ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಟಗಾರ್ತಿಯರು
ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಟಗಾರ್ತಿಯರು 
ಕ್ರಿಕೆಟ್

ಡಬ್ಲ್ಯೂಪಿಎಲ್ 2024: ಆರ್ ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 1 ರನ್ ಜಯ, ಪ್ಲೇ ಆಫ್ ಗೆ ಲಗ್ಗೆ

Nagaraja AB

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ರನ್ ನಿಂದ ರೋಚಕ ಜಯ ಸಾಧಿಸಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿ ಪ್ಲೇ ಆಫ್ ಗೆ ಲಗ್ಗೆ ಇಟ್ಟಿತು.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜೆಮೀಮಾ ರೋಡಿಗ್ರಸ್ 58, ಆಲಿಸ್ ಕ್ಯಾಪ್ಸಿ ಅವರ 48 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.

ಈ ಗುರಿ ಬೆನ್ನಟ್ಟಿದ್ದ ಆರ್ ಸಿಬಿ ಪರ ತಂಡದ ನಾಯಕಿ ಸ್ಮೃತಿ ಮಂದನಾ ಕೇವಲ 5 ರನ್ ಗಳಿಗೆ ಔಟಾಗುವ ಮೂಲಕ ನಿರಾಸೆ ಉಂಟುಮಾಡಿದರು. ನಂತರ ಸೋಫಿ ಮೊಲಿನೆಕ್ಸ್ 33, ಎಲ್ಲಿಸ್ ಪೆರ್ರಿ 49 ರನ್ ಗಳ ನೆರವಿನಿಂದ ಗೆಲುವಿನ ಆಸೆ ಜೀವಂತವಾಗಿಟ್ಟುಕೊಂಡಿತ್ತು.

ನಂತರ ಬಂದ ರಿಚಾ ಘೋಷ್ ಬಿರುಸಿನ ಆಟವಾಡಿ ಗಮನ ಸೆಳೆದರು. ಕೊನೆ ಓವರ್ ನಲ್ಲಿ 17 ರನ್ ಬೇಕಿದ್ದಾಗ 2 ಸಿಕ್ಸರ್ ಸಿಡಿಸಿದರು. ಆದರೆ, ಕೊನೆ ಎಸೆತದಲ್ಲಿ 2 ರನ್ ಬೇಕಿದ್ದಾಗ ರಿಚಾ ರನೌಟ್ ಆಗುವುದರೊಂದಿಗೆ ಆರ್ ಸಿಬಿ ಗೆಲುವಿನ ಆಸೆ ಕಮರಿತು.ಇದರಿಂದಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 180 ರನ್ ಗಳಿಸುವ ಮೂಲಕ ಸೋಲಿಗೆ ಗುರಿಯಾಯಿತು.

SCROLL FOR NEXT