ಕೆಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ದಂಪತಿ 
ಕ್ರಿಕೆಟ್

Evaarah: KL Rahul ಜನ್ಮದಿನದಂದೇ ಪುತ್ರಿಯ ಹೆಸರು ಬಹಿರಂಗ, ಅರ್ಥ ಏನು ಗೊತ್ತಾ?

ಕೆ.ಎಲ್. ರಾಹುಲ್ ಅವರ 33ನೇ ಹುಟ್ಟುಹಬ್ಬದಂದು, ಸ್ಟಾರ್ ಕ್ರಿಕೆಟಿಗ ಮತ್ತು ಅವರ ಪತ್ನಿ ಅತಿಯಾ ಶೆಟ್ಟಿ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಮುಂಬೈ: ಕ್ರಿಕೆಟಿಗ ಕೆಎಲ್ ರಾಹುಲ್ (KL Rahul) ಮತ್ತು ಬಾಲಿವುಡ್ ನಟಿ ಅತಿಯಾ ಶೆಟ್ಟಿ (Athiya Shetty) ತಮ್ಮ ಪುತ್ರಿಯ ಹೆಸರನ್ನು ಕೊನೆಗೂ ಬಹಿರಂಗ ಮಾಡಿದ್ದು, ಪುಟ್ಟ ಮಗುವಿಗೆ Evaarah (ಇವಾರಾ) ಎಂದು ನಾಮಕರಣ ಮಾಡಿದ್ದಾರೆ.

ಕೆ.ಎಲ್. ರಾಹುಲ್ ಅವರ 33ನೇ ಹುಟ್ಟುಹಬ್ಬದಂದು, ಸ್ಟಾರ್ ಕ್ರಿಕೆಟಿಗ ಮತ್ತು ಅವರ ಪತ್ನಿ ಅತಿಯಾ ಶೆಟ್ಟಿ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಮಗಳಿಗೆ ಇವಾರಾ ಎಂದು ಹೆಸರಿಸಿಟ್ಟಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಗುವಿನ ಹೆಸರು ಘೋಷಣೆ ಮಾಡಲು ಸ್ಟಾರ್ ದಂಪತಿ ಜಂಟಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಕೆ.ಎಲ್. ರಾಹುಲ್ ತನ್ನ ಮಗಳನ್ನು ಹಿಡಿದುಕೊಂಡಿದ್ದು, ಅತಿಯಾ ಶೆಟ್ಟಿ ಕೂಡ ಮಗುವನ್ನು ಮುದ್ದಾಡುತ್ತಿರುವುದು ಪೋಸ್ಟ್ ನಲ್ಲಿ ಕಂಡುಬಂದಿದೆ. ಈ ಚಿತ್ರದ ಮೇಲಿನ ಶೀರ್ಷಿಕೆಯಲ್ಲಿ "ನಮ್ಮ ಹೆಣ್ಣು ಮಗು, ನಮ್ಮ ಸರ್ವಸ್ವ. ಇವಾರಾ/ Evaarah ಎಂದು ಬರೆದಿದ್ದಾರೆ.

ಇವಾರಾ ಹೆಸರಿನ ಅರ್ಥವೇನು?

ಕೆಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ದಂಪತಿಗಳು ತಮ್ಮ ಪುತ್ರಿಗೆ ಇವಾರಾ ಎಂದು ಹೆಸರಿಟ್ಟಿದ್ದು, ಇವಾರಾ ಎಂದರೆ 'ದೇವರ ಉಡುಗೊರೆ' ಎಂದರ್ಥ ಬರುತ್ತದೆ. ಇಂತಹ ಸುಂದರವಾದ ಹೆಸರನ್ನು ಕೆಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಜೋಡಿ ತಮ್ಮ ಪುತ್ರಿಗೆ ಇಟ್ಟಿದೆ. ಇನ್ನು ರಾಹುಲ್ ದಂಪತಿಗಳ ಜಂಟಿ ಪೋಸ್ಟ್ ಗೆ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೃದಯದ ಎಮೋಜಿ ಹಾಕಿ ಸಂತಸ ವ್ಯಕ್ತಪಡಿಸಿದ್ದರೆ, ನಟಿ ಸಮಂತ ರೂತ್ ಪ್ರಭು ಕೂಡ ಹೃದಯದ ಎಮೋಜಿ ಹಾಕಿ ಶುಭ ಕೋರಿದ್ದಾರೆ.

ಅಂದಹಾಗೆ 2023ರ ಜನವರಿ 23ರಂದು ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ವಿವಾಹವಾಗಿತ್ತು. ಅತಿಯಾ ಅವರ ತಂದೆ, ಹಿರಿಯ ನಟ ಸುನೀಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ವಿವಾಹ ನೆರವೇರಿಸಿದ್ದರು. ಬಳಿಕ ಮಾರ್ಚ್ 24 ರಂದು ಅತಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ ತಮ್ಮ ಮೊದಲ ಮಗುವಾದ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT