ನವದೆಹಲಿ: 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಸರಣಿ ಸಮಬಲ ಮಾಡಿಕೊಳ್ಳಲು ಯೋಜಿಸಿದೆ.
ದೆಹಲಿ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ಮೊದಲ ಪಂದ್ಯದ ಸೋಲಿನ ಮೂಲಕ ಸರಣಿ ಸೋಲಿನ ಭೀತಿಯಲ್ಲಿರುವ ಬಾಂಗ್ಲಾದೇಶ 2ನೇ ಟಿ20 ಪಂದ್ಯಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ತವಕದಲ್ಲಿದೆ.
ಹೀಗಾಗಿ ಇಂದು ಬಾಂಗ್ಲಾದೇಶಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಈ ಮಹತ್ವದ ಪಂದ್ಯಕ್ಕಾಗಿ ಬಾಂಗ್ಲಾದೇಶ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ.
ಬಾಂಗ್ಲಾ ಆಟಗಾರ ಶೋರಿಫುಲ್ ಬದಲಿಗೆ ತಾಂಜಿಮ್ ಶಕೀಬ್ ಸ್ಥಾನ ಪಡೆದಿದ್ದಾರೆ.
ಸರಣಿ ಗೆಲುವಿನತ್ತ ಭಾರತ ಚಿತ್ತ
ಮೊದಲ ಪಂದ್ಯ ಗೆದ್ದು ಸರಣಿ ಗೆಲುವಿನ ಮೇಲೆ ಚಿತ್ತ ಹರಿಸಿರುವ ಭಾರತ ತಂಡ ಮೊದಲ ಪಂದ್ಯವಾಡಿದ್ದ ಅದೇ ತಂಡವನ್ನು 2ನೇ ಪಂದ್ಯಕ್ಕೂ ಕಣಕ್ಕಿಳಿಸಿದೆ. ದೆಹಲಿಯಲ್ಲಿ ಬಿಸಿಲು ಹೆಚ್ಚಿರುವುದರಿಂದ dew ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಭಾರತದ ಬೌಲರ್ ಗಳಿಗೆ ಇಂದಿನ ಪಂದ್ಯ ಸವಾಲಿನದ್ದಾಗಿರಲಿದೆ ಎಂದು ಹೇಳಲಾಗಿದೆ.
ತಂಡಗಳು ಇಂತಿವೆ
ಭಾರತ: ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.
ಬಾಂಗ್ಲಾದೇಶ: ಪರ್ವೇಜ್ ಹೊಸೈನ್ ಎಮನ್, ಲಿಟ್ಟನ್ ದಾಸ್(ವಿಕೆಟ್ ಕೀಪರ್), ನಜ್ಮುಲ್ ಹೊಸೈನ್ ಶಾಂಟೊ(ನಾಯಕ), ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ಜೇಕರ್ ಅಲಿ, ಮೆಹಿದಿ ಹಸನ್ ಮಿರಾಜ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ತಂಝಿಮ್ ಹಸನ್ ಸಾಕಿಬ್, ಮುಸ್ತಾಫಿಜುರ್ ರಹ್ಮಾನ್.