ಸೂರ್ಯ ಕುಮಾರ್ ಯಾದವ್ 
ಕ್ರಿಕೆಟ್

IPL 2025: Suryakumar Yadav ಐತಿಹಾಸಿಕ ದಾಖಲೆ, Suresh Raina ರೆಕಾರ್ಡ್ ಕೂಡ ಉಡೀಸ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ ಯಾದವ್ ಅರ್ಧಶತಕ ಬಾರಿಸಿದ ಸೂರ್ಯ, ದಿಗ್ಗಜರ ಸಾಲಿಗೆ ಸೇರಿದರು.

ಮುಂಬೈ: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ ಯಾದವ್ ಅರ್ಧಶತಕ ಬಾರಿಸಿದ ಸೂರ್ಯ, ದಿಗ್ಗಜರ ಸಾಲಿಗೆ ಸೇರಿದರು.

28 ಎಸೆತಗಳಲ್ಲಿ ತಲಾ ನಾಲ್ಕು ಬೌಂಡರಿ, ಸಿಕ್ಸರ್‌ ಸಹಿತ 54 ರನ್‌ ಬಾರಿಸಿ ಔಟಾದರು. ಅಂತೆಯೇ ಈ ಮೂಲಕ ಸೂರ್ಯ ಕುಮಾರ್ ಯಾದವ್ ಐಪಿಎಲ್ ನಲ್ಲಿ 4000 ರನ್ ಪೂರೈಸಿದರು.

ಐತಿಹಾಸಿಕ ದಾಖಲೆ

ಈ ಪಂದ್ಯದಲ್ಲಿ 4000 ಸಾವಿರ ರನ್ ಪೂರೈಸಿದ ಸೂರ್ಯ ಕುಮಾರ್ ಯಾದವ್ ಈ ದಾಖಲೆ ಮೂಲಕ ಐಪಿಎಲ್ ನಲ್ಲಿ ವೇಗವಾಗಿ 4 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಸೂರ್ಯಕುಮಾರ್ ಯಾದವ್, 160 ಪಂದ್ಯಗಳ 145 ಇನಿಂಗ್ಸ್‌ಗಳಲ್ಲಿ 4000 ರನ್ ಪೂರೈಸಿದ್ದಾರೆ. ಈ ಪೈಕಿ 27 ಶತಕ ಹಾಗೂ 2 ಶತಕಗಳೂ ಸೇರಿವೆ. ಇಂದಿನ ಪಂದ್ಯದ ಮೂಲಕ ಸೂರ್ಯ ಕುಮಾರ್ ಯಾದವ್ ತಮ್ಮ ಐಪಿಎಲ್ ರನ್ ಗಳಿಕೆಯನ್ನು 4,021ಕ್ಕೆ ಏರಿಸಿಕೊಂಡರು. 33.91ರ ಸರಾಸರಿ ಹೊಂದಿರುವ ಅವರು, 147.56ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ.

ಎಸೆತಗಳ ಆಧಾರದಲ್ಲಿ 3ನೇ ಸ್ಥಾನ

ಐಪಿಎಲ್‌ನಲ್ಲಿ 4 ಸಾವಿರ ರನ್ ಗಳಿಸಿದ 17ನೇ ಬ್ಯಾಟರ್‌ ಎನಿಸಿರುವ ಸೂರ್ಯ, ಎಸೆತಗಳ ಆಧಾರದಲ್ಲಿ ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ತಾವೆದುರಿಸಿದ 2,705ನೇ ಎಸೆತದಲ್ಲಿ ನಾಲ್ಕು ಸಹಸ್ರ ರನ್‌ ಗಡಿ ದಾಟಿದ ಸೂರ್ಯ, ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ (2,653 ಎಸೆತ) ಮತ್ತು ದಕ್ಷಿಣ ಆಫ್ರಿಕಾದ 'ಮಿಸ್ಟರ್‌ 360' ಎಬಿ ಡಿ ವಿಲಿಯರ್ಸ್‌ (2,658 ಎಸೆತ) ನಂತರದ ಸ್ಥಾನದಲ್ಲಿದ್ದಾರೆ.

Suresh Raina ರೆಕಾರ್ಡ್ ಕೂಡ ಉಡೀಸ್

ಅಂತೆಯೇ ಸೂರ್ಯ ಕುಮಾರ್ ಯಾದವ್ ಇಂದು ಚೆನ್ನೈ ಮಾಜಿ ಆಟಗಾರ ಸುರೇಶ್ ರೈನಾ ದಾಖಲೆಯನ್ನೂ ಹಿಂದಿಕ್ಕಿದ್ದಾರೆ. ರೈನಾ 2,881 ಎಸೆತಗಳಲ್ಲಿ 4000 ರನ್ ಪೂರೈಸಿದ್ದರು. ಉಳಿದಂತೆ ಒಟ್ಟಾರೆ ಐಪಿಎಲ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 261 ಪಂದ್ಯಗಳ 253 ಇನಿಂಗ್ಸ್‌ಗಳಲ್ಲಿ 8,396 ರನ್‌ ಗಳಿಸಿದ್ದಾರೆ. ಭಾರತದವರೇ ಆದ ರೋಹಿತ್‌ ಶರ್ಮಾ (6,868) ಮತ್ತು ಶಿಖರ್‌ ಧವನ್‌ (6,769) ನಂತರದ ಸ್ಥಾನಗಳಲ್ಲಿ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT