ಅಮೀರ್ ಹುಸೇನ್ ಲೋನ್..  
ಕ್ರಿಕೆಟ್

ಎರಡೂ ಕೈಗಳಿಲ್ಲ, ಆದರೂ ಬ್ಯಾಟಿಂಗ್.. ಕಾಲಲ್ಲೇ ಫೀಲ್ಡಿಂಗ್: ಕಾಶ್ಮೀರ ಅಂಗವಿಕಲ ಕ್ರಿಕೆಟಿಗನಿಗೆ ಮನಸೋತ ಸಚಿನ್!

ಆತ್ಮಸ್ಥೈರ್ಯವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಕಾಶ್ಮೀರದ ಅಂಗವಿಕಲ ಕ್ರಿಕೆಟರ್ ಸ್ಪಷ್ಟ ನಿದರ್ಶನವಾಗಿದ್ದಾರೆ. ಎರಡೂ ಕೈಗಳಿಲ್ಲದ ಅವರ ಆಟಕ್ಕೆ ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೇ ಮಾರುಹೋಗಿ ಭೇಟಿಯಾಗಿದ್ದಾರೆ.

ಆತ್ಮಸ್ಥೈರ್ಯವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಕಾಶ್ಮೀರದ ಅಂಗವಿಕಲ ಕ್ರಿಕೆಟರ್ ಸ್ಪಷ್ಟ ನಿದರ್ಶನವಾಗಿದ್ದಾರೆ. ಎರಡೂ ಕೈಗಳಿಲ್ಲದ ಅವರ ಆಟಕ್ಕೆ ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೇ ಮಾರುಹೋಗಿ ಭೇಟಿಯಾಗಿದ್ದಾರೆ.

ಇಷ್ಟಕ್ಕೂ ಯಾರು ಈ 'ಸೂಪರ್ ಸ್ಟಾರ್'?

ಅಮೀರ್ ಹುಸೇನ್ ಲೋನ್.. ಜಮ್ಮು ಮತ್ತು ಕಾಶ್ಮೀರದ ವಿಶೇಷ ಕ್ರಿಕೆಟಿಗ.. ಜಮ್ಮು ಮತ್ತು ಕಾಶ್ಮೀರದ ಅಂಗ ವಿಕಲ ಕ್ರಿಕೆಟ್ ತಂಡದ ನಾಯಕ... ಅಪಘಾತವೊಂದರಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡ ಅಮೀರ್ ಬಳಿಕ ಕ್ರಿಕೆಟ್ ನಲ್ಲಿ ಅಗಾಧ ಆಸಕ್ತಿ ಬೆಳೆಸಿಕೊಂಡು ಇಂದು ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಮೀರ್ ಗೆ ಎರಡೂ ಕೈಗಳಿಲ್ಲ.. ತನ್ನ ಗಲ್ಲದ ಕೆಳಗೆ ಮತ್ತು ಕುತ್ತಿಗೆ ನಡುವೆ ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡುತ್ತಾರೆ.

ಮಾತ್ರವಲ್ಲ ತನ್ನ ಕಾಲಿನ ಹೆಬ್ಬೆರಳು ಮತ್ತು ಎರಡನೇ ಬೆರಳಿನ ನಡುವೆ ಚೆಂಡನ್ನು ಹಿಡಿದುಕೊಂಡು ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಾರೆ. 34 ವರ್ಷದ ಅಮೀರ್ J&K ನ ಪ್ಯಾರಾ-ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಭಾರತ ತಂಡದ ನೀಲಿ ಬಣ್ಣದ ಜೆರ್ಸಿ ತೊಟ್ಟು ಅವರು ಕ್ರಿಕೆಟ್ ಆಡುತ್ತಿದ್ದ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

ದಿವ್ಯಾಂಗ ಕ್ರಿಕೆಟಿಗನ ಆಟಕ್ಕೆ ಮನಸೋತ ಕ್ರಿಕೆಟ್ ದೇವರು

ಈ ದಿವ್ಯಾಂಗ ಕ್ರಿಕೆಟಿಗನ ಆಟ ನೋಡಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಂಪೂರ್ಣ ಮನಸೋತು ಆತನನ್ನು ತಮ್ಮ ISPL ತಂಡಕ್ಕೆ ಸೇರ್ಪಡೆ ಮಾಡಿಕೊಂಡರು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಸಚಿನ್ ತೆಂಡೂಲ್ಕರ್ ತಂಡಗಳ ನಡುವಿನ ಪಂದ್ಯದಲ್ಲಿ ಅಮೀರ್ ಹುಸೇನ್ ಸಚಿನ್ ಜೊತೆ ಬ್ಯಾಟಿಂಗ್ ಮಾಡಿದ್ದು ವಿಶೇಷವಾಗಿತ್ತು. ಬೌಲಿಂಗ್ ಮಾತ್ರವಲ್ಲದೇ ಫೀಲ್ಡಿಂಗ್ ನಲ್ಲೂ ಅಮೀರ್ ಹುಸೇನ್ ತೋರಿದ ಚಾಕಚಕ್ಯತೆ ಸಾಮಾನ್ಯ ಕ್ರಿಕೆಟಿಗರನ್ನೂ ನಾಚಿಸುವಂತಿತ್ತು.

ವಿಶೇಷ ಉಡುಗೊರೆ ನೀಡಿದ ಸಚಿನ್

ಅಮೀರ್ ಹುಸೇನ್ ರ ಆಟಕ್ಕೆ ಮನಸೋತ ಸಚಿನ್, ಐಎಸ್ ಪಿಎಲ್ ಪಂದ್ಯದ ಮೊದಲ ಎದುರಿಸುವಂತೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ಅಮೀರ್ ತಮ್ಮ ವಿಶೇಷ ಬ್ಯಾಟಿಂಗ್ ತಂತ್ರಗಾರಿಕೆ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಖುದ್ಧು ಕಾಶ್ಮೀರದ ಅವರ ಮನೆಗೇ ತೆರಳಿ ಅಮೀರ್ ಹುಸೇನ್ ಗೆ ವಿಶೇಷ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ಅಮೀರ್ ಮತ್ತು ಕುಟುಂಬ ಭಾವುಕರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್