ಕ್ರಿಕೆಟ್

IPL 2024: ಕಮೆಂಟರಿ ಬಾಕ್ಸ್ ಗೆ ನವಜೋತ್ ಸಿಂಗ್ ಸಿಧು ವಾಪಸ್, ವೀಕ್ಷಕ ವಿವರಣೆಗೆ 'Sidhuism' ಟಚ್!

ಐಪಿಎಲ್ 2024ರ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಈ ಹಿಂದೆ ರಾಜಕೀಯ ಕಾರಣದಿಂದಾಗಿ ಕ್ರಿಕೆಟ್ ನಿಂದ ದೂರ ಉಳಿದಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಮತ್ತೆ ವೀಕ್ಷಕ ವಿವರಣೆಗೆ ಮರಳಿದ್ದಾರೆ.

ಮುಂಬೈ: ಐಪಿಎಲ್ 2024ರ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಈ ಹಿಂದೆ ರಾಜಕೀಯ ಕಾರಣದಿಂದಾಗಿ ಕ್ರಿಕೆಟ್ ನಿಂದ ದೂರ ಉಳಿದಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಮತ್ತೆ ವೀಕ್ಷಕ ವಿವರಣೆಗೆ ಮರಳಿದ್ದಾರೆ.

ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2024) ಪಂದ್ಯಗಳ ವೀಕ್ಷಣೆಗೆ ಮತ್ತಷ್ಟು ಮೆರುಗು ಬಂದಿದ್ದು, ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು (Navjot Singh Sidhu) ಮತ್ತೆ ಕಾಮೆಂಟರಿಗೆ ಮರಳಿದ್ದಾರೆ. ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, 10 ವರ್ಷಗಳ ಬಳಿಕ ಕ್ರಿಕೆಟ್ ಕಾಮೆಂಟ್ರಿಗೆ ಮರಳಿದ್ದಾರೆ.

ಸಿಧು ಅವರು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ವೀಕ್ಷಕ ವಿವರಣೆ ತಂಡದ ಭಾಗವಾಗಲಿದ್ದಾರೆ. ಕೆಲವು ವರ್ಷಗಳಿಂದ ಕಾಮೆಂಟರಿಯಿಂದ ಬ್ರೇಕ್‌ ಪಡೆದಿದ್ದ ಅವರು, ವರ್ಷಗಳ ನಂತರ ಕಾಮೆಂಟ್ ಕರ್ತವ್ಯಕ್ಕೆ ಮರಳಲಿದ್ದಾರೆ. ಭಾರತದ ಜನಪ್ರಿಯ ವೀಕ್ಷಕ ವಿವರಣೆಕಾರರ ಪಟ್ಟಿಯಲ್ಲಿ ಸಿಧು ಅವರದ್ದು ಪರಿಚಿತ ಹೆಸರು. ಖಡಕ್‌ ಮಾತುಗಳಿಗೆ ಹೆಸರಾದ ಸಿಧು ಅವರ ಕಾಮೆಂಟರಿ ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಬಾರಿಯ ಐಪಿಎಲ್ ಪಂದ್ಯಾವಳಿಯು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ. ಲೀಗ್‌ನ ಅಧಿಕೃತ ಟಿವಿ ಪ್ರಸಾರಕ ಸ್ಟಾರ್‌ ಸ್ಪೋರ್ಟ್ಸ್‌ ಸಿಧು ವೀಕ್ಷಕ ವಿವರಣೆಗೆ ಮರಳುತ್ತಿರುವುದನ್ನು ಖಚಿತಪಡಿಸಿದೆ. ಹಾಸ್ಯಮಯ ವಾಕ್ಯಗಳು ಹಾಗೂ ತೀಕ್ಷ್ಣ ಒಳನೋಟಗಳಿಗೆ ಹೆಸರುವಾಸಿಯಾಗಿರುವ ಮಾಜಿ ಕ್ರಿಕೆಟಿಗನ ಕಾಮೆಂಟರಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಕೆಲವು ವರ್ಷಗಳಿಂದ ಸಿಧು ಕಾಮೆಂಟರಿಯನ್ನು ಅಭಿಮಾನಿಗಳು ಮಿಸ್‌ ಮಾಡಿಕೊಡಿದ್ದರು. ಇದೀಗ ಮತ್ತೆ ತಮ್ಮ ಹಳೆಯ ಮೋಡಿಯನ್ನು ಪುನರಾವರ್ತಿಸಲು ಮಾಜಿ ಆಟಗಾರ ಸಜ್ಜಾಗಿದ್ದಾರೆ.

ಮಿಲಿಯನ್‌ ಡಾಲರ್‌ ಟೂರ್ನಿಯ 17ನೇ ಆವೃತ್ತಿಗೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ವೇಳೆ ಕಾಮೆಂಟರಿಯಲ್ಲಿ ಸಿಧು ಅವರ ಧ್ವನಿ ಕೇಳಬಹುದು.

ಮಾರ್ಚ್ 22ರಂದು ಸಂಜೆ 6:30ರಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ಐಪಿಎಲ್‌ ಪ್ರಾರಂಭವಾಗಲಿದೆ. ನಂಬಲಾಗದ ವೀಕ್ಷಕ ವಿವರಣೆಯನ್ನು ಮಿಸ್‌ ಮಾಡಬೇಡಿ ಎಂದು ವಾಹಿನಿ ಟ್ವೀಟ್‌ ಮಾಡಿದೆ. ಕಾಮೆಂಟರಿ ಬಾಕ್ಸ್ನ ಸರ್ದಾರ್ ಮರಳಿದ್ದಾರೆ” ಎಂದು ಚಾನೆಲ್ನ ಅಧಿಕೃತ ಹ್ಯಾಂಡಲ್ ತಿಳಿಸಿದೆ.

ಲೋಕಸಭಾ ಚುನಾವಣೆ ಹೊತ್ತಲ್ಲಿ ಕ್ರಿಕೆಟ್ ಗೆ ಮರಳಿದ ಸಿಧು?

ಅಂದಹಾಗೆ ನವಜೋತ್ ಸಿಂಗ್ ಸಿಧು ಸಕ್ರಿಯ ರಾಜಕಾರಣಿ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ಪಂಜಾಬ್ ನಲ್ಲಿ ಸಕ್ರಿಯ ರಾಜಕಾರಣಿಯಾಗಿರುವ ಸಿಧು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಸಿಧು ಕೂಡ ತಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಂಜಾಬ್ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ಸಿಧು ಪದೇ ಪದೇ ಹೇಳಿದ್ದರು.

ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಳ್ಳುತ್ತಿರುವ ಸಿಧು

ಇನ್ನು ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಪಕ್ಷದಿಂದ ಹೆಚ್ಚು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರ್ಡಿಂಗ್ ಮತ್ತು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ನೇತೃತ್ವದ ಕಾರ್ಯಕ್ರಮಗಳಲ್ಲಿ ವೇದಿಕೆಯನ್ನು ಹಂಚಿಕೊಳ್ಳದ ಸಿಧು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರ ಗುಂಪು ಅವರಿಗೆ ನಿಷ್ಠೆಯನ್ನು ತೋರಿಸುವ ಮೂಲಕ ರಾಜ್ಯದಲ್ಲಿ ಸಮಾನಾಂತರ ಶಕ್ತಿ ಪ್ರದರ್ಶನಗಳನ್ನು ನಡೆಸುವ ಮೂಲಕ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ.

ಅಂದಹಾಗೆ ಪಂಜಾಬ್ ನಲ್ಲಿ ಜೂನ್ 1ರಂದು ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT