ಗುವಾಹಟಿ: ಇಲ್ಲಿನ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನಾಯಕ ಸ್ಯಾಮ್ ಕರನ್ ಅವರ 63 ರನ್ ಗಳ ನೆರವಿನಿಂದ ಪಂಜಾಬ್ ಕಿಂಗ್ಸ್, ಈಗಾಗಲೇ ಪ್ಲೇ ಆಫ್ ಗೆ ಅರ್ಹತೆ ಪಡೆದಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ರಾಜಸ್ಥಾನ ರಾಯಲ್ಸ್ ನ ಟಾಪ್ 2 ಸ್ಥಾನಕ್ಕೂ ಅನಿಶ್ಚಿತತೆ ಎದುರಾಗಿದೆ. ಸನ್ ರೈಸರ್ಸ್ ಹಾಗೂ ಸಿಎಸ್ ಕೆ ಪೈಪೋಟಿ ನೀಡುತ್ತಿವೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ರಿಯಾನ್ ಪರಾಗ್ 48, ಆರ್ ಅಶ್ವಿನ್ 28, ಸಂಜು ಸ್ಯಾಮ್ಸನ್ 18, ಟಾಮ್ ಕೊಲೆರ್ 18 ರನ್ ಗಳಿಸದದ್ದು ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ರಾಜಸ್ಥಾನ ರಾಯಲ್ಸ್ ನೀಡಿದ ಗೆಲುವಿನ ಗುರಿ ಬೆನ್ನಟ್ಟಿದ್ದ ಪಂಜಾಬ್ ಕಿಂಗ್ಸ್ ಪರ ಸ್ಯಾಮ್ ಕರಣ್ ಅಜೇಯ 63, ಜಾನಿ ಬೈರ್ ಸ್ಟಾ 14, ಜಿತೇಶ್ ಶರ್ಮಾ 22, ಅಶುತೋಷ್ ಶರ್ಮಾ 17 ರನ್ ನೆರವಿನಿಂದ 18.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವಿನ ನಗೆ ಬೀರಿತು.