ಗೆಲುವಿನ ಖಾತೆ ತೆರೆದ ಗುಜರಾತ್ ಜೈಂಟ್ಸ್ 
ಕ್ರಿಕೆಟ್

WPL 2024: RCBಗೆ ಮತ್ತೊಂದು ಸೋಲು, ಕೊನೆಗೂ ಗೆಲುವಿನ ಖಾತೆ ತೆರೆದ ಗುಜರಾತ್ ಜೈಂಟ್ಸ್, ಸೋತರೂ ಅಂಕಪಟ್ಟಿಯಲ್ಲಿ ಬದಲಾವಣೆ ಇಲ್ಲ!

ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲು ಕಂಡಿದ್ದು, ಈ ವರೆಗೂ ಟೂರ್ನಿಯಲ್ಲಿ ಗೆಲುವೇ ಕಾಣದ ಗುಜರಾತ್ ತಂಡ ಆರ್ ಸಿಬಿ ವಿರುದ್ಧ 19 ರನ್ ಗಳ ಜಯ ದಾಖಲಿಸಿದೆ.

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲು ಕಂಡಿದ್ದು, ಈ ವರೆಗೂ ಟೂರ್ನಿಯಲ್ಲಿ ಗೆಲುವೇ ಕಾಣದ ಗುಜರಾತ್ ತಂಡ ಆರ್ ಸಿಬಿ ವಿರುದ್ಧ 19 ರನ್ ಗಳ ಜಯ ದಾಖಲಿಸಿದೆ.

ನಾಯಕಿ ಬೆತ್ ಮೂನಿ(85*) ಮತ್ತು ಲಾರಾ ವೊಲ್ವಾರ್ಡ್ಟ್(76) ಅವರ ಆಕರ್ಷಕ ಅರ್ಧಶತಕ ನೆರವಿನಿಂದ ಗುಜರಾತ್​ ಜೈಂಟ್ಸ್(Gujarat Giants)​ ತಂಡ ಬಲಿಷ್ಠ ಆರ್​ಸಿಬಿ(Royal Challengers Bangalore) ವಿರುದ್ಧ 19 ರನ್​ಗಳ ಗೆಲುವು ಸಾಧಿಸಿದ್ದು, ಇದು ಟೂರ್ನಿಯಲ್ಲಿ ತಂಡದ ಮೊದಲ ಗೆಲುವಾಗಿದೆ.

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಗುಜರಾತ್​ ಆರಂಭಿಕ ಆಟಗಾರ್ತಿಯರಾದ ಬೆತ್ ಮೂನಿ ಮತ್ತು ಲಾರಾ ವೊಲ್ವಾರ್ಡ್ಟ್ ಅವರ ಆಕ್ರಮಣಕಾರಿ ಬ್ಯಾಟಿಂಗ್​ನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 199 ರನ್ ಗಳಿಸಿ ಆರ್ ಸಿಬಿಗೆ ಬೃಹತ್ ಗುರಿ ನೀಡಿತು. ಈ ಮೊತ್ತವನ್ನು ಬೆನ್ನು ಹತ್ತಿದ ಆರ್ ಸಿಬಿ ಒಂದು ಹಂತದ ವರೆಗೆ ದಿಟ್ಟ ರೀತಿಯಲ್ಲಿ ಬೆನ್ನಟ್ಟಿತ್ತು. ಆದರೆ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ತಂಡಕ್ಕೆ ದುಬಾರಿಯಾಯಿತು.

ಜಾರ್ಜಿಯಾ ವೇರ್ಹಾಮ್, ಸೋಫಿ ಮೊಲಿನೆಕ್ಸ್ ಮತ್ತು ಸಿಮ್ರಾನ್ ಬಹದ್ದೂರ್ ರನೌಟ್ ತಂಡಕ್ಕೆ ದುಬಾರಿಯಾಗ ತಂಡ ಸೋಲಿನತ್ತ ಸರಿಯುವಂತೆ ಮಾಡಿತು. ಅಂತಿಮವಾಗಿ ಆರ್ ಸಿಬಿ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಈ ಗೆಲುವಿನ ಮೂಲಕ ಸತತ 4 ಸೋಲಿನಿಂದ ಕಂಗೆಟ್ಟಿದ್ದ ಗುಜರಾತ್​ ಜೈಂಟ್ಸ್ ಮೊದಲ ಗೆಲುವಿನ ನಗೆ ಬೀರಿತು.

ಸೋತರೂ ಅಂಕಪಟ್ಟಿಯಲ್ಲಿ ಬದಲಾವಣೆ ಇಲ್ಲ!

ಇನ್ನು ಇಂದಿನ ಪಂದ್ಯವನ್ನು ಸೋತಿರುವ ಆರ್ ಸಿಬಿ ಅಂಕ ಪಟ್ಟಿಯಲ್ಲಿ ತನ್ನ 2ನೇ ಸ್ಥಾನದಲ್ಲೇ ಮುಂದುವರೆದಿದೆ. 6 ಪಂದ್ಯಗಳಲ್ಲಿ 3 ಸೋಲು, 3 ಗೆಲುವಿನೊಂದಿಗೆ 6 ಅಂಕ ಗಳಿಸಿರುವ ಆರ್ ಸಿಬಿ +0.038 ನೆಟ್ ರನ್ ರೇಟ್ ನೊಂದಿಗೆ 2ನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT