ಎಂಎಸ್ ಧೋನಿ ಮತ್ತು ಪೋಷಕರು 
ಕ್ರಿಕೆಟ್

IPL 2025: MS Dhoni ವಿದಾಯ? 20 ವರ್ಷದಲ್ಲಿ ಇದೇ ಮೊದಲ ಬಾರಿಗೆ ಆಗಮಿಸಿದ 'ಮಾಹಿ' ಪೋಷಕರು, ಪುತ್ರಿ ಜೀವಾಗೆ ಸಾಕ್ಷಿ ಹೇಳಿದ್ದೇನು?

ಪಂದ್ಯ ವೀಕ್ಷಿಸಲು ಮಹೇಂದ್ರ ಸಿಂಗ್ ಧೋನಿ ಅವರ ಪೋಷಕರು ಚೆಪಾಕ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅವರೊಟ್ಟಿಗೆ ಧೋನಿ ಪತ್ನಿ ಸಾಕ್ಷಿ ಹಾಗೂ ಪುತ್ರಿ ಜೀವಾ ಕೂಡ ಆಗಮಿಸಿದ್ದರು.

ಚೆನ್ನೈ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೀನಾಯ ಪ್ರದರ್ಶನ ಮುಂದುವರೆದಿರುವಂತೆಯೇ ಇತ್ತ ತಂಡದ ಹಿರಿಯ ಆಟಗಾರ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿದಾಯದ ಕುರಿತು ಮತ್ತೆ ಸುದ್ದಿಗಳು ಹರಿದಾಡುತ್ತಿವೆ.

ಹೌದು.. ಹಾಲಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಮೂರನೇ ಪಂದ್ಯದಲ್ಲಿ ಸೋಲು ಕಂಡಿದ್ದು ಅದೂ ಕೂಡ ತವರಿನಲ್ಲಿ ಸತತ 2ನೇ ಬಾರಿಗೆ ಸೋಲು ಕಂಡಿದೆ.

ಮಾರ್ಚ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಚೆನ್ನೈ ತಂಡ ಬಳಿಕ ತಾನಾಡಿದ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಮುಂಬೈ ಬಳಿಕ ತವರು ಚೆನ್ನೈನಲ್ಲಿ ಆರ್ ಸಿಬಿ ತಂಡದ ಎದುರು ಚೆನ್ನೈ 50 ರನ್ ಗಳ ಹೀನಾಯ ಸೋಲು ಕಂಡಿತ್ತು.

ಬಳಿಕ ರಾಜಸ್ತಾನ ರಾಯಲ್ಸ್ ವಿರುದ್ಧ ಗುವಾಹತಿಯಲ್ಲಿ 6 ರನ್ ಗಳ ವಿರೋಚಿಕತ ಸೋಲು ಕಂಡಿತ್ತು. ಇದೀಗ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ 25 ರನ್ ಗಳ ಅಂತರದಲ್ಲಿ ಸೋಲು ಕಂಡಿದೆ.

ಮೈದಾನಕ್ಕೆ ಆಗಮಿಸಿದ ಧೋನಿ ಪೋಷಕರು

ಅಚ್ಚರಿ ವಿಷಯವೆಂದರೆ ಈ ಪಂದ್ಯ ವೀಕ್ಷಿಸಲು ಮಹೇಂದ್ರ ಸಿಂಗ್ ಧೋನಿ ಅವರ ಪೋಷಕರು ಚೆಪಾಕ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅವರೊಟ್ಟಿಗೆ ಧೋನಿ ಪತ್ನಿ ಸಾಕ್ಷಿ ಹಾಗೂ ಪುತ್ರಿ ಜೀವಾ ಕೂಡ ಆಗಮಿಸಿದ್ದರು.

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಆರಂಭಿಸಿದ 20 ವರ್ಷಗಳಲ್ಲಿ ಅವರ ಪೋಷಕರು ಯಾವುದೇ ಪಂದ್ಯಕ್ಕೂ ಹಾಜರಿರಲಿಲ್ಲ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಫೈನಲ್ ನಂತಹ ಪ್ರಮುಖ ಪಂದ್ಯಗಳಲ್ಲೂ ಮಾಹಿ ಪೋಷಕರು ಕಾಣಿಸಿಕೊಂಡಿರಲಿಲ್ಲ. ಆದರೆ ಇಂದು ತಮ್ಮ ಪುತ್ರ ಧೋನಿ ಆಟ ವೀಕ್ಷಿಸಲು ಧೋನಿ ಅವರ ತಂದೆ ಪಾನ್ ಸಿಂಗ್ ಮತ್ತು ತಾಯಿ ದೇವಕಿ ದೇವಿ ಚೆಪಾಕ್ ಕ್ರೀಡಾಂಗಣಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

ಐಪಿಎಲ್ ನಿಂದಲೂ ಧೋನಿ ನಿವೃತ್ತಿ?

ಈ ಬೆಳವಣಿಗೆ ಬೆನ್ನಲ್ಲೇ ಮತ್ತೆ ಧೋನಿ ನಿವೃತ್ತಿ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಬಂದಿದೆ. ಇಂದು ಧೋನಿ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದ್ದು ಇದೇ ಕಾರಣಕ್ಕೆ ಸಿಎಸ್ ಕೆ ತವರು ಪಂದ್ಯಕ್ಕೆ ಅವರ ಪೋಷಕರು ಆಗಮಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡ ಧೋನಿ ತಮ್ಮ ನಾಯಕತ್ವದಲ್ಲಿ ತಂಡವನ್ನು 5 ಬಾರಿ ಚಾಂಪಿಯನ್ ಆಗಿ ಮಾಡಿದರು. ಆಗಲೂ ಸಹ ಅವರ ಹೆತ್ತವರು ಯಾವುದೇ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿರಲಿಲ್ಲ. ಆದರೆ ಈಗ ಅವರ ಈ ಹಠಾತ್ ಆಗಮನವು ಬಹುಶಃ ಇದು ಧೋನಿಯ ಕೊನೆಯ ಪಂದ್ಯವಾಗಿರಬಹುದು ಎಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿದೆ.

ಪುತ್ರಿ ಜೀವಾಗೆ ಧೋನಿ ಪತ್ನಿ ಸಾಕ್ಷಿ ಹೇಳಿದ್ದೇನು?

ಇನ್ನು ಇಂದಿನ ಪಂದ್ಯದ ವೇಳೆ ಧೋನಿ ಪತ್ನಿ ಸಾಕ್ಷಿ ಮತ್ತು ಪುತ್ರಿ ಜೀವಾ ಒಟ್ಟಿಗೆ ಕೂತು ಪಂದ್ಯ ವೀಕ್ಷಿಸಿದರು. ಪಂದ್ಯ ವೀಕ್ಷಣೆ ವೇಳೆ ಸಾಕ್ಷಿ ಪುತ್ರಿ ಜೀವಾಗೆ ಏನೋ ಹೇಳಿದ್ದು, ಈ ಕುರಿತು ಚರ್ಚೆ ಮಾಡುತ್ತಿರುವ ನೆಟ್ಟಿದರು ಸಾಕ್ಷಿ ಜೀವಾಗೆ Last match ಎಂದು ಹೇಳಿದ್ದಾರೆ ಎಂದು ವಾದಿಸುತ್ತಿದ್ದಾರೆ. ಹೀಗಾಗಿ ಇಂದೇ ಧೋನಿ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವಾದಿಸುತ್ತಿದ್ದಾರೆ. ಆದಾಗ್ಯೂ ಕೆಲ ಸಿಎಸ್ ಕೆ ಅಭಿಮಾನಿಗಳು ಮಾತ್ರ ಈ ವಾದವನ್ನು ಅಲ್ಲಗಳೆದಿದ್ದು, ಇಲ್ಲ ಧೋನಿ ಹಾಲಿ ಟೂರ್ನಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಮಾರು 5 ವರ್ಷಗಳ ಹಿಂದೆ ಆಗಸ್ಟ್ 15 ರಂದು ಸಂಜೆ 7:29 ಕ್ಕೆ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದಾಗ ಭಾರತೀಯ ಅಭಿಮಾನಿಗಳಿಗೆ ಆಘಾತ ಎದುರಾಗಿತ್ತು. ಏಕೆಂದರೆ ನಿವೃತ್ತಿಯಾಗುವ ಯಾವ ಸುಳಿವನ್ನು ಬಿಟ್ಟುಕೊಡದ ಧೋನಿ ತಮ್ಮ ತತಕ್ಷಣದ ನಿರ್ಧಾರದ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆದಾಗ್ಯೂ ಧೋನಿ ಐಪಿಎಲ್‌ನಲ್ಲಿ ಆಡುತ್ತಿದ್ದರಿಂದ ಅಭಿಮಾನಿಗಳು ಧೋನಿಯ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೀಗ ಐಪಿಎಲ್​ಗೂ ಧೋನಿ ವಿದಾಯ ಹೇಳ್ತಾರಾ ಎಂಬ ಅನುಮಾನ ಮೂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT