''ಡಕ್ವರ್ತ್ ಲೂಯಿಸ್'' ನಿಯಮದ ಸಹ ರೂವಾರಿ Frank Duckworth 
ಕ್ರಿಕೆಟ್

ಕ್ರಿಕೆಟ್ ನ ''ಡಕ್ವರ್ತ್ ಲೂಯಿಸ್'' ನಿಯಮದ ಸಹ ರೂವಾರಿ Frank Duckworth​​ ನಿಧನ

ಕ್ರಿಕೆಟ್ ಪಂದ್ಯಗಳಲ್ಲಿ ಮಳೆಯಿಂದ ಪಂದ್ಯ ತಡವಾದರೆ ಅಳವಡಿಸುವ ಡಕ್ವರ್ತ್ ಲೂಯಿಸ್ ನಿಯಮದ ಅನ್ವೇಷಕರಲ್ಲಿ ಒಬ್ಬರಾದ Frank Duckworth​​ ನಿಧನರಾಗಿದ್ದಾರೆ.

ಲಂಡನ್: ಕ್ರಿಕೆಟ್ ಪಂದ್ಯಗಳಲ್ಲಿ ಮಳೆಯಿಂದ ಪಂದ್ಯ ತಡವಾದರೆ ಅಳವಡಿಸುವ ಡಕ್ವರ್ತ್ ಲೂಯಿಸ್ ನಿಯಮದ ಅನ್ವೇಷಕರಲ್ಲಿ ಒಬ್ಬರಾದ Frank Duckworth​​ ನಿಧನರಾಗಿದ್ದಾರೆ.

ಹೌದು... ''ಡಕ್ವರ್ತ್ ಲೂಯಿಸ್''ನಿಯಮದ ಸಹ ಕರ್ತೃ ಇಂಗ್ಲಿಷ್ ಸಂಖ್ಯಾಶಾಸ್ತ್ರಜ್ಞ ಫ್ರಾಂಕ್ ಡಕ್ವರ್ತ್ (84) ಮಂಗಳವಾರ ನಿಧನ ಹೊಂದಿದ್ದಾರೆ. ಡಕ್ವರ್ತ್​ ಅವರು ಜೂನ್​ 21ಕ್ಕೆ ಮೃತಪಟ್ಟಿದ್ದು, ಆದರೆ ಈ ವಿಷಯ ತಡವಾಗಿ ಅಂದರೆ ಜೂನ್​ 25ರಂದು ಪ್ರಕಟಗೊಂಡಿದೆ ಎನ್ನಲಾಗಿದೆ.

ಮಳೆ ಪೀಡಿತ ಕ್ರಿಕೆಟ್ ಪಂದ್ಯಗಳ ಫಲಿತಾಂಶಗಳನ್ನು ನಿರ್ಧರಿಸಲು ಡಕ್ವರ್ತ್ ಮತ್ತು ಸಹ ಸಂಖ್ಯಾಶಾಸ್ತ್ರಜ್ಞ ಟೋನಿ ಲೂಯಿಸ್ ರೂಪಿಸಿದ ಡಕ್ವರ್ತ್-ಲೂಯಿಸ್ ಪ್ರಸ್ತುತ ಚಾಲ್ತಿಯಲ್ಲಿದೆ. ಐಸಿಸಿ ಅದಕ್ಕೆ ಮಾನ್ಯತೆ ನೀಡಿದೆ.

ಈ ವಿಧಾನವನ್ನು ಮೊದಲ ಬಾರಿಗೆ 1997 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಳಸಲಾಯಿತು. 2001 ರಲ್ಲಿ ಮಳೆಯಿಂದ ಮೊಟಕುಗೊಂಡ ಪಂದ್ಯಗಳಲ್ಲಿ ಪರಿಷ್ಕೃತ ಗುರಿ ನಿಗದಿಪಡಿಸುವ ಪ್ರಮಾಣಿತ ವಿಧಾನವಾಗಿ ಐಸಿಸಿ ಡಿಎಲ್​ಎಸ್​​ನ್ನು ಅಳವಡಿಸಿಕೊಂಡಿತು.

ಡಕ್ವರ್ತ್ ಮತ್ತು ಲೂಯಿಸ್​ ಅವರ ನಿವೃತ್ತಿಯ ನಂತರ ಈ ವಿಧಾನವನ್ನು ಡಕ್ವರ್ತ್-ಲೂಯಿಸ್-ಸ್ಟರ್ನ್ ವಿಧಾನ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಬಳಕೆಯಲ್ಲಿರುವ ನಿಯಮಕ್ಕೆ ಆಸ್ಟ್ರೇಲಿಯಾದ ಸಂಖ್ಯಾಶಾಸ್ತ್ರಜ್ಞ ಸ್ಟೀವನ್ ಸ್ಟರ್ನ್ ಕೆಲವು ಮಾರ್ಪಾಡುಗಳನ್ನು ಮಾಡಿದ್ದಾರೆ.

ಡಕ್ವರ್ತ್ ಮತ್ತು ಲೂಯಿಸ್ ಇಬ್ಬರಿಗೂ ಜೂನ್ 2010 ರಲ್ಲಿ ಎಂಬಿಇ (ಮೆಂಬರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್) ಗೌರವ ನೀಡಲಾಗಿದೆ. ಡಿಎಲ್ಎಸ್ ವಿಧಾನವು ಸಂಕೀರ್ಣ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯಾಗಿದೆ. ಇದು ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲು ಉಳಿದಿರುವ ವಿಕೆಟ್​ಗಳು ಮತ್ತು ಕಳೆದುಕೊಂಡ ಓವರ್​ನಂಥ ಅನೇಕ ಅಂಶಗಳನ್ನು ನೀಡುತ್ತದೆ.

ಆಫ್ಘಾನಿಸ್ತಾನ ತಂಡಕ್ಕೂ ನೆರವಾದ ''ಡಕ್ವರ್ತ್ ಲೂಯಿಸ್''ನಿಯಮ

ಇನ್ನು ಮಂಗಳವಾರ ಮುಂಜಾನೆ ನಡೆದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ತಂಡ ಐತಿಹಾಸಿಕ ಗೆಲುವು ದಾಖಲಿಸಿತ್ತು. ಪಂದ್ಯದ ವೇಳೆ ಮಳೆ ಬಂದ ಕಾರಣ ಡಕ್ವರ್ತ್​ (Frank Duckworth) ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶಕ್ಕೆ ಡಕ್ವರ್ತ್​ ನಿಯಮದ ಪ್ರಕಾರ 19 ಓವರ್​ಗಳಿಗೆ 114 ರನ್ ಮಾಡುವ ಗುರಿ ನೀಡಲಾಗಿತ್ತು.

ಆದರೆ ಬಾಂಗ್ಲಾದೇಶ ತಂಡ 8 ರನ್​ಗಳಿಂದ ಸೋತಿತ್ತು. ಇಲ್ಲಿ ಆಫ್ಘಾನಿಸ್ತಾನ ತಂಡಕ್ಕೆ ಇದೇ ಡಕ್ವರ್ತ್ ಲೂಯಿಸ್​ ನಿಯಮ ನೆರವಾಗಿತ್ತು ಎಂಬುದೇ ಕಾಕತಾಳೀಯ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT