ರಾಹುಲ್ ದ್ರಾವಿಡ್ 
ಕ್ರಿಕೆಟ್

'ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದಾಗ...': 'ಇಂಪ್ಯಾಕ್ಟ್ ಪ್ಲೇಯರ್' ರೂಲ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದು...

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ರಾಷ್ಟ್ರೀಯ ತಂಡದ ಆಯ್ಕೆಗೆ ಈ ನಿಯಮವು ಒಡ್ಡುವ ಸವಾಲುಗಳನ್ನು ವಿವರಿಸಿದ್ದು, ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಐಪಿಎಲ್ ಅನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಿದೆ ಎಂದಿದ್ದಾರೆ.

ರಾಜಸ್ಥಾನ್ ರಾಯಲ್ಸ್ (RR) ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಮಾತನಾಡಿದ್ದು, ತಾವು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದಾಗ ಈ ನಿಯಮದ ಬಗ್ಗೆ ಆಸಕ್ತಿ ಇರಲಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ರಾಷ್ಟ್ರೀಯ ತಂಡದ ಆಯ್ಕೆಗೆ ಈ ನಿಯಮವು ಒಡ್ಡುವ ಸವಾಲುಗಳನ್ನು ವಿವರಿಸಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಐಪಿಎಲ್ ಅನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಿದೆ. ಏಕೆಂದರೆ, ತಮ್ಮ ತಂಡವನ್ನು ಬಲಪಡಿಸಲು ಕಾರ್ಯತಂತ್ರದ ಭಾಗವಾಗಿ ಮಾಡಬಹುದು. ಆದರೆ, ಈ ನಿಯಮವು ಆಲ್-ರೌಂಡರ್‌ಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆಲ್‌ರೌಂಡರ್‌ಗಳ ಬದಲಿಗೆ ತಂಡಗಳು ಶುದ್ಧ ಬ್ಯಾಟ್ಸ್‌ಮನ್‌ಗಳು ಅಥವಾ ಬೌಲರ್‌ಗಳನ್ನು ಬಳಸಲು ಮುಂದಾಗುತ್ತವೆ ಎಂದಿದ್ದಾರೆ.

ಇತ್ತೀಚೆಗೆ ಎಂಎಸ್ ಧೋನಿ ಕೂಡ ಈ ನಿಯಮದ ಕುರಿತು ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು. ಬಳಿಕ ಈ ನಿಯಮದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. 'ಇದು ಖಂಡಿತವಾಗಿಯೂ ವಿಭಿನ್ನ ಚಲನಶೀಲತೆಯನ್ನು ಸೇರಿಸಿದೆ' ಎಂದು ದ್ರಾವಿಡ್ ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದರು.

'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದಾಗ, ಇಂಪ್ಯಾಕ್ಟ್ ಪ್ಲೇಯರ್ ನಿಯಮ ನನಗೆ ಇಷ್ಟವಾಗಿರಲಿಲ್ಲ. ಅದು ಆಟವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವುದಿಲ್ಲ ಎಂಬ ಕಾರಣಕ್ಕಾಗಿ ಅಲ್ಲ - ಅದು ಖಂಡಿತವಾಗಿಯೂ ಮಾಡುತ್ತದೆ. ಅದರ ಜೊತೆಗೆ ಇದು ಸಂಕೀರ್ಣತೆಯನ್ನು ಸೇರಿಸುತ್ತದೆ ಮತ್ತು ಕೊನೆಯವರೆಗೂ ಪಂದ್ಯಗಳನ್ನು ಜೀವಂತವಾಗಿರಿಸುತ್ತದೆ. ಆದರೆ, ರಾಷ್ಟ್ರೀಯ ತಂಡದ ದೃಷ್ಟಿಕೋನದಿಂದ, ಇದು ಕೆಲವು ಸವಾಲುಗಳನ್ನು ಮುಂದಿಡುತ್ತದೆ' ಎಂದರು.

'ಅಂಕಿಅಂಶಗಳ ಪ್ರಕಾರ, ತಂಡಗಳು ಹೆಚ್ಚುವರಿ ಬ್ಯಾಟಿಂಗ್ ಸ್ಪೆಷಲಿಸ್ಟ್‌ಗಳನ್ನು ಹೊಂದಿರುವುದರಿಂದ ಸ್ಕೋರಿಂಗ್ ದರಗಳು ಹೆಚ್ಚಿವೆ. ಇದರರ್ಥ ಯಾವುದೇ ತಂಡವು ನಿಜವಾಗಿಯೂ ಆಟದಿಂದ ಹೊರಗುಳಿದಿಲ್ಲ. ನೀವು 8ನೇ ಸ್ಥಾನದಲ್ಲಿ ಅಥವಾ 9ನೇ ಸ್ಥಾನದಲ್ಲಿ ಬ್ಯಾಟ್ಸ್‌ಮನ್ ಅನ್ನು ಹೊಂದಬಹುದು. ಇದು ಆರು ಅಥವಾ ಏಳು ವಿಕೆಟ್‌ಗಳನ್ನು ಕಳೆದುಕೊಂಡ ನಂತರವೂ ಆಕ್ರಮಣಕಾರಿ ಹೊಡೆತಕ್ಕೆ ಅವಕಾಶ ನೀಡುತ್ತದೆ' ಎಂದು ದ್ರಾವಿಡ್ ಹೇಳಿದರು.

'ಒಬ್ಬ ತರಬೇತುದಾರನಾಗಿ, ನೀವು ಆಲ್‌ರೌಂಡರ್‌ಗಳನ್ನು ಅಭಿವೃದ್ಧಿಪಡಿಸಲು ಬಯಸುತ್ತೀರಿ ಮತ್ತು ಹಳೆಯ 11 vs 11 ಸ್ವರೂಪದ ಅಡಿಯಲ್ಲಿ, ಕೆಲವು ಆಟಗಾರರಿಗೆ ವಿಭಿನ್ನ ಸಂದರ್ಭಗಳಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಹೆಚ್ಚಿನ ಅವಕಾಶಗಳು ಸಿಗುತ್ತಿದ್ದವು. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಅದನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿದೆ. ಆಲ್‌ರೌಂಡರ್ ಅನ್ನು ಹೊಂದಿರುವುದು ಇನ್ನೂ ತಂಡಕ್ಕೆ ಸಮತೋಲನ ತರುತ್ತದೆ. ಆದರೆ, ತಂಡಗಳಿಗೆ ಸರಿಯಾದ ಆಟಗಾರರು ಸಿಗದಿದ್ದಾಗ ಒಬ್ಬರಿಲ್ಲದೆಯೂ ನಿರ್ವಹಿಸಬಹುದು' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT