ರಿಷಭ್ ಪಂತ್-ಸಂಜೀವ್ ಗೋಯೆಂಕಾ online desk
ಕ್ರಿಕೆಟ್

IPL 2025: "ಇವ್ನ್ ಬದ್ಲಾಗಲ್ಲಾ ಗುರೂ..."; Rishabh Pant ಔಟ್ ಗೆ Sanjeev Goenka ವ್ಯಂಗ್ಯ ನಗು!

ಮುಂಬೈ ಇಂಡಿಯನ್ಸ್- ಲಖನೌ ಜೈಂಟ್ಸ್ ಪಂದ್ಯದಲ್ಲಿ ರಿಷಭ್ ಪಂತ್ ಎದುರಾಳಿ ತಂಡದ ವಿರುದ್ಧ 6 ಎಸೆತಗಳಲ್ಲಿ 2 ರನ್ ಗಳಿಸಿ ಔಟ್ ಆದರು.

ಲಖನೌ: ಲಖನೌ ನಲ್ಲಿ ನಡೆದ ಐಪಿಎಲ್ 2025 ರ ಟೂರ್ನಿಯ 16 ನೇ ಪಂದ್ಯದಲ್ಲಿ ಲಖನೌ ತಂಡದ ಬ್ಯಾಟರ್ ರಿಷಭ್ ಪಂತ್ ಕಳಪೆ ಪ್ರದರ್ಶನ ಮುಂದುವರೆದಿದೆ.

ಮುಂಬೈ ಇಂಡಿಯನ್ಸ್- ಲಖನೌ ಜೈಂಟ್ಸ್ ಪಂದ್ಯದಲ್ಲಿ ರಿಷಭ್ ಪಂತ್ ಎದುರಾಳಿ ತಂಡದ ವಿರುದ್ಧ 6 ಎಸೆತಗಳಲ್ಲಿ 2 ರನ್ ಗಳಿಸಿ ಔಟ್ ಆದರು. ಈ ಸೀಸನ್ ನಲ್ಲಿ ರಿಷಭ್ ಪಂತ್ ಅವರ ಸತತ ಎರಡನೇ ಒಂದಂಕಿ ಸ್ಕೋರ್ ಇದಾಗಿದ್ದು, ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.

ಇಲ್ಲಿಯವರೆಗೆ, ಅವರ ಸ್ಕೋರ್‌ಗಳು ಇಂತಿವೆ 0, 15, 2, ಮತ್ತು 2 - LSG ಮತ್ತು ಅವರ ಅಭಿಮಾನಿಗಳು ಸ್ಟಾರ್ ಕೀಪರ್-ಬ್ಯಾಟರ್‌ ನಿಂದ ಭಾರಿ ನಿರೀಕ್ಷೆ ಹೊಂದಿದ್ದರು.

ರಿಷಭ್ ಪಂತ್ ಪ್ರದರ್ಶನಕ್ಕೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಆದರೆ ಮೈದಾನದಲ್ಲಿ ಮಾತ್ರ ಪ್ರತಿಕ್ರಿಯೆಗಳು ಸ್ಪಷ್ಟವಾಗಿರಲಿಲ್ಲ. ಪಂತ್ ವಿಕೆಟ್ ಒಪ್ಪಿಸಿ ಹಿಂತಿರುಗುತ್ತಿದ್ದಂತೆ, ಕ್ಯಾಮೆರಾಗಳು LSG ಮಾಲೀಕ ಸಂಜೀವ್ ಗೋಯೆಂಕಾ ಅವರ ಭಾವನೆಯನ್ನು ತ್ವರಿತವಾಗಿ ಸೆರೆಹಿಡಿದವು. VIP ಬಾಕ್ಸ್‌ನಿಂದ ಅವರ ವಕ್ರ (ವ್ಯಂಗ್ಯ) ನಗು ಮಾತುಗಳಿಗಿಂತ ಹೆಚ್ಚಿನದನ್ನು ಹೇಳುತ್ತಿತ್ತು. ಇವ್ನ್ ಬದ್ಲಾಗಲ್ಲಾ ಗುರೂ ಎಂಬಂತೆ ಅವರ ನಗು ಇತ್ತು ಎಂದು ನೆಟ್ಟಿಗರು ವ್ಯಾಖ್ಯಾನಿಸುತ್ತಿದ್ದಾರೆ.

ಹಿಂದಿನ ಸೋಲುಗಳ ನಂತರ ಈಗಾಗಲೇ ಊಹಾಪೋಹಗಳು ಹರಿದಾಡುತ್ತಿರುವಾಗ, LSG ನಾಯಕ ಮತ್ತು ಫ್ರಾಂಚೈಸಿಯ ಉನ್ನತ ಮುಖ್ಯಸ್ಥನ ನಡುವೆ ಮತ್ತೊಂದು ಉದ್ವಿಗ್ನ ಸಂಭಾಷಣೆ ನಡೆಯಲಿದೆ ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT