ಜಸ್ಪ್ರೀತ್ ಬುಮ್ರಾ 
ಕ್ರಿಕೆಟ್

IPL 2025: 'ಸಿಕ್ಸ್ ಹೊಡೆದ್ರೆ ಸಹಿಸಲ್ಲ'; SRH ವಿರುದ್ಧದ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ ನಡೆಗೆ ಟೀಕೆ

ಹೆನ್ರಿಚ್ ಕ್ಲಾಸೆನ್ ಅವರ ವಿಕೆಟ್ ಕಬಳಿಸುವ ಮೂಲಕ ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಹೈದರಾಬಾದ್‌ನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ನೇ ಆವೃತ್ತಿಯ 41ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಮುಂಬೈ ಇಂಡಿಯನ್ಸ್ (MI) ತಂಡ ಭರ್ಜರಿ ಜಯ ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದು ಮತ್ತಷ್ಟು ಬಲ ನೀಡಿದಂತಾಗಿದೆ.

ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವಿನ ಪಂದ್ಯದ ವೇಲೆ 31 ವರ್ಷದ ಜಸ್ಪ್ರೀತ್ ಬುಮ್ರಾ ಅವರು ಮೈದಾನದಲ್ಲಿ ನಡೆದುಕೊಂಡ ರೀತಿಗೆ ಇದೀಗ ಟೀಕೆಗೆ ಗುರಿಯಾಗಿದ್ದಾರೆ. ಎಸ್‌ಆರ್‌ಹೆಚ್ ಬ್ಯಾಟ್ಸ್‌ಮನ್ ಅಭಿನವ್ ಮನೋಹರ್ ಅವರು ಸಿಕ್ಸರ್ ಬಾರಿಸಿದ ನಂತರ, ಬುಮ್ರಾ ಅವರು ವೇಗವಾಗಿ, ಸೊಂಟದ ಎತ್ತರದ ಫುಲ್ ಟಾಸ್ ಎಸೆದರು. ಆ ಎಸೆತ ಬ್ಯಾಟರ್‌ಗೆ ತಗುಲಿ ಅವರು ನೆಲಕ್ಕೆ ಬಿದ್ದರು. ಈ ವೇಳೆ ಬುಮ್ರಾ ಅವರು ಅಭಿನವ್ ಅವರಿಗೆ ಏನಾಯ್ತು ಎಂದು ನೋಡದೆಯೇ ಹಿಂತಿರುಗಿ ಬೌಲಿಂಗ್ ಕಡೆಗೆ ನಡೆದಿರುವುದನ್ನು ಅಭಿಮಾನಿಗಳು ಟೀಕಿಸಿದ್ದಾರೆ.

13ನೇ ಓವರ್‌ನ ಬುಮ್ರಾ ಅವರ ಎರಡನೇ ಎಸೆತದಲ್ಲಿ ಮನೋಹರ್ ಸಿಕ್ಸರ್ ಬಾರಿಸುತ್ತಾರೆ. ಮುಂದಿನ ಎಸೆತದಲ್ಲೇ ಬುಮ್ರಾ ಯಾರ್ಕರ್ ಎಸೆಯಲು ಪ್ರಯತ್ನಿಸಿದ್ದು ಫುಲ್ ಟಾಸ್ ಆಗಿ ಮನೋಹರ್ ಅವರಿಗೆ ತಗುಲುತ್ತದೆ. ಅವರು ನೆಲಕ್ಕೆ ಬೀಳುತ್ತಾರೆ. ಈ ವೇಳೆ ಮನೋಹರ್ ಅವರನ್ನು ವಿಚಾರಿಸುವ ಬದಲು ಬುಮ್ರಾ ನೇರವಾಗಿ ಹಿಂದಕ್ಕೆ ನಡೆಯುತ್ತಾರೆ. ಬುಮ್ರಾ ಅವರು ನೀಡಿದ ಈ ಪ್ರತಿಕ್ರಿಯೆಗೆ ಸಾಮಾಜಿಕ ಮಾಧ್ಯಮದ ಅಭಿಮಾನಿಗಳು ಕಿಡಿಕಾರಿದ್ದಾರೆ.

'ಕ್ಷಮಿಸಿ, ಆದರೆ ಬುಮ್ರಾ ಅವರಿಗೆ ಸ್ಪೋರ್ಟ್ಸ್‌ಮೆನ್‌ಶಿಪ್ ಇಲ್ಲ. ಅವರು ಹೀಗೆ ಮಾಡಿರುವುದನ್ನು ಹಲವು ಬಾರಿ ಗಮನಿಸಿದ್ದೇನೆ. ಯಾರಾದರೂ ಅವರ ಎಸೆತದಲ್ಲಿ ವಿಶೇಷವಾಗಿ ಸಿಕ್ಸ್ ಬಾರಿಸಿದಾಗ, ಅವರು ಬ್ಯಾಟ್ಸ್‌ಮನ್ ಮೇಲೆ ಕೋಪಗೊಳ್ಳುತ್ತಾರೆ. ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕರುಣ್ ನಾಯರ್, ಈಗ ಮನೋಹರ್. ಫುಲ್ ಟಾಸ್ ನಂತರ ಅಭಿನವ್ ಅವರಿಗೆ ಏನಾಯಿತೆಂದು ಪರೀಕ್ಷಿಸಲು ಸಹ ಮುಂದಾಗಲಿಲ್ಲ, ಏಕೆಂದರೆ, ಬುಮ್ರಾ ಅಭಿನವ್ ಅವರಿಂದ ಸಿಕ್ಸ್ ಹೊಡೆಸಿಕೊಂಡಿದ್ದರು' ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಹೆನ್ರಿಚ್ ಕ್ಲಾಸೆನ್ ಅವರ ವಿಕೆಟ್ ಕಬಳಿಸುವ ಮೂಲಕ ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಮೈಲಿಗಲ್ಲು ತಲುಪಿದ ಏಕೈಕ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಉಪ್ಪಲ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯದ ಸಮಯದಲ್ಲಿ ಬುಮ್ರಾ ಈ ಮೈಲಿಗಲ್ಲನ್ನು ತಲುಪಿದ್ದಾರೆ.

ಪಂದ್ಯದ ಸಮಯದಲ್ಲಿ, ಬುಮ್ರಾ ನಾಲ್ಕು ಓವರ್‌ಗಳಲ್ಲಿ 39 ರನ್ ನೀಡಿ 1 ವಿಕೆಟ್ ಪಡೆದರು. ಐಪಿಎಲ್ 2025ರ ಆವೃತ್ತಿಯಲ್ಲಿ ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಬುಮ್ರಾ, 31.60 ರ ಸರಾಸರಿಯಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT