ಸೆಂಟ್ ವಿನ್ಸೆಂಟ್: ಕಿಂಗ್ಸ್ ಟೌನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಸಿಸಿ T-20 World Cup ಟೂರ್ನಿಯ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ರನ್ ಗಳಿಂದ ಸೋಲಿಸಿದ ಅಫ್ಘಾನಿಸ್ತಾನ ಚೊಚ್ಚಲ ಬಾರಿಗೆ ಸೆಮಿಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಬಾಂಗ್ಲಾದೇಶ ಪರ ಆರಂಭಿಕ ಆಟಗಾರರಾದ ರೆಹಮನುಲ್ಲಾ ಗುರ್ಬಾಜ್ 43, ಇಬ್ರಾಹಿಂ ಜರ್ದಾನ್ 18, ರಶೀದ್ ಖಾನ್ 19 ರನ್ ಗಳಿಸಿದರು. ಉಳಿದ ಆಟಗಾರರು ಒಂದಂಕಿ ದಾಟುವಲ್ಲಿ ವಿಫಲರಾದರು. ಬಾಂಗ್ಲಾ ಪರ ರಿಶದ್ ಹುಸೈನ್ 3 ವಿಕೆಟ್ ಪಡೆದರೆ, ಟಾಸ್ಕಿನ್ ಅಹ್ಮದ್ ಹಾಗೂ ಶಕಿಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆದರು.
ಅಫ್ಘಾನಿಸ್ತಾನ ನೀಡಿದ 106 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಬಾಂಗ್ಲಾ ದೇಶ ಪರ ಲಿಟ್ಟನ್ ದಾಸ್ ಅಜೇಯ 54, ಸೌಮ್ಯ ಸರ್ಕಾರ್ 10, ಟೌಡಿ ರಿಡಾಯ್ 14 ರನ್ ಗಳಿಸಿದರು. ಉಳಿದ ಆಟಗಾರರು 6ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 17.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 105 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಗೆ ಡಿಎಲ್ ಎಸ್ ನಿಯಮದಂತೆ ಅಫ್ಘಾನಿಸ್ತಾನ ಗೆಲುವು ಸಾಧಿಸುವುದರೊಂದಿಗೆ ಸೆಮಿಫೈನಲ್ ಪ್ರವೇಶಿಸಿತು.
ಅಪ್ಘನ್ ಪರ ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ತಲಾ 4 ವಿಕೆಟ್ ಕಬಳಿಸಿದರು. ನವಿನ್ ಉಲ್ ಹಕ್ ಪಂದ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಜೂನ್ 27 ರಂದು ದಕ್ಷಿಣ ಆಫ್ರಿಕಾ- ಅಫ್ಘಾನಿಸ್ತಾನ ಮತ್ತು ಭಾರತ-ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯ ನಡೆಯಲಿದೆ.