ರಜತ್ ಪಟಿದಾರ್ 
ಕ್ರಿಕೆಟ್

IPL 2025: "not acceptable.. ತವರಿನ ಅನುಕೂಲ ಸಿಗುತ್ತಿಲ್ಲ..''; DC ವಿರುದ್ಧ RCB ಸೋಲಿಗೆ 'ಚಿನ್ನಸ್ವಾಮಿ'ಯನ್ನೇ ದೂರಿದ Rajat Patidar?

ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಬ್ಯಾಟರ್‌ಗಳು ಅತಿಯಾದ ಆತ್ಮವಿಶ್ವಾಸ ಹೊಂದಿದ್ದರೆ ಎಂದು ಹೇಳಲು ಸಾಧ್ಯವಿಲ್ಲ, ಪ್ರತಿಯೊಬ್ಬ ಬ್ಯಾಟರ್ ಉತ್ತಮ ಮನಸ್ಥಿತಿಯಲ್ಲಿದ್ದರು..

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ನಾಯಕ ರಜತ್ ಪಟಿದಾರ್ ಅಸಮಾಧಾನಗೊಂಡಿದ್ದು, ತಮ್ಮ ತಂಡಕ್ಕೆ ತವರಿನ ಅನುಕೂಲ ಸಿಗುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಫಿಲ್ ಸಾಲ್ಟ್ ಶ್(37) ಮತ್ತು ಟಿಮ್ ಡೇವಿಡ್ (37) ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕನ್ನಡಿಗ ಕೆಎಲ್ ರಾಹುಲ್ (ಅಜೇಯ 93 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು 17.5 ಓವರ್ ನಲ್ಲೇ 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.

RCB ಸೋಲಿಗೆ ಚಿನ್ನಸ್ವಾಮಿಯನ್ನೇ ದೂರಿದ Rajat Patidar

ಇನ್ನು ಈ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಆರ್ ಸಿಬಿ ನಾಯಕ ರಜತ್ ಪಟಿದಾರ್, ತಂಡದಲ್ಲಿನ ಹಲವು ಅಂಶಗಳ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಬ್ಯಾಟರ್ ಗಳ ವೈಫಲ್ಯದ ಕುರಿತು ಮಾತನಾಡಿದರು. 'ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಬ್ಯಾಟರ್‌ಗಳು ಅತಿಯಾದ ಆತ್ಮವಿಶ್ವಾಸ ಹೊಂದಿದ್ದರೆ ಎಂದು ಹೇಳಲು ಸಾಧ್ಯವಿಲ್ಲ, ಪ್ರತಿಯೊಬ್ಬ ಬ್ಯಾಟರ್ ಉತ್ತಮ ಮನಸ್ಥಿತಿಯಲ್ಲಿದ್ದರು, ಸರಿಯಾದ ಉದ್ದೇಶವನ್ನು ತೋರಿಸುತ್ತಿದ್ದರು. ಆದರೆ 80 ಕ್ಕೆ 1 ರಿಂದ 90 ಕ್ಕೆ 4 ಕ್ಕೆ ಹೋಗುವುದು ಸ್ವೀಕಾರಾರ್ಹವಲ್ಲ, ನಮ್ಮಲ್ಲಿ ಉತ್ತಮ ಬ್ಯಾಟಿಂಗ್ ಲೈನ್-ಅಪ್ ಇದೆ, ಆದರೆ ನಾವು ಪರಿಸ್ಥಿತಿಯನ್ನು ನಿರ್ಣಯಿಸಬೇಕಾಗಿದೆ' ಎಂದು ಹೇಳಿದರು.

RCBಗೆ ತವರಿನ ಅನುಕೂಲ ಸಿಗುತ್ತಿಲ್ಲ

ಇದೇ ವೇಳೆ RCBಗೆ ತವರಿನ ಅನುಕೂಲ ಸಿಗುತ್ತಿಲ್ಲ ಎಂದೂ ಹೇಳಿದ ಪಟಿದಾರ್, 'ನಾವು ವಿಕೆಟ್ ನೋಡಿದ ರೀತಿ ತುಂಬಾ ಭಿನ್ನವಾಗಿತ್ತು ಎಂದು ನಾನು ಭಾವಿಸುತ್ತೇನೆ. ಅದು ಉತ್ತಮ ಬ್ಯಾಟಿಂಗ್ ವಿಕೆಟ್ ಎಂದು ನಾವು ಭಾವಿಸಿದ್ದೆವು, ಆದರೆ ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.

ಸಾಮಾನ್ಯವಾಗಿ ಐಪಿಎಲ್ ಪಂದ್ಯಗಳಲ್ಲಿ ತವರಿನ ತಂಡದ ಅನುಕೂಲಕ್ಕೆಂದು ಅವರಿಗೆ ಸಹಾಯವಾಗುವಂತೆ ಪಿಚ್ ಅನ್ನು ತಯಾರಿಸಲಾಗುತ್ತದೆ. ಆದರೆ, ಈ ಬಾರಿಯ ಸೀಸನ್ನಲ್ಲಿ ಅದು ನಡೆಯುತ್ತಿಲ್ಲ. ಡೆಲ್ಲಿ ವಿರುದ್ಧ ಸೋತ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಕೂಡ, ನಾವು ಅಂದುಕೊಂಡಂತೆ ಬೆಂಗಳೂರು ಪಿಚ್ ಇರಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಟಿಮ್ ಡೇವಿಡ್ ಪ್ರದರ್ಶನ ಶ್ಲಾಘನೀಯ

ಅಂತೆಯೇ, 'ಟಿಮ್ ಡೇವಿಡ್ ಅಂತಿಮ ಹಂತದಲ್ಲಿ ವೇಗವನ್ನು ಹೆಚ್ಚಿಸಿದ ರೀತಿ ಅದ್ಭುತವಾಗಿತ್ತು, ಪವರ್‌ಪ್ಲೇನಲ್ಲಿ ನಮ್ಮ ಬೌಲಿಂಗ್ ಕೂಡ ಉತ್ತಮವಾಗಿತ್ತು. ನಾವು ನಮ್ಮ ದಾಖಲೆಯ ಬಗ್ಗೆ ಯೋಚಿಸುತ್ತಿಲ್ಲ, ಆದರೆ ನಾವು ಉತ್ತಮ ಕ್ರಿಕೆಟ್ ಆಡಬೇಕು ಮತ್ತು ಅದನ್ನು ಸರಳವಾಗಿ ಇಡಬೇಕು ಎಂದು ರಜತ್ ಪಟಿದಾರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT