ಕೆಎಲ್ ರಾಹುಲ್ 
ಕ್ರಿಕೆಟ್

IPL 2025: LSG ವಿರುದ್ಧ ಕೆಎಲ್ ರಾಹುಲ್ ಅಬ್ಬರ; ಸಂಜೀವ್ ಗೋಯೆಂಕಾಗೆ ಡೋಂಟ್ ಕೇರ್ ಎಂದ ಕನ್ನಡಿಗ!

2022ರಿಂದ 2024ರವರೆಗೆ ರಾಹುಲ್ ಸಂಜೀವ್ ಗೋಯೆಂಕಾ ಒಡೆತನದ ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸಿದ್ದರು. 2024ರಲ್ಲಿ, ರಾಹುಲ್ ಎಲ್‌ಎಸ್‌ಜಿಯನ್ನು ತೊರೆದರು.

ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಎಲ್‌ಎಸ್‌ಜಿ ಮಾಜಿ ನಾಯಕ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿಗೆ ನೆರವಾದರು.

2022ರಿಂದ 2024ರವರೆಗೆ ರಾಹುಲ್ ಸಂಜೀವ್ ಗೋಯೆಂಕಾ ಒಡೆತನದ ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸಿದ್ದರು. 2024ರಲ್ಲಿ, ರಾಹುಲ್ ಎಲ್‌ಎಸ್‌ಜಿಯನ್ನು ತೊರೆದರು. ಹೆಚ್ಚಿನ ಸ್ವಾತಂತ್ರ್ಯದೊಂದಿಗೆ ಆಡಲು ಮತ್ತು ನಿರಾಳವಾದ ಡ್ರೆಸ್ಸಿಂಗ್ ರೂಂನ ಭಾಗವಾಗಲು ಬಯಸುವುದಾಗಿ ಹೇಳಿದ್ದರು. ಐಪಿಎಲ್ 2024ನೇ ಆವೃತ್ತಿಯ ಆರಂಭದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ಪಂದ್ಯವೊಂದರಲ್ಲಿ ಹೀನಾಯ ಸೋಲು ಕಂಡ ನಂತರ ಸಂಜೀವ್ ಗೋಯೆಂಕಾ ಮೈದಾನದಲ್ಲಿಯೇ ಕೆಎಲ್ ರಾಹುಲ್ ಅವರೊಂದಿಗೆ ಕೋಪದಿಂದ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

IPL 2025ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಕರಿಯಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ನಡುವಿನ ಪಂದ್ಯದ ಬಳಿಕ ರಾಹುಲ್ ಮತ್ತು ಗೋಯೆಂಕಾ ಮುಖಾಮುಖಿಯಾದರು. ಗೋಯೆಂಕಾ ರಾಹುಲ್ ಅವರನ್ನು ಮಾತನಾಡಿಸಲು ಪ್ರಯತ್ನ ಪಟ್ಟರು ಕ್ಯಾರೆ ಎನ್ನದೆ ರಾಹುಲ್ ಕೇವಲ ಹ್ಯಾಂಡ್‌ಶೇಕ್ ಮಾಡಿ ಮುಂದುವರಿದಿದ್ದಾರೆ. ಗೋಯೆಂಕಾ ರಾಹುಲ್‌ಗೆ ಏನೋ ಹೇಳಲು ಪ್ರಯತ್ನಿಸಿದರೂ, ರಾಹುಲ್ ಅದನ್ನು ಗಮನಿಸದೆ ಮುಂದೆ ನಡೆದಿದ್ದಾರೆ.

ಕೆಎಲ್ ರಾಹುಲ್ ದಾಖಲೆ

ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 5000 ರನ್‌ಗಳನ್ನು ತಲುಪಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಹುಲ್ 130 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ ಮತ್ತು ಡೇವಿಡ್ ವಾರ್ನರ್ (135), ವಿರಾಟ್ ಕೊಹ್ಲಿ (157), ಎಬಿ ಡಿವಿಲಿಯರ್ಸ್ (161) ಮತ್ತು ಶಿಖರ್ ಧವನ್ (168) ಅವರಂತಹ ಆಟಗಾರರನ್ನು ಹಿಂದಿಕ್ಕಿದ್ದಾರೆ.

ಗೋಯೆಂಕಾ ರಾಹುಲ್ ಬಗ್ಗೆ ಮಾತನಾಡಿ, 'ಕೆಎಲ್ ರಾಹುಲ್ ನನಗೆ ಯಾವಾಗಲೂ ಕುಟುಂಬದಂತೆ ಇದ್ದಾರೆ ಮತ್ತು ಮುಂದೆಯೂ ಅವರು ಹಾಗೆಯೇ ಇರುತ್ತಾರೆ. ಅವರು ಮೂರು ವರ್ಷಗಳ ಕಾಲ ಲಕ್ನೋ ತಂಡದ ನಾಯಕತ್ವ ವಹಿಸಿದ್ದರು ಮತ್ತು ಅವರ ಅಧಿಕಾರಾವಧಿಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿದ್ದಾರೆ. ಏನೇ ಆದರೂ ನಾನು ಅವರ ಒಳಿತನ್ನು ಪ್ರಾಮಾಣಿಕವಾಗಿ ಬಯಸುತ್ತೇನೆ' ಎಂದು ಟಿಆರ್‌ಎಸ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದರು.

'ಶರೀಫ್ ಇನ್ಸಾನ್ ಹೈ (ಅವರು ಒಳ್ಳೆಯ ವ್ಯಕ್ತಿ). ಅವರು ತುಂಬಾ ಪ್ರಾಮಾಣಿಕ ವ್ಯಕ್ತಿ ಮತ್ತು ಅವರಂತಹ ಪ್ರಾಮಾಣಿಕ ವ್ಯಕ್ತಿಗೆ ಎಲ್ಲವೂ ಒಳ್ಳೆಯದೇ ಆಗಬೇಕೆಂದು ನಾನು ಬಯಸುತ್ತೇನೆ. ಅವರು ತುಂಬಾ ಪ್ರತಿಭಾನ್ವಿತರು ಮತ್ತು ಅವರು ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಬೇಕೆಂದು ನಾನು ಬಯಸುತ್ತೇನೆ. ಅವರು ಚೆನ್ನಾಗಿ ಮಾಡುತ್ತಾರೆ ಎಂದು ನನಗೆ ಖಚಿತವಾಗಿದೆ. ನನ್ನ ಶುಭಾಶಯಗಳು ಅವರೊಂದಿಗೆ ಇವೆ' ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT