ವಿರಾಟ್ ಕೊಹ್ಲಿ 
ಕ್ರಿಕೆಟ್

IPL 2025, DC vs RCB: ಬೆಂಗಳೂರಿನಲ್ಲಿ ಕೆಎಲ್ ರಾಹುಲ್ ಸಂಭ್ರಮಾಚರಣೆ; ದೆಹಲಿಯಲ್ಲಿ ತಿರುಗೇಟು ನೀಡ್ತಾರಾ ವಿರಾಟ್ ಕೊಹ್ಲಿ?

ಐಪಿಎಲ್ 2025ರಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದ ಎಲ್ಲ ಪಂದ್ಯಗಳನ್ನು ಆರ್‌ಸಿಬಿ ಗೆದ್ದಿದೆ ಎಂಬುದನ್ನು ಗಮನಿಸಬೇಕಿದೆ.

ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಎದುರಿಸಲಿದೆ. ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ದೆಹಲಿ ತವರೂರಾಗಿದ್ದು, ಇಂದು ಎಲ್ಲರ ಚಿತ್ರ ಕೊಹ್ಲಿಯತ್ತ ನೆಟ್ಟಿದೆ. ಕಳೆದ ಬಾರಿ ಎರಡೂ ತಂಡಗಳು ಬೆಂಗಳೂರಿನಲ್ಲಿ ಮುಖಾಮುಖಿಯಾದಾಗ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿತ್ತು. ಆಗ ಕೆಎಲ್ ರಾಹುಲ್ ಅಜೇಯ 93 ರನ್‌ಗಳೊಂದಿಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಕೊನೆಯ ಎಸೆತವನ್ನು ಬೌಂಡರಿಯತ್ತ ಬಾರಿಸಿ ಬ್ಯಾಟ್‌ನಿಂದ ವೃತ್ತ ಬರೆದು ಮಧ್ಯದಲ್ಲಿ ಬ್ಯಾಟ್ ಅನ್ನು ಒತ್ತಿ ಈ ಗ್ರೌಂಡ್ ನಂದು ಎಂದಿದ್ದರು.

ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಯಾರಿಗೂ ಯಾವುದನ್ನೂ ವಾಪಸ್ ಕೊಡದೆ ಬಿಡುವವರಲ್ಲ. ಯಾರು ಏನೇ ಮಾಡಿದರೂ ಮುಂದಿನ ಪಂದ್ಯದಲ್ಲಿ ಅವರಿಗೆ ತಿರುಗೇಟು ನೀಡುವ ಸ್ವಭಾವ ಅವರದ್ದಾಗಿದ್ದು, ದೆಹಲಿಯಲ್ಲಿ RCB ಗೆದ್ದರೆ ಒಂದು ವಿಭಿನ್ನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದು ಪಕ್ಕಾ ಎನ್ನುವಂತಾಗಿದ್ದು, ಅಭಿಮಾನಿಗಳು ಕಾತರರಿಂದ ಕಾಯುತ್ತಿದ್ದಾರೆ.

ಐಪಿಎಲ್ 2025ರಲ್ಲಿ ಆರ್‌ಸಿಬಿ ಈವರೆಗೆ ತವರಿನಿಂದ ಹೊರಗೆ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಚಿನ್ನಸ್ವಾಮಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೆ, ಗುರುವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ RCB ಜಯ ಸಾಧಿಸಿದ್ದು, ಈ ಬರವನ್ನು ನೀಗಿಸಿದೆ. ಇದೀಗ ದೆಹಲಿಯಲ್ಲಿ ಪಂಜಾಬ್ ವಿರುದ್ಧ ಗೆಲುವು ಸಾಧಿಸುವ ಮೂಲಕ ತವರಿನ ಸೋಲಿಗೆ ಸೆಡ್ಡು ಹೊಡೆಯುವ ತವಕದಲ್ಲಿದೆ.

ವಿರಾಟ್ ಕೊಹ್ಲಿ ದೆಹಲಿ ವಿರುದ್ಧ ಮತ್ತು ಈ ಸ್ಥಳದಲ್ಲಿ ಆಡುವಾಗ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಬ್ಯಾಟಿಂಗ್ ಮಾಂತ್ರಿಕ 50.13 ಸರಾಸರಿಯಲ್ಲಿ 1103 ರನ್ ಗಳಿಸಿದ್ದಾರೆ ಮತ್ತು ಟಿ20 (ಐಪಿಎಲ್ ಮತ್ತು ಸಿಎಲ್‌ಟಿ20) ಗಳಲ್ಲಿ ದೆಹಲಿ (ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಡಿಸಿ ಎರಡೂ) ವಿರುದ್ಧ 136.67 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದರಲ್ಲಿ ಹತ್ತು ಅರ್ಧಶತಕಗಳು ಸೇರಿವೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟಿ20 ಪಂದ್ಯಗಳನ್ನು ಆಡುವಾಗ ಕೊಹ್ಲಿ 60.45 ಸರಾಸರಿಯನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿಯೇ ದೆಹಲಿಯಲ್ಲಿ ಅವರು 10 ಇನಿಂಗ್ಸ್‌ಗಳನ್ನು ಆಡಿದ್ದಾರೆ. ಇದರಲ್ಲಿ ಅವರು 145.48 ರ ಸ್ಟ್ರೈಕ್ ರೇಟ್‌ನಲ್ಲಿ 483 ರನ್‌ಗಳನ್ನು ಗಳಿಸಿದ್ದಾರೆ. ಈ ಕ್ರೀಡಾಂಗಣದಲ್ಲಿ ಅವರ ಅತ್ಯಧಿಕ ಸ್ಕೋರ್ 99 ಆಗಿದ್ದು, ಡಿಸಿ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಭರವಸೆಯಲ್ಲಿದ್ದಾರೆ.

ಐಪಿಎಲ್ 2025ರಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದ ಎಲ್ಲ ಪಂದ್ಯಗಳನ್ನು ಆರ್‌ಸಿಬಿ ಗೆದ್ದಿದೆ ಎಂಬುದನ್ನು ಗಮನಿಸಬೇಕಿದೆ. 2024 ರಿಂದ, ಕೊಹ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ 11 ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಆರ್‌ಸಿಬಿ ಗೆದ್ದಿದೆ.

ವಿರಾಟ್ ಸದ್ಯದ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ, 144.11 ಸ್ಟ್ರೈಕ್ ರೇಟ್‌ನಲ್ಲಿ 392 ರನ್‌ಗಳನ್ನು ಗಳಿಸಿದ್ದಾರೆ. ಈಗಾಗಲೇ ಐದು ಅರ್ಧಶತಕಗಳನ್ನು ಗಳಿಸಿದ್ದಾರೆ ಮತ್ತು ಅಜೇಯ 73 ರನ್‌ ಅವರ ಅತ್ಯಧಿಕ ಸ್ಕೋರ್ ಆಗಿದೆ.

ಆರ್‌ಸಿಬಿ ಸದ್ಯ 9 ಪಂದ್ಯಗಳಲ್ಲಿ ಆರು ಜಯಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನಾಯಕ ರಜತ್ ಪಾಟೀದಾರ್ ಮತ್ತು ತಂಡಕ್ಕೆ ಐಪಿಎಲ್ 2025ರ ಪ್ಲೇಆಫ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಕೇವಲ ಎರಡು ಗೆಲುವುಗಳು ಬೇಕಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT