ಭಾರತ ಭರ್ಜರಿ ಪ್ರದರ್ಶನ 
ಕ್ರಿಕೆಟ್

Border Gavaskar Trophy: ಕಡಿಮೆ ರನ್ ಗೆ ಪ್ರಬಲ ಆಸಿಸ್ ಆಲೌಟ್, ಭಾರತ ದಾಖಲೆ!

ಈ ಹಿಂದೆ 2016ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೋಬರ್ಟ್ ನಲ್ಲಿ 85ರನ್ ಗಳಿಗೆ ಆಲೌಟ್ ಆಗಿತ್ತು.

ಪರ್ತ್: ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೇವಲ 104 ರನ್ ಗಳಿಗೇ ಕಟ್ಟಿ ಹಾಕಿರುವ ಭಾರತ ಕ್ರಿಕೆಟ್ ಇತಿಹಾಸದ ಅಪರೂಪದ ದಾಖಲೆಗಳನ್ನು ನಿರ್ಮಿಸಿದೆ.

ಹೌದು.. ಪರ್ತ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 150ರನ್ ಗಳಿಗೆ ಆಲೌಟ್ ಆಗಿದ್ದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 104ರನ್ ಗಳಿಗೇ ಕಟ್ಟಿಹಾಕಿತ್ತು.

ಆ ಮೂಲಕ 46 ರನ್ ಗಳ ಅಲ್ಪ ಮುನ್ನಡೆ ಸಾಧಿಸಿದೆ. ಈ ಸಾಧನೆ ಮೂಲಕ ಭಾರತ ಕ್ರಿಕೆಟ್ ಇತಿಹಾಸದ 2 ಅಪರೂಪದ ದಾಖಲೆಗಳನ್ನು ನಿರ್ಮಿಸಿದೆ.

2000ದಿಂದೀಚೆಗೆ ಆಸ್ಟ್ರೇಲಿಯಾದ 3ನೇ ಕನಿಷ್ಠ ಮೊತ್ತ

ಇಂದು 104ರನ್ ಗಳಿಗೇ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ತಂಡ 2000 ದಿಂದೀಚೆಗೆ ಗಳಿಸಿದ ಮೂರನೇ ಕನಿಷ್ಠ ಮೊತ್ತ ಇದಾಗಿದೆ. ಈ ಹಿಂದೆ 2016ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೋಬರ್ಟ್ ನಲ್ಲಿ 85ರನ್ ಗಳಿಗೆ ಆಲೌಟ್ ಆಗಿತ್ತು. 2010ರಲ್ಲಿ ಮೆಲ್ಬೋರ್ನ್ ನಲ್ಲಿ ಇಂಗ್ಲೆಂಡ್ ವಿರುದ್ಧ 98ರನ್ ಗಳಿಗೇ ಆಲೌಟ್ ಆಗಿತ್ತು.

Lowest totals for Australia at home since 2000

  • 85 vs SA Hobart 2016

  • 98 vs Eng Melbourne 2010

  • 104 vs Ind Perth 2024 *

  • 127 vs Pak Sydney 2010

  • 136 vs NZ Hobart 2011

ಅಲ್ಪ ಮೊತ್ತದ ಹೊರತಾಗಿಯೂ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಮುನ್ನಡೆ

ಇನ್ನು ಈ ಪಂದ್ಯದಲ್ಲಿ ಭಾರತ ತಂಡ ಕೇವಲ 150 ರನ್ ಗಳಿಗೆ ಆಲೌಟ್ ಆಗಿತ್ತು. ಆದರೆ ಆಸ್ಟ್ರೇಲಿಯಾವನ್ನು 104ರನ್ ಗಳಿಗೆ ಆಲೌಟ್ ಮಾಡಿ 46ರನ್ ಗಳ ಮುನ್ನಡೆ ಸಾಧಿಸಿದೆ. ಈ ಹಿಂದೆ 2002ರಲ್ಲಿ ಹ್ಯಾಮಿಲ್ಟನ್ ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಕೇವಲ 99ರನ್ ಗಳಿಗೆ ಆಲೌಟ್ ಆದರ ಹೊರತಾಗಿಯೂ ಕಿವೀಸ್ ಪಡೆಯನ್ನು 94 ರನ್ ಗೆ ಆಲೌಟ್ ಮಾಡಿತ್ತು.

ಆ ಮೂಲಕ 5ರನ್ ಗಳ ಮುನ್ನಡೆ ಸಾಧಿಸಿತ್ತು. ಇದಕ್ಕೂ ಮುನ್ನ 1936ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ 147ರನ್ ಗಳಿಗೆ ಆಲೌಟ್ ಆಗಿದ್ದ ಭಾರತ ಅಲ್ಲಿಯೂ 13ರನ್ ಗಳ ಮುನ್ನಡೆ ಸಾಧಿಸಿತ್ತು. ಇದಾದ ಬಳಿಕ ಇಂದು 150ರನ್ ಗಳಿಗೆ ಆಲೌಟ್ ಆಗಿದ್ದ ಭಾರತ 46 ರನ್ ಮುನ್ನಡೆ ಸಾಧಿಸಿದೆ.

Lowest 1st inngs totals for which India achieved a lead

  • 99 vs NZ Hamilton 2002 (five runs lead)

  • 147 vs Eng Lord's 1936 (13)

  • 150 vs Aus Perth 2024 (46) *

  • 179 vs Eng Wankhede 1981 (13)

ಭಾರತದ ವಿರುದ್ದ ಆಸ್ಟ್ರೇಲಿಯಾದ ಕನಿಷ್ಠ ಮೊತ್ತ

ಇನ್ನು ಭಾರತದ ವಿರುದ್ಧ 104ರನ್ ಗಳಿಗೇ ಆಲೌಟ್ ಆಗಿರುವುದು ಭಾರತದ ವಿರುದ್ಧ ಆಸ್ಟ್ರೇಲಿಯಾದ ಕನಿಷ್ಠ ಮೊತ್ತ ಇದಾಗಿದ್ದು, ಒಟ್ಟಾರೆ ಆಸ್ಟ್ರೇಲಿಯಾದ 4ನೇ ಕನಿಷ್ಠ ಮೊತ್ತ ಇದಾಗಿದೆ.

Stat: 104 is the lowest first innings total and fourth lowest overall for Australia against India in Tests, the previous lowest first innings total being 107 in Sydney in 1947.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT