ಕೆಎಲ್ ರಾಹುಲ್ 
ಕ್ರಿಕೆಟ್

IPL 2025: 'ಪಿಚ್ ಟ್ರಿಕ್ಕಿಯಾಗಿತ್ತು.. ಆದ್ರೆ ಇದು ನನ್ನ ಗ್ರೌಂಡ್, ಬೆಂಗಳೂರು ನನ್ನ ಹೃದಯದಲ್ಲಿದೆ': KL Rahul ಮಾತು!

ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನೆರವಾದ ಕೆಎಲ್ ರಾಹುಲ್ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದರಾದರೂ, ಬಳಿಕ ಲಯ ಕಂಡುಕೊಂಡು ಆರ್ ಸಿಬಿ ಬೌಲರ್ ಗಳ ಮೇಲೆ ಸವಾರಿ ಮಾಡಿದರು.

ಬೆಂಗಳೂರು: ಐಪಿಎಲ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ ಕನ್ನಡಿಗ ಕೆಎಲ್ ರಾಹುಲ್ (KL Rahul) ಇದು ನಾನು ಆಡಿ ಬೆಳೆದ ಗ್ರೌಂಡ್.. ಬೆಂಗಳೂರು ನನ್ನ ಹೃದಯದಲ್ಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು. ಆರ್ ಸಿಬಿ ನೀಡಿದ 164 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ತಂಡ ಕನ್ನಡಿಗ ಕೆಎಲ್ ರಾಹುಲ್ (ಅಜೇಯ 93) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗೆದ್ದು ಬೀಗಿತು. ಡೆಲ್ಲಿ ಕೇವಲ 17.5 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯ ದಾಖಲಿಸಿತು.

ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್

ಇನ್ನು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನೆರವಾದ ಕೆಎಲ್ ರಾಹುಲ್ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದರಾದರೂ, ಬಳಿಕ ಲಯ ಕಂಡುಕೊಂಡು ಆರ್ ಸಿಬಿ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಗಳಿಸಿದರು. ರಾಹುಲ್ ಗೆ ಉತ್ತಮ ಸಾಥ್ ನೀಡಿದ ಸ್ಟಬ್ಸ್ ಅಜೇಯ 38 ರನ್ ಗಳಿಸಿದರು.

ಪಿಚ್ ಟ್ರಿಕಿಯಾಗಿತ್ತು

ಪಂದ್ಯದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆಎಲ್ ರಾಹುಲ್, 'ಪಿಚ್ ನಿಜಕ್ಕೂ ಟ್ರಿಕ್ಕಿಯಾಗಿತ್ತು. 20 ಓವರ್‌ಗಳ ಕಾಲ ಸ್ಟಂಪ್‌ಗಳ ಹಿಂದೆ ಇದ್ದು, ಅದು ಹೇಗೆ ವರ್ತಿಸುತ್ತದೆ ಎಂಬುದನ್ನು ನೋಡುವುದು ನನಗೆ ಸಹಾಯ ಮಾಡಿತು. ವಿಕೆಟ್ ಕೀಪಿಂಗ್‌ನಿಂದ ಚೆಂಡು ಸ್ವಲ್ಪ ಮಟ್ಟಿಗೆ ವಿಕೆಟ್‌ನಲ್ಲಿ ನಿಧಾನವಾಗಿ ಬರುತ್ತಿದೆ ಎಂದು ನಾನು ಅರಿತುಕೊಂಡೆ. ಆದರೆ ಅದು ಪಂದ್ಯದ ಉದ್ದಕ್ಕೂ ಸ್ಥಿರವಾಗಿತ್ತು. ಹೀಗಾಗಿ ನನ್ನ ಶಾಟ್ ಸೆಲೆಕ್ಷನ್ ನನಗೆ ಸುಲಭವಾಯಿತು.

ಉತ್ತಮ ಆರಂಭವನ್ನು ಪಡೆಯಲು, ಆರಂಭದಲ್ಲಿ ಆಕ್ರಮಣಕಾರಿಯಾಗಿರಲು ಮತ್ತು ಅಲ್ಲಿಂದ ಅದನ್ನು ನಿರ್ಣಯಿಸಲು ನಾನು ಬಯಸಿದ್ದೆ. ನಾನು ದೊಡ್ಡ ಸಿಕ್ಸ್ ಹೊಡೆಯಲು ಪ್ರಯತ್ನಿಸುತ್ತಿದ್ದರೆ, ಯಾವ ಪಾಕೆಟ್‌ಗಳನ್ನು ಗುರಿಯಾಗಿಸಿಕೊಳ್ಳಬೇಕೆಂದು ನನಗೆ ತಿಳಿದಿತ್ತು. ವಿಕೆಟ್ ಕೀಪಿಂಗ್ ಇತರ ಬ್ಯಾಟ್ಸ್‌ಮನ್‌ಗಳು ಹೇಗೆ ಆಡಿದರು ಮತ್ತು ಅವರು ಎಲ್ಲಿ ಔಟ್ ಆದರು ಎಂಬುದರ ಬಗ್ಗೆ ನನಗೆ ಒಂದು ಕಲ್ಪನೆಯನ್ನು ನೀಡಿತು ಎಂದು ಹೇಳಿದರು.

ಬೆಂಗಳೂರು ನನ್ನ ಹೃದಯದಲ್ಲಿದೆ

ಇದೇ ವೇಳೆ ರಜತ್ ಪಾಟಿದಾರ್ ತಮ್ಮ ಕ್ಯಾಚ್ ಕೈ ಚೆಲ್ಲಿದ ಕುರಿತು ಮಾತನಾಡಿದ ರಾಹುಲ್, 'ನಾನು ಅದೃಷ್ಟಶಾಲಿಯಾಗಿದ್ದೆ. ಕ್ಯಾಚ್ ಡ್ರಾಪ್ ನಿಂದ ಕೊಂಚ ಜಾಗರೂಕನಾಗಿ ಆಡಲು ಪ್ರಯತ್ನಿಸಿದೆ. ಅಂತೆಯೇ ಇದು ನನ್ನ ಮೈದಾನ, ಇದು ನನ್ನ ಮನೆ. ಬೇರೆಯವರಿಗಿಂತ ನನಗೆ ಇದು ಚೆನ್ನಾಗಿ ತಿಳಿದಿದೆ. ಇಲ್ಲಿ ಆಡುವುದನ್ನು ಆನಂದಿಸಿದೆ. ಬೆಂಗಳೂರು ನನ್ನ ಹೃದಯದಲ್ಲಿದೆ. ಬೆಂಗಳೂರಿಗರು ನನಗೆ ಸಪೋರ್ಟ್ ಮಾಡುತ್ತಾರೆ ಆದರೂ ತವರಿನ ತಂಡಕ್ಕೆ ಅವರ ಸಪೋರ್ಟ್ ಹೆಚ್ಚು ಎಂದು ನನಗೆ ತಿಳಿದಿದೆ ಎಂದು ಹೇಳಿದರು.

'ಇದು ನನ್ನ ಗ್ರೌಂಡ್': ರಾಹುಲ್ ಸೆಲೆಬ್ರೇಷನ್ ವೈರಲ್

ಇನ್ನು ವಿನ್ನಿಂಗ್ ಶಾಟ್ ಭಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆ 6 ವಿಕೆಟ್ ಗಳ ಭರ್ಜರಿ ಜಯ ತಂದುಕೊಟ್ಟ ಕೆಎಲ್ ರಾಹುಲ್ RCB ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಭಾವುಕರಾಗಿಯೇ ಸಂಭ್ರಮಿಸಿದರು. ಮೈದಾನದಲ್ಲಿ ಬ್ಯಾಟ್ ಮೂಲಕ ವೃತ್ತ ರಚಿಸಿ 'ಇದು ನನ್ನ ಗ್ರೌಂಡ್.. ಇಲ್ಲಿ ನಾನೇ ಕಿಂಗ್' ಎನ್ನುವ ರೀತಿಯಲ್ಲಿ ಸನ್ಹೆ ಮಾಡಿ ತೋರಿಸಿದರು. ಅಲ್ಲದೆ ಆರ್ ಸಿಬಿ ತಂಡಕ್ಕೆ ತಮ್ಮನ್ನು ಸೇರಿಸಿಕೊಳ್ಳದ ಫ್ರಾಂಚೈಸಿ ವಿರುದ್ಧವೂ ಕೆಎಲ್ ರಾಹುಲ್ ಈ ಮೂಲಕ ಪರೋಕ್ಷ ಅಸಮಾಧಾನ ತೋರಿದರು ಎನ್ನಲಾಗಿದೆ.

ಈ ಹಿಂದೆ ಆರ್ ಸಿಬಿ ಭಾಗವೇ ಆಗಿದ್ದ ಕೆಎಲ್ ರಾಹುಲ್ ರನ್ನು ಫ್ರಾಂಚೈಸಿ ಕೈಬಿಟ್ಟಿತ್ತು. ಅಲ್ಲದೆ ಕಳೆದ ಆಟಗಾರರ ಹರಾಜು ಪ್ರಕ್ರಿಯೆ ಸಂದರ್ಭದಲ್ಲೂ ಅಭಿಮಾನಿಗಳು ಈ ಬಾರಿ ಕೆಎಲ್ ರಾಹುಲ್ ತಂಡಕ್ಕೆ ಮರಳಲಿದ್ದಾರೆ ಎಂದು ಭಾವಿಸಿದ್ದರು. ಇದಕ್ಕೆ ಇಂಬು ನೀಡುವಂತೆ ಕಳೆದ ಬಾರಿಯ ಐಪಿಎಲ್ ನಲ್ಲಿ ಎಲ್ ಎಸ್ ಜಿ ಪರ ಆಡಿದ್ದ ರಾಹುಲ್ ರನ್ನು ಲಕ್ನೋ ಫ್ರಾಂಚೈಸಿ ನಡೆಸಿಕೊಂಡ ರೀತಿ ಆರ್ ಸಿಬಿ ಅಭಿಮಾನಿಗಳ ಕಣ್ಣು ಕೆಂಪಾಗಿಸಿತ್ತು. ಹೀಗಾಗಿ ಈ ಬಾರಿ ರಾಹುಲ್ ಆರ್ ಸಿಬಿ ಪರ ಆಡುತ್ತಾರೆ ಎಂದು ಭಾವಿಸಿದ್ದರು. ಆದರೆ ಆರ್ ಸಿಬಿ ಫ್ರಾಂಚೈಸಿಯ ಬದಲಿಗೆ ರಾಹುಲ್ ಡೆಲ್ಲಿ ಪಾಲಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT