ಫಿಲ್ ಸಾಲ್ಟ್ ಬ್ಯಾಟಿಂಗ್ 
ಕ್ರಿಕೆಟ್

IPL 2025: 6,4,4,4,6,1,4... ಒಂದೇ ಓವರ್ ನಲ್ಲಿ 30 ರನ್ ಚಚ್ಚಿದ Phil Salt, ಬೆಚ್ಚಿದ Mitchell Starc

ಆರ್ ಸಿಬಿ ಇನ್ನಿಂಗ್ಸ್ ನ 3ನೇ ಓವರ್ ನಲ್ಲಿ ಅಕ್ಷರಶಃ ಫಿಲ್ ಸಾಲ್ಟ್ ರನ್ ಮಳೆಯನ್ನೇ ಹರಿಸಿದರು. ಡೆಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ 3ನೇ ಓವರ್ ನಲ್ಲಿ ಸಾಲ್ಟ್-ಕೊಹ್ಲಿ ಬರೊಬ್ಬರಿ 30 ರನ್ ಚಚ್ಚಿದರು.

ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಆರಂಭ ಪಡೆದಿತ್ತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ಭರ್ಜರಿ ಆರಂಭ ಪಡೆಯಿತು.

ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 61 ರನ್ ಗಳ ಜೊತೆಯಾಟವಾಡಿತು. ಅದೂ ಕೂಡ ಕೇವಲ 3.4 ಓವರ್ ನಲ್ಲಿ..

ಆರ್ ಸಿಬಿ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಫಿಲ್ ಸಾಲ್ಟ್ ಕೇವಲ 17 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 37 ರನ್ ಗಳಿಸಿ ರನೌಟ್ ಗೆ ಬಲಿಯಾದರು.

ಒಂದೇ ಓವರ್ ನಲ್ಲಿ 30ರನ್

ಇನ್ನು ಆರ್ ಸಿಬಿ ಇನ್ನಿಂಗ್ಸ್ ನ 3ನೇ ಓವರ್ ನಲ್ಲಿ ಅಕ್ಷರಶಃ ಫಿಲ್ ಸಾಲ್ಟ್ ರನ್ ಮಳೆಯನ್ನೇ ಹರಿಸಿದರು. ಡೆಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ 3ನೇ ಓವರ್ ನಲ್ಲಿ ಸಾಲ್ಟ್-ಕೊಹ್ಲಿ ಬರೊಬ್ಬರಿ 30ರನ್ ಚಚ್ಚಿದರು. ಸ್ಟಾರ್ಕ್ ಎಸೆದ ಮೊದಲ ಎಸೆತವನ್ನೇ ಮಿಡ್ ಆನ್ ನತ್ತ ಸಿಕ್ಸರ್ ಗೆ ಭಾರಿಸಿದರು. 2ನೇ ಎಸೆತವನ್ನು ಬ್ಯಾಕ್ ವರ್ಡ್ ಗೆ ಭಾರಿಸಿ ಬೌಂಡರಿ ಪಡೆದರು.

3ನೇ ಎಸೆತದಲ್ಲಿ ಮಿಡ್ ಆನ್ ನತ್ತ ಭಾರಿಸಿ ಬೌಂಡರಿ ಪಡೆದರು. 4ನೇ ಎಸೆತದಲ್ಲಿ ಮೆಚೆಲ್ ಸ್ಟಾರ್ಕ್ ಎಸೆದ ನೋಬಾಲ್ ಅನ್ನು ಸಾಲ್ಟ್ ಮಿಡ್ ಆಫ್ ನತ್ತ ಭಾರಿಸಿ ಬೌಂಡರಿ ಪಡೆದರು. ನಂತರದ ಫ್ರೀ ಹಿಟ್ ಎಸೆತವನ್ನು ಸಮರ್ಥವಾಗಿ ಬಳಸಿಕೊಂಡ ಸಾಲ್ಟ್ ಔಟ್ ಸೈಡ್ ಆಫ್ ನತ್ತ ಭಾರಿ ಸಿಕ್ಸ್ ಪಡೆದರು. ನಂತರದ ಎಸೆತದಲ್ಲಿ ಸಾಲ್ಟ್ ಸಿಂಗಲ್ ಪಡೆದರೆ, ಅಂತಿಮ ಎಸೆತದಲ್ಲಿ ಕೊಹ್ಲಿ ಬೌಂಡರಿ ಪಡದರು. ಆ ಮೂಲಕ ಆರ್ ಸಿಬಿ ಪರ ಆ ಓವರ್ ನಲ್ಲಿ ಬರೊಬ್ಬರಿ 30ರನ್ ಬಂತು.

ಕೊಹ್ಲಿ ಎಡವಟ್ಟು ರನೌಟ್ ಗೆ ಬಲಿಯಾದ ಸಾಲ್ಟ್

ಇನ್ನು ಈ ಅದ್ಭುತ ಓವರ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಮಾಡಿದ ಎಡವಟ್ಟಿನಿಂದಾಗಿ ಫಿಲ್ ಸಾಲ್ಟ್ ರನೌಟ್ ಗೆ ಬಲಿಯಾದರು. ಅಕ್ಸರ್ ಪಟೇಲ್ ಎಸೆದ 4ನೇ ಓವರ್ ನ 5ನೇ ಎಸೆತದಲ್ಲಿ ಸಾಲ್ಟ್ ಚೆಂಡನ್ನು ಕವರ್ ನತ್ತ ತಳ್ಳಿ ಸಿಂಗಲ್ ಪಡೆಯಲು ಮುಂದಾದರು. ಆದರೆ ಈ ವೇಳೆ ನಡೆದ ಗೊಂದಲದಿಂದಾಗಿ ಕೊಹ್ಲಿ ಸಿಂಗಲ್ ಗಾಗಿ ಓಡಲಿಲ್ಲ. ಆದರೆ ಅದಾಗಲೇ ಅರ್ಧ ಕ್ರೀಸ್ ಗೆ ಓಡಿ ಬಂದಿದ್ದ ಸಾಲ್ಟ್ ಮರಳಿ ಕ್ರೀಸ್ ತಲುಪುವ ವೇಳೆಗೆ ಕೆಎಲ್ ರಾಹುಲ್ ಬೇಲ್ಸ್ ಎಗರಿಸಿದ್ದರು. ಹೀಗಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸಾಲ್ಟ್ ಅನಗತ್ಯ ರನೌಟ್ ಗೆ ಬಲಿಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT