ಇಂಗ್ಲೆಂಡ್ ನ ವೇಗದ ಬೌಲರ್ ಒಲ್ಲಿ ರಾಬಿನ್ಸನ್ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ 43 ರನ್‌ಗಳನ್ನು ಚಚ್ಚಿಸಿಕೊಳ್ಳುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಓವರ್ ಬೌಲಿಂಗ್ ಮಾಡುವ ಅನಗತ್ಯ ದಾಖಲೆಯನ್ನು ಬರೆದಿದ್ದಾರೆ.
2021ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಬಲಗೈ ಬೌಲರ್ ರಾಬಿನ್ಸನ್ ಇಂಗ್ಲೆಂಡ್ ಪರ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಇಲ್ಲಿ ಹೋವ್‌ನಲ್ಲಿ ಸಸೆಕ್ಸ್‌ಗಾಗಿ ಆಡುತ್ತಿರುವಾಗ ಲೀಸೆಸ್ಟರ್‌ಶೈರ್ ವಿರುದ್ಧ ಡಿವಿಷನ್ ಎರಡು ಪಂದ್ಯದಲ್ಲಿ ತಮ್ಮ ಓವರ್ ಅನ್ನು ಪೂರ್ಣಗೊಳಿಸಲು ಒಟ್ಟು ಒಂಬತ್ತು ಎಸೆತಗಳನ್ನು ಬೌಲ್ ಮಾಡಿ 43 ರನ್ ಹೊಡೆಸಿಕೊಂಡಿದ್ದಾರೆ. ಲೀಸೆಸ್ಟರ್‌ಶೈರ್‌ನ ಲೂಯಿಸ್ ಕಿಂಬರ್ ರಾಬಿನ್ಸನ್ ಎಸೆತದಲ್ಲಿ ಐದು ಸಿಕ್ಸರ್ (ಮೂರು ನೋಬಾಲ್), ಮೂರು ಬೌಂಡರಿ ಮತ್ತು ಒಂದು ರನ್ ಬಾರಿಸಿ 43 ರನ್ ಗಳಿಸಿದರು. ಇನ್ನು ಲೀಸೆಸ್ಟರ್‌ಶೈರ್ ಗೆ ಸಸೆಕ್ಸ್ 446 ರನ್‌ಗಳ ಗುರಿ ನೀಡಿತು. ರಾಬಿನ್ಸನ್ ಅವರ ಈ ಓವರ್ ಮುಗಿದ ನಂತರ, ಕಿಂಬರ್ 65 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿದ್ದರು. ಇನ್ನೊಂದು ತುದಿಯಲ್ಲಿ ಬೆನ್ ಕಾಕ್ಸ್ ಬ್ಯಾಟಿಂಗ್ ಮಾಡುತ್ತಿದ್ದರು.
ಇದು ರಾಬಿನ್ಸನ್ ಅವರ 13ನೇ ಓವರ್‌ನಲ್ಲಿ ನೋ ಬಾಲ್‌ನಲ್ಲಿ 6, 6, ನೋ ಬಾಲ್‌ನಲ್ಲಿ 4, 6, 4, 6, ನೋ ಬಾಲ್‌ನಲ್ಲಿ 4, 6 ಮತ್ತು ಒಂದು ರನ್ ಗಳಿಸಿದರು. ಈ ಮೂಲಕ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ನೀಡಿದ ದಾಖಲೆಯನ್ನೂ ರಾಬಿನ್ಸನ್ ಮುರಿದರು. ರಾಬಿನ್ಸನ್ ಮಾಜಿ ಟೆಸ್ಟ್ ವೇಗದ ಬೌಲರ್ ಅಲೆಕ್ಸ್ ಟ್ಯೂಡರ್ ಅವರ 38 ರನ್ಗಳನ್ನು ಕೊಟ್ಟ ದಾಖಲೆಯನ್ನು ಹಿಂದಿಕ್ಕಿದರು.