ಜಸ್ ಪ್ರೀತ್ ಬುಮ್ರಾ ದಾಖಲೆ 
ಕ್ರಿಕೆಟ್

IPL 2025: Jasprit Bumrah ಭರ್ಜರಿ ಬೌಲಿಂಗ್, Lasith Malinga ದಾಖಲೆ ಪತನ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಜಸ್ ಪ್ರೀತ್ ಬುಮ್ರಾ, 4 ವಿಕೆಟ್ ಪಡೆದು ಅಪರೂಪದ ದಾಖಲೆ ಬರೆದಿದ್ದಾರೆ.

ಮುಂಬೈ: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪಪ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಜಸ್ ಪ್ರೀತ್ ಬುಮ್ರಾ (Jasprit Bumrah) ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಜಸ್ ಪ್ರೀತ್ ಬುಮ್ರಾ, 4 ವಿಕೆಟ್ ಪಡೆದು ಅಪರೂಪದ ದಾಖಲೆ ಬರೆದಿದ್ದಾರೆ.

ಆ ಮೂಲಕ ಬುಮ್ರಾ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರ ಎನಿಸಿಕೊಂಡರು. ಲಖನೌ ಸೂಪರ್‌ ಜೈಂಟ್ಸ್‌ ತಂಡದ ಬ್ಯಾಟರ್‌ ಏಡನ್‌ ಮಾರ್ಕ್ರಂ ವಿಕೆಟ್‌ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದರು.

174 ವಿಕೆಟ್

ಇನ್ನು ಇಂದಿನ 4 ವಿಕೆಟ್ ಗಳು ಸೇರಿದಂತೆ ಜಸ್ ಪ್ರೀತ್ ಬುಮ್ರಾ ಮುಂಬೈ ಪರ ತಮ್ಮ ವಿಕೆಟ್ ಗಳಿಕೆಯನ್ನು 174ಕ್ಕೆ ಏರಿಸಿಕೊಂಡರು. ಆ ಮೂಲಕ ಮುಂಬೈ ಪರ ಅತೀ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಕೀರ್ತಿಗೆ ಬುಮ್ರಾ ಪಾತ್ರರಾದರು. ಇದಕ್ಕೂ ಮೊದಲು ಈ ದಾಖಲೆ ಲಸಿತ್ ಮಲಿಂಗಾ ಹೆಸರಲ್ಲಿತ್ತು. ಮಲಿಂಗಾ ಒಟ್ಟು 170 ವಿಕೆಟ್ ಪಡೆದಿದ್ದರು. ಈ ಪಟ್ಟಿಯಲ್ಲಿ ಹರ್ಭಜನ್ ಸಿಂಗ್ (127 ವಿಕೆಟ್), ಮಿಚೆಲ್ ಮೆಕ್ ಲೆಂಗನ್ (71 ವಿಕೆಟ್), ಕೀರನ್ ಪೊಲಾರ್ಡ್ (69 ವಿಕೆಟ್) ಮತ್ತು ಹಾರ್ದಿಕ್ ಪಾಂಡ್ಯಾ 65 ವಿಕೆಟ್ ಪಡೆದಿದ್ದಾರೆ..

ಅಂದಹಾಗೆ 2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಮುಂಬೈ ಪರ ಆಡುತ್ತಿರುವ ಬೂಮ್ರಾ, ಈವರೆಗೆ 139 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಓವರ್‌ಗೆ 7.32ರ ದರದಲ್ಲಿ ರನ್‌ ಬಿಟ್ಟುಕೊಟ್ಟಿರುವ ಅವರು, 174 ವಿಕೆಟ್‌ಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ. ಎರಡು ಸಲ ಐದು ವಿಕೆಟ್‌ ಗೊಂಚಲು ಸಾಧನೆ ಮಾಡಿರುವ ಅವರು, ಇನಿಂಗ್ಸ್‌ವೊಂದರಲ್ಲಿ ಕೇವಲ 10 ರನ್‌ಗೆ 5 ವಿಕೆಟ್‌ ಪಡೆದ ಶ್ರೇಷ್ಠ ರೆಕಾರ್ಡ್‌ ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!