ದುಬೈ: ಐಸಿಸಿ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪ್ರಾಯಾಸದ ಗೆಲುವು ಸಾಧಿಸಿದೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಮಹಿಳಾ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್ ಗಳ ಅಲ್ಪ ಮೊತ್ತ ಪೇರಿಸಿತ್ತು. 106 ರನ್ ಗಳ ಗುರಿ ಬೆನ್ನಟ್ಟಿ ಭಾರತ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 108 ರನ್ ಪೇರಿಸಿದೆ.
ಪಾಕಿಸ್ತಾನ ಪರ ಬ್ಯಾಟಿಂಗ್ ನಲ್ಲಿ ಮುನೀಬಾ ಅಲಿ 17, ನಿದಾ ದಾರ್ 28 ಮತ್ತು ಸೈದಾ ಶಾ ಅಜೇಯ 14 ರನ್ ಪೇರಿಸಿದ್ದರು. ಭಾರತ ಪರ ಬೌಲಿಂಗ್ ನಲ್ಲಿ ಅರುಂಧತಿ ರೆಡ್ಡಿ 3, ಶ್ರೇಯಾಂಕಾ ಪಟೇಲ್ 2, ರೇಣುಕಾ ಸಿಂಗ್, ದೀಪ್ತಿ ಶರ್ಮಾ, ಆಶಾ ಶೋಭನ ತಲಾ 1 ವಿಕೆಟ್ ಪಡೆದಿದ್ದಾರೆ.
ಭಾರತ ಪರ ಶಫಾಲಿ ವರ್ಮಾ 32, ಜೆಮಿಮಾ ರಾಡ್ರಿಗಸ್ 23 ಮತ್ತು ಹರ್ಮನ್ ಪ್ರೀತ್ ಕೌರ್ 29 ರನ್ ಗಳಿಸಿದ್ದಾಗ ಗಾಯದಿಂದಾಗಿ ಪಂದ್ಯದಿಂದ ನಿವೃತ್ತಿ ಪಡೆದರು. ಪಾಕ್ ಪರ ಫಾತೀಮಾ ಸನಾ 2 ವಿಕೆಟ್ ಪಡೆದಿದ್ದಾರೆ.