ಯುಜ್ವೇಂದ್ರ ಚಾಹಲ್ - ಆರ್‌ಜೆ ಮಹ್ವಾಶ್ 
ಕ್ರಿಕೆಟ್

ಚಾಹಲ್ ಜೊತೆ ಪಂಜಾಬ್ ಕಿಂಗ್ಸ್ ತಂಡದ ಬಸ್ ಹತ್ತಿದ ಆರ್‌ಜೆ ಮಹ್ವಾಶ್; ಡೇಟಿಂಗ್ ವದಂತಿಗಳಿಗೆ ಪುಷ್ಠಿ!

ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಪಂಜಾಬ್ ಕಿಂಗ್ಸ್ ಪಂದ್ಯಕ್ಕೂ ಮುನ್ನ, ಮಹ್ವಾಶ್ ಅವರು ಚಾಹಲ್ ಜೊತೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿ ಲೆಗ್ ಸ್ಪಿನ್ನರ್‌ನೊಂದಿಗೆ ಫ್ರಾಂಚೈಸಿಯ ತಂಡದ ಬಸ್ ಹತ್ತುತ್ತಿರುವುದು ಕಂಡುಬಂದಿದೆ.

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿ ಆರ್‌ಜೆ ಮಹ್ವಾಶ್ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಮಹ್ವಾಶ್ ತಾವು 'ಸಿಂಗಲ್' ಎಂದಿದ್ದರೂ ಕೂಡ ಪದೇ ಪದೆ ಪಂಜಾಬ್ ಕಿಂಗ್ಸ್ ತಂಡದ ಚಾಹಲ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಇಬ್ಬರ ನಡುವಿನ ಡೇಟಿಂಗ್ ವದಂತಿಗೆ ಇಂಬು ಸಿಕ್ಕಂತಾಗಿದೆ. ಐಪಿಎಲ್ 2025ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ಪಂದ್ಯಗಳು ಇರುವ ವೇಳೆಯಲ್ಲಿ ಮಹ್ವಾಶ್ ಅವರು ಚಾಹಲ್ ಜೊತೆಗಿದ್ದು ತಂಡವನ್ನು ಬೆಂಬಲಿಸುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ.

ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಪಂಜಾಬ್ ಕಿಂಗ್ಸ್ ಪಂದ್ಯಕ್ಕೂ ಮುನ್ನ, ಮಹ್ವಾಶ್ ಅವರು ಚಾಹಲ್ ಜೊತೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿ ಲೆಗ್ ಸ್ಪಿನ್ನರ್‌ನೊಂದಿಗೆ ಫ್ರಾಂಚೈಸಿಯ ತಂಡದ ಬಸ್ ಹತ್ತುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಅನೇಕರು ಇಬ್ಬರೂ ನಿಜವಾಗಿಯೂ ಪರಸ್ಪರ ಡೇಟಿಂಗ್ ಮಾಡುತ್ತಿರಬಹುದು ಎಂದು ಊಹಿಸಿದ್ದಾರೆ.

ಪಂಜಾಬ್ ತಂಡದ ಸದಸ್ಯರಲ್ಲದಿದ್ದರೂ ಆರ್‌ಜೆ ಮಹ್ವಾಶ್ ಅವರು ಪಿಬಿಕೆಎಸ್ ತಂಡದ ಬಸ್ ಹತ್ತುವುದನ್ನು ನೋಡಿದ ಅಭಿಮಾನಿಗಳು, ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಚಾಹಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇತ್ತೀಚಿನ ಪಂದ್ಯಗಳಲ್ಲಿ ಪಿಬಿಕೆಎಸ್ ಪರ ಪಂದ್ಯ ಗೆಲ್ಲುವ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಗೆಲುವಿನಲ್ಲಿ ಈ ಲೆಗ್ ಸ್ಪಿನ್ನರ್ ಫ್ರಾಂಚೈಸಿಗೆ ಪ್ರಮುಖ ಪಾತ್ರ ವಹಿಸಿದ್ದರು. ಕೆಕೆಆರ್ ವಿರುದ್ಧ 4 ವಿಕೆಟ್ ಪಡೆದ ನಂತರ ಚಾಹಲ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಮಹ್ವಾಶ್ ಕೂಡ ಶ್ಲಾಘಿಸಿದ್ದರು.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಆರ್‌ಜೆ ಮಹ್ವಾಶ್ ಅವರೊಂದಿಗೆ ಚಾಹಲ್ ಕಾಣಿಸಿಕೊಂಡಾಗಿನಿಂದ, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಕೇಳಿಬಂದಿದ್ದವು. ಬಳಿಕ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದ ಮಹ್ವಾಶ್, ನಾನು ಕ್ಯಾಶುಯಲ್ ಡೇಟಿಂಗ್‌ನಲ್ಲಿ ನಂಬಿಕೆ ಇಡುವುದಿಲ್ಲ. ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಆ ಸಂಬಂಧ ಮುರಿದು ಬೀಳುವುದನ್ನು ನೋಡಿದ್ದೇನೆ ಎಂದಿದ್ದಾರೆ.

'ನಾನು ಸಿಂಗಲ್ ಆಗಿದ್ದೇನೆ ಮತ್ತು ಇಂದಿನ ಕಾಲದಲ್ಲಿ ಮದುವೆಯ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ನಾನು ಮದುವೆಯಾಗಬೇಕಾದಾಗ ಮಾತ್ರ ಡೇಟಿಂಗ್ ಮಾಡುತ್ತೇನೆ. ನಾನು ಕ್ಯಾಶುಯಲ್ ಡೇಟ್‌ಗಳಿಗೆ ಹೋಗುವುದಿಲ್ಲ ಏಕೆಂದರೆ, ನಾನು ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಮಾತ್ರ ಡೇಟಿಂಗ್ ಮಾಡುತ್ತೇನೆ. ಧೂಮ್ ಚಿತ್ರದಲ್ಲಿರುವಂತೆ ಹೆಂಡತಿ ಮತ್ತು ಮಕ್ಕಳೊಂದಿಗೆ ಭವಿಷ್ಯವನ್ನು ಕಲ್ಪಿಸಿಕೊಳ್ಳುವ ವ್ಯಕ್ತಿ ನಾನು. ಹೀಗಾಗಿ, ಮದುವೆಯನ್ನು ಗುರಿಯಾಗಿಟ್ಟುಕೊಂಡರೆ ಮಾತ್ರ ಉದ್ದೇಶಪೂರ್ವಕವಾಗಿ ಡೇಟಿಂಗ್ ಮಾಡುತ್ತೇನೆ' ಎಂದಿದ್ದಾರೆ.

ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ 2020ರ ಡಿಸೆಂಬರ್‌ನಲ್ಲಿ ಗುರಂಗಾಂವ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. 18 ತಿಂಗಳು ಪ್ರತ್ಯೇಕವಾಗಿ ವಾಸಿಸಿದ ನಂತರ, ಯುಜ್ವೇಂದ್ರ ಮತ್ತು ಧನಶ್ರೀ ಮಾರ್ಚ್ 20, 2025 ರಂದು ಅಧಿಕೃತವಾಗಿ ವಿಚ್ಛೇದನ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT