ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ 
ಕ್ರಿಕೆಟ್

5ನೇ ಟೆಸ್ಟ್: ಅಶ್ವಿನ್ ಗೆ ಐದು ವಿಕೆಟ್, ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ!

ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ ಇನ್ನಿಂಗ್ಸ್ ಮತ್ತು 64 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ ಇನ್ನಿಂಗ್ಸ್ ಮತ್ತು 64 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಹೌದು.. ಅಂತಿಮ ಟೆಸ್ಟ್(India vs England 5th Test)​ ಪಂದ್ಯದಲ್ಲಿ ಆತಿಥೇಯ ಭಾರತ ಇನಿಂಗ್ಸ್​ ಮತ್ತು 64 ರನ್​ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 4-1ರೊಂದಿಗೆ ಮುಕ್ತಾಯಗೊಳಿಸಿದೆ.

ಗುರುವಾರ ಆರಂಭಗೊಂಡ ಈ ಟೆಸ್ಟ್​ ಪಂದ್ಯ ಕೇವಲ ಮೂರು ದಿನಕ್ಕೆ ಅಂತ್ಯಕಂಡಿದೆ. ಮೂರನೇ ದಿನವಾದ ಶನಿವಾರ 8 ವಿಕೆಟ್​ಗೆ 473 ರನ್​ ಗಳಿಸಿದ್ದಲ್ಲಿಂದ ಬ್ಯಾಟಿಂಗ್​ ಮುಂದುವರಿಸಿ ಭಾರತ ಕೇವಲ ನಾಲ್ಕು ರನ್​ ಗಳಿಸಲಷ್ಟೇ ಶಕ್ತವಾಗಿ 477ರನ್​ಗೆ ಆಲೌಟ್​ ಆಯಿತು.

2ನೇ ಇನ್ನಿಂಗ್ಸ್ ನಲ್ಲೂ ಕಾಡಿದ ಅಶ್ವಿನ್

259 ರನ್​ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್​ಗೆ 100ನೇ ಟೆಸ್ಟ್​ ಆಡಿದ ಆರ್​.ಅಶ್ವಿನ್​ ಅವಳಿ ಆಘಾತ ನೀಡಿದರು. ಜಾಕ್​ ಕ್ರಾಲಿ ಅವರನ್ನು ಶೂನ್ಯಕ್ಕೆ ಮತ್ತು ಬೆನ್​ ಡಕೆಟ್​ ಅವರನ್ನು ಕೇವಲ 2 ರನ್​ಗೆ ಔಟ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಆ ಬಳಿಕ ಕುಲ್​ದೀಪ್​ ಯಾದವ್​ ಕೂಡ ತಮ್ಮ ಸ್ಪಿನ್ ಜಾದು ಮೂಲಕ 2 ವಿಕೆಟ್​ ಕಿತ್ತರೆ, ಜಸ್ ಪ್ರೀತ್ ಬುಮ್ರಾ ಕೂಡ 2 ಮತ್ತು ಜಡೇಜಾ 1 ವಿಕೆಟ್ ಪಡೆದು ಆಂಗ್ಲರನ್ನು ಹಡೆಮುರಿ ಕಟ್ಟಿದರು.

ಅಂತಿಮವಾಗಿ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 195 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 64 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ವ್ಯರ್ಥವಾದ ರೂಟ್​ ಏಕಾಂಗಿ ಹೋರಾಟ

ಒಂದೆಡೆ ಇಂಗ್ಲೆಂಡ್ ತಂಡದ ವಿಕೆಟ್ ಗಳು ಬೀಳುತ್ತಿದ್ದರೆ ಮತ್ತೊಂದೆಡೆ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಜೋರೂಟ್ ಏಕಾಂಗಿ ಹೋರಾಟ ನಡೆಸಿದ್ದರು. 84 ರನ್​ ಗಳಿಸಿದ ವೇಳೆ ಇವರ ವಿಕೆಟ್​ ಕೂಡ ಪತನಗೊಂಡಿತು. ಈ ವಿಕೆಟ್​ ಬೀಳುತ್ತಿದ್ದಂತೆ ಇಂಗ್ಲೆಂಡ್​ ಇನಿಂಗ್ಸ್​ ಕೂಡ ಮುಕ್ತಾಯಕಂಡಿತು. ಆರ್​.ಅಶ್ವಿನ್​ ದ್ವಿತೀಯ ಇನಿಂಗ್ಸ್​ನಲ್ಲಿ 5 ವಿಕೆಟ್​ ಕಿತ್ತು ತಮ್ಮ 100ನೇ ಟೆಸ್ಟ್​ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಕುಲ್​ದೀಪ್​ ಮತ್ತು ಜಸ್​ಪ್ರೀತ್​ ಬುಮ್ರಾ ತಲಾ 2 ವಿಕೆಟ್​ ಪಡೆದರು. ಅಂತಿಮವಾಗಿ ಇಂಗ್ಲೆಂಡ್​ 195 ರನ್​ಗೆ ಆಲೌಟ್​ ಆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT