ಮುಂಬೈ: ಐಪಿಎಲ್ 2025 ಟೂರ್ನಿಗಾಗಿ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರನ್ನು ಬಹಿರಂಗಪಡಿಸಿವೆ. ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರನ್ನು ಕ್ರಮವಾಗಿ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ಕೆಕೆಆರ್ ತಂಡದಿಂದ ಕೈ ಬಿಡಲಾಗಿದೆ. ಮೆಗಾ ಹರಾಜಿನಲ್ಲಿ ಅವರನ್ನು ಖರೀದಿ ಮಾಡಲು ಹಲವು ತಂಡಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 18ನೇ ವರ್ಷವೂ ವಿರಾಟ್ ಕೊಹ್ಲಿಗೆ ರೂ. 21 ಕೋಟಿ, ರಜತ್ ಪಾಟೀದರ್ ಗೆ ರೂ. 11 ಕೋಟಿ, ಯಶ್ ದಯಾಳ್ ಗೆ ರೂ.5 ಕೋಟಿ ನೀಡುವ ಮೂಲಕ ತಂಡದಲ್ಲಿಯೇ ಉಳಿಸಿಕೊಂಡಿದೆ.
CSK- ಚೆನ್ನೈ ಸೂಪರ್ ಕಿಂಗ್ಸ್: ಫ್ರಾಂಚೈಸಿ ಮಹೇಂದ್ರ ಸಿಂಗ್ ಧೋನಿಗೆ ರೂ.4 ಕೋಟಿ, ಋತುರಾಜ್ ಗಾಯಕ್ ವಾಡ್ ಗೆ ರೂ.18 ಕೋಟಿ, ಮತೀಶ್ ಪತಿರಣ ಗೆ ರೂ. 13 ಕೋಟಿ, ಶಿವಂ ದುಬೆಗೆ ರೂ.12 ಕೋಟಿ, ರವೀಂದ್ರ ಜಡೇಜಾಗೆ ರೂ.18 ಕೋಟಿ ನೀಡುವ ಮೂಲಕ ರಿಟೈನ್ ಮಾಡಿಕೊಂಡಿದೆ.
Delhi Capitals: ಅಕ್ಷರ್ ಪಟೇಲ್ ಗೆ ರೂ. 16.50 ಕೋಟಿ, ಕುಲದೀಪ್ ಯಾದವ್ ಗೆ ರೂ. 13. 25 ಕೋಟಿ, ಟ್ರಿಸ್ಟನ್ ಸ್ಟಬ್ಸ್ ಗೆ ರೂ. 10 ಕೋಟಿ, ಅಭಿಷೇಕ್ ಪೊರೆಲ್ ಗೆ ರೂ. 4 ಕೋಟಿ ಹಣ ನೀಡುವ ಮೂಲಕ ಪ್ರಾಂಚೈಸಿಯಲ್ಲಿ ಉಳಿಸಿಕೊಂಡಿದೆ. ಆದರೆ, ನಾಯಕರಾಗಿದ್ದ ರಿಷಭ್ ಪಂತ್ ಅವರನ್ನು ರಿಲೀಸ್ ಮಾಡಲಾಗಿದೆ. ನಾಯಕತ್ವ ನೀಡುವ ವಿಚಾರದಲ್ಲಿ ಮತ್ತು ಹಣದ ವಿಚಾರದಲ್ಲಿ ಫ್ರಾಂಚೈಸಿ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ತಂಡವನ್ನು ತೊರೆಯಲು ರಿಷಬ್ ಪಂತ್ ನಿರ್ಧರಿಸದ್ದರು ಎನ್ನಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್: ನಿಕೋಲಸ್ ಫೂರನ್ ಗೆ ರೂ. 21 ಕೋಟಿ, ರವಿ ಬಿಷ್ಣೋಯಿಗೆ ರೂ.11 ಕೋಟಿ, ಮಯಾಂಕ್ ಯಾದವ್ ಗೆ ರೂ. 11 ಕೋಟಿ, ಮೊಹಸಿನ್ ಖಾನ್ ಗೆ ರೂ.4 ಕೋಟಿ, ಆಯುಷ್ ಬಡೋನಿಗೆ ರೂ. 4 ಕೋಟಿ ಮೂಲಕ ಉಳಿಸಿಕೊಂಡಿದೆ. ಆದರೆ ನಿರೀಕ್ಷೆಯಂತೆ ಕೆಎಲ್ ರಾಹುಲ್‌ರನ್ನು ಎಲ್‌ಎಸ್‌ಜಿ ತಂಡದಿಂದ ಕೈಬಿಡಲಾಗಿದೆ. 2024ರ ಐಪಿಎಲ್ ವೇಳೆ ನಾಯಕರಾಗಿದ್ದ ಕೆಎಲ್ ರಾಹುಲ್ ಜೊತೆಗೆ ಮಾಲಿಕ ಸಂಜೀವ್ ಗೊಯೆಂಕಾ ನಡೆದುಕೊಂಡಿದ್ದ ರೀತಿಗೆ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಅವರು ತಂಡದಿಂದ ಹೊರಬಂದಿದ್ದು, ಐಪಿಎಲ್ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
KKR: ಕೋಲ್ಕತ್ತಾ ನೈಟ್ ರೈಡರ್ಸ್: ರಿಂಕು ಸಿಂಗ್ ರೂ. 13 ಕೋಟಿ, ವರುಣ್ ಚಕ್ರವರ್ತಿ ರೂ. 12 ಕೋಟಿ, ಸುನಿಲ್ ನಾರಾಯಣ್ ರೂ. 12 ಕೋಟಿ, ಆ್ಯಂಡ್ರೆ ರಸೆಲ್ ರೂ.12 ಕೋಟಿ, ಹರ್ಷೀತ್ ರಾಣಾ ರೂ.4 ಕೋಟಿ, ರಮನ್ ದೀಪ್ ಸಿಂಗ್ ರೂ.4 ಕೋಟಿಗೆ ರಿಟೈನ್ ಆಗಿದ್ದಾರೆ. ಆದರೆ 2024ರ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಮುಂದಾಳತ್ವ ವಹಿಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡಲಾಗಿದೆ.
Mumbai Indians: ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಶರ್ಮಾಗೆ ರೂ. 16. 30 ಕೋಟಿ, ಹಾರ್ದಿಕ್ ಪಾಂಡ್ಯಗೆ ರೂ. 16. 35 ಕೋಟಿ, ಜಸ್ ಪ್ರೀತ್ ಬೂಮ್ರಾಗೆ ರೂ.18 ಕೋಟಿ, ಸೂರ್ಯಕುಮಾರ್ ಯಾದವ್ ಗೆ ರೂ.16. 35 ಕೋಟಿ, ತಿಲಕ್ ವರ್ಮಾ ಅವರಿಗೆ ರೂ.8 ಕೋಟಿ ಹಣದ ಮೂಲಕ ತಂಡದಲ್ಲಿಯೇ ಉಳಿಸಿಕೊಳ್ಳಲಾಗಿದೆ.
Sunrise Hyderabad: ಪ್ಯಾಟ್ ಕಮಿನ್ಸ್ ಗೆ ರೂ.18 ಕೋಟಿ, ಅಭಿಷೇಕ್ ಶರ್ಮಾಗೆ ರೂ.14 ಕೋಟಿ, ನಿತೀಶ್ ರೆಡ್ಡಿಗೆ ರೂ. 6 ಕೋಟಿ, ಹೆನ್ರಿಚ್ ಕ್ಲಾಸೆನ್ ಗೆ ರೂ.23 ಕೋಟಿ, ಟ್ರಾವಿಸ್ ಹೆಡ್ ಗೆ ರೂ.14 ಕೋಟಿ ಮೂಲಕ ರಿಟೈನ್ ಮಾಡಿಕೊಳ್ಳಲಾಗಿದೆ.
Gujarat Titans: ರಶೀದ್ ಖಾನ್ ಗೆ ರೂ. 18 ಕೋಟಿ, ಶುಭಮನ್ ಗಿಲ್ ಗೆ ರೂ. 16. 50 ಕೋಟಿ, ಸಾಯಿ ಸುದರ್ಶನ್ ಗೆ ರೂ. 8.50 ಕೋಟಿ, ರಾಹುಲ್ ತೆವಾಟಿಯಾ ರೂ. 4 ಕೋಟಿ, ಶಾರೂಖ್ ಖಾನ್ ಗೆ ರೂ.4 ಕೋಟಿ ನೀಡುವ ಮೂಲಕ ಪ್ರಾಂಚೈಸಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ.
Rajasthan Royals: ಸಂಜು ಸ್ಯಾಮ್ಸನ್ ಗೆ ರೂ.18 ಕೋಟಿ, ಯಶಸ್ವಿ ಜೈಸ್ವಾಲ್ ಗೆ ರೂ.18 ಕೋಟಿ, ರಿಯಾನ್ ಪರಾಗ್ ಗೆ ರೂ.14 ಕೋಟಿ, ಧ್ರುವ್ ಜುರೇಲ್ ಗೆರೂ.14 ಕೋಟಿ, ಶಿಮ್ರಾನ್ ಹೆಟ್ಮಿಯರ್ ಗೆ ರೂ.11 ಕೋಟಿ, ಸಂದೀಪ್ ಶರ್ಮಾಗೆ ರೂ. 4 ಕೋಟಿ ಮೂಲಕ ರಿಟೈನ್ ಮಾಡಿಕೊಂಡಿದೆ.
Punjab kings: ಶಶಾಂಕ್ ಸಿಂಗ್ ರೂ. 5.50 ಕೋಟಿ. ಪ್ರಭಸಿ ಮ್ರಾನ್ ಸಿಂಗ್ ರೂ.4 ಕೋಟಿ ನೀಡುವ ಮೂಲಕ ಪ್ರಾಂಚೈಸಿಯಲ್ಲಿಯೇ ಉಳಿಸಿಕೊಂಡಿದೆ.