವರಾಜ್ ಸಿಂಗ್ ಅವರ ಏಳು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದು ಭಾರತದ ಪರ ಟಿ20 ವಿಶ್ವಕಪ್ ನಲ್ಲಿ ದಾಖಲಾದ ಆಟಗಾರನೊಬ್ಬನ ಗರಿಷ್ಠ ಸಿಕ್ಸರ್ ಗಳಾಗಿದ್ದವು. ಇದೀಗ ಆ ದಾಖಲೆಯನ್ನೂ ರೋಹಿತ್ ಪತನ ಮಾಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಮೂರನೇ ವೇಗದ ಅರ್ಧಶತಕ

ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕ ಸಿಡಿಸಿದರು. ಆ ಮೂಲಕ T20 ವಿಶ್ವಕಪ್‌ನಲ್ಲಿ ಭಾರತದ ಪರ ಮೂರನೇ ವೇಗದ ಅರ್ಧಶತಕವನ್ನು ದಾಖಲಿಸಿದರು. 2007ರಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಅವರ 12 ಎಸೆತಗಳಲ್ಲಿ ಅರ್ಧಶತಕ ಮತ್ತು 2021 ರಲ್ಲಿ ಸ್ಕಾಟ್ಲೆಂಡ್ ವಿರುದ್ಧ KL ರಾಹುಲ್ ಅವರ 18 ಎಸೆತಗಳ ಅರ್ಧಶತಕ ಸಿಡಿಸಿದ್ದರು.

ಟಿ20ಯಲ್ಲಿ 200 ಸಿಕ್ಸರ್ ಬಾರಿಸಿದ ಮೊದಲ ಆಟಗಾರ

T20I ಗಳಲ್ಲಿ 200 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾದರು. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾರ್ಟಿನ್ ಗಪ್ಟಿಲ್ 2ನೇ ಸ್ಥಾನದಲ್ಲಿದ್ದು ಅವರು 173 ಸಿಕ್ಸರ್ ಸಿಡಿಸಿದ್ದಾರೆ. ಪ್ರಸ್ತುತ ಈ ಪಟ್ಟಿಯಲ್ಲಿ ರೋಹಿತ್ ದಾಖಲೆಯ ಸನಿಹಕ್ಕೂ ಯಾರೂ ಕೂಡ ಬರುವಂತೆ ಕಾಣುತ್ತಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್‌ಗಳು

T20 ವಿಶ್ವಕಪ್‌ನಲ್ಲಿ ರೋಹಿತ್ ಎರಡನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದು, ಜೋಸ್ ಬಟ್ಲರ್ ಮತ್ತು ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ ಟಿ20 ವಿಶ್ವಕಪ್ ನಲ್ಲಿ 42 ಇನ್ನಿಂಗ್ಸ್‌ಗಳಲ್ಲಿ 48 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಅವರು 31 ಇನ್ನಿಂಗ್ಸ್‌ಗಳಲ್ಲಿ 63 ಸಿಕ್ಸರ್‌ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

ಟಿ20 ವಿಶ್ವಕಪ್ ನಲ್ಲಿ ಭಾರತದ ಪರ 2ನೇ ವೈಯುಕ್ತಿಕ ಗರಿಷ್ಠ ಸ್ಕೋರ್

ಇಂದು ರೋಹಿತ್ ಶರ್ಮಾ ಸಿಡಿಸಿದ 92 ರನ್ ಗಳ ಇನ್ನಿಂಗ್ಸ್ ಟಿ20 ವಿಶ್ವಕಪ್ ನಲ್ಲಿ ಭಾರತದ ಪರ ದಾಖಲಾದ 2ನೇ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸುರೇಶ್ ರೈನ್ 101 ರನ್ ಗಳಿಸಿದ್ದರು. ಇದು ಭಾರತ ಪರ ಟಿ20 ವಿಶ್ವಕಪ್ ನಲ್ಲಿ ದಾಖಲಾದ ಮೊದಲ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

Highest individual scores for India in T20 World Cups

  • 101 S Raina vs SA Gros Islet 2010

  • 92 Rohit Sharma vs Aus Gros Islet 2024

  • 89* V Kohli vs WI Wankhede 2016

  • 82* V Kohli vs Aus Mohali 2022

  • 82* V Kohli vs Pak Melbourne 2022

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಾಳಿ ವಿರುದ್ಧ ಅತಿ ಹೆಚ್ಚು ಸಿಕ್ಸರ್‌ಗಳು

ರೋಹಿತ್ ಶರ್ಮಾ ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಬ್ಬ ಎದುರಾಳಿ ಅಥವಾ ಒಂದು ತಂಡದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಬರೆದಿದ್ದಾರೆ. ಅವರು ಈಗ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್, ODI ಮತ್ತು T20I ಗಳಲ್ಲಿ ಒಟ್ಟು 132 ಸಿಕ್ಸರ್‌ಗಳನ್ನು ಹೊಡೆದಿದ್ದು, ಈ ಪಟ್ಟಿಯಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ರನ್ನು ಹಿಂದಿಕ್ಕಿದ್ದಾರೆ. ಕ್ರಿಸ್ ಗೇಯ್ಲ್ ಇಂಗ್ಲೆಂಡ್ ವಿರುದ್ಧ 130 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.

Most sixes vs an opponent in all International cricket

  • 132* Rohit Sharma vs Aus

  • 130 Chris Gayle vs Eng

  • 88 Rohit Sharma vs WI

  • 87 Chris Gayle vs NZ

  • 86 Shahid Afridi vs SL

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಸಿಕ್ಸರ್‌

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ, ಕ್ರಿಸ್ ಗೇಲ್ ಮತ್ತೊಂದು ದಾಖಲೆ ಮುರಿಯುವ ಸನ್ನಾಹದಲ್ಲಿದ್ದು, ಅವರ 529 ಸಿಕ್ಸರ್‌ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದಾಗ್ಯೂ, ಈ ಸಾಧನೆ ಮಾಡಲು ಗೇಲ್ 506 ಇನ್ನಿಂಗ್ಸ್ ತೆಗೆದುಕೊಂಡರೆ, ರೋಹಿತ್ ಶರ್ಮಾ ಕೇವಲ 349 ಇನ್ನಿಂಗ್ಸ್‌ಗಳಲ್ಲಿ ಅದನ್ನು ಸರಿಗಟ್ಟಿದರು. ರೋಹಿತ್ ಈಗಾಗಲೇ ಎಲ್ಲಾ T20I ಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆರಂಭಿಕ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT