ರಾಜಸ್ತಾನ ರಾಯಲ್ಸ್ ದಾಖಲೆ 
ಕ್ರಿಕೆಟ್

IPL 2025: ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ Rajasthan Royals; ವೇಗವಾಗಿ 200+ ರನ್ ಗುರಿ ಮುಟ್ಟಿದ ಮೊದಲ ತಂಡ!

ಗುಜರಾತ್ ಟೈಟನ್ಸ್ ತಂಡ ನೀಡಿದ್ದ 210 ರನ್ ಗಳ ಗುರಿಯನ್ನು ರಾಜಸ್ತಾನ ರಾಯಲ್ಸ್ ತಂಡ ಕೇವಲ 15.5 ಓವರ್ ನಲ್ಲೇ 212 ರನ್ ಗಳಿಸಿ 8 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು.

ಜೈಪುರ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕೆಂಗೆಟ್ಟಿದ್ದ ರಾಜಸ್ತಾನ ರಾಯಲ್ಸ್ ತಂಡ ಭರ್ಜರಿ ಪ್ರದರ್ಶನದ ಮೂಲಕ ಟೂರ್ನಿಯಲ್ಲಿ ಕಮ್ ಬ್ಯಾಕ್ ಮಾಡಿದ್ದು, ಇತಿಹಾಸವನ್ನೇ ಸೃಷ್ಟಿಸಿದೆ.

ಹೌದು.. ಇಂದು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ನೀಡಿದ್ದ 210 ರನ್ ಗಳ ಗುರಿಯನ್ನು ರಾಜಸ್ತಾನ ರಾಯಲ್ಸ್ ತಂಡ ಕೇವಲ 15.5 ಓವರ್ ನಲ್ಲೇ 212 ರನ್ ಗಳಿಸಿ 8 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು.

ರಾಜಸ್ತಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಗುಜರಾತ್ ವಿರುದ್ಧದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಜೈಸ್ವಾಲ್ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 70 ರನ್ ಸಿಡಿಸಿದರು. ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ ಬರೊಬ್ಬರಿ 11 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿದರು.

ಆದರೆ ಶತಕದ ಬಳಿಕ ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು. ವೈಭವ್ ಸೂರ್ಯವಂಶಿ ಬೆನ್ನಲ್ಲೇ ನಿತೀಶ್ ರಾಣಾ ಕೂಡ ಬಂದಷ್ಟೇ ವೇಗವಾಗಿ 4 ರನ್ ಸಿಡಿಸಿ ರಷೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ನಾಯಕ ರಿಯಾನ್ ಪರಾಗ್ 15 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಸಹಿತ ಅಜೇಯ 32 ರನ್ ಸಿಡಿಸಿ ಗೆಲುವಿನ ಔಪಚಾರಿಕತೆ ಮುಕ್ತಾಯಗೊಳಿಸಿದರು.

ಇತಿಹಾಸ ಸೃಷ್ಟಿಸಿದ Rajasthan Royals

ಇನ್ನು ಈ ಪಂದ್ಯದಲ್ಲಿ 212 ರನ್ ಗಳ ಬೃಹತ್ ಗುರಿಯನ್ನು ಕೇವಲ 15.5ಓವರ್ ನಲ್ಲೇ ಮುಟ್ಟಿದ ರಾಜಸ್ತಾನ ತಂಡ ಇತಿಹಾಸ ಬರೆದಿದ್ದು, ಐಪಿಎಲ್ ಇತಿಹಾಸದಲ್ಲೇ 200ಕ್ಕೂ ಅಧಿಕ ರನ್ ಗಳ ಗುರಿಯನ್ನು ಅತಿ ವೇಗವಾಗಿ ಮುಟ್ಟಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ ಈ ಸಾಧನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರಲ್ಲಿತ್ತು. 2024ರಲ್ಲಿ ಅಹ್ಮದಾಬಾದ್ ನಲ್ಲಿ ಇದೇ ಗುಜರಾತ್ ತಂಡದ ವಿರುದ್ಧ ಆರ್ ಸಿಬಿ 16 ಓವರ್ ನಲ್ಲೇ ಗುರಿ ಮುಟ್ಟಿತ್ತು. ಇದು ಈ ವರೆಗಿನ ಅತಿ ವೇಗದ 200+ ರನ್ ಚೇಸ್ ಪಂದ್ಯವಾಗಿತ್ತು. ಇದೀಗ ದಾಖಲೆಯನ್ನು ಆರ್ ಆರ್ ಪತನ ಮಾಡಿದೆ.

Least overs taken to complete a 200-plus chase in IPL

  • 15.5 - RR vs GT, Jaipur, 2025

  • 16 - RCB vs GT, Ahmedabad, 2024

  • 16.3 - MI vs RCB, Mumbai WS, 2023

  • 17.3 - DC vs GL, Delhi, 2017

  • 18 - MI vs SRH, Mumbai WS, 2023

4ನೇ ಯಶಸ್ವಿ 200+ ರನ್ ಚೇಸ್

ಇದೇ ವೇಳೆ ಇಂದಿನ ಗೆಲುವಿನ ಮೂಲಕ ರಾಜಸ್ತಾನ ತಂಡ ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ಬಾರಿಗೆ 200+ ರನ್ ಚೇಸ್ ಮಾಡಿದ ಸಾಧನೆ ಮಾಡಿದೆ. ಇದಕ್ಕೂ ಮೊದಲು 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ವಿರುದ್ಧ 215ರನ್ ಗಳನ್ನು ಚೇಸ್ ಮಾಡಿತ್ತು. ಬಳಿಕ 2020ರಲ್ಲಿ ಪಂಜಾಬ್ ವಿರುದ್ಧ 224 ರನ್ ಗಳನ್ನು, 2024ರಲ್ಲಿ ಕೆಕೆಆರ್ ವಿರುದ್ಧ 224ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.

Successful 200-plus run-chases for RR

224 vs PBKS, Sharjah, 2020

224 vs KKR, Kolkata, 2024

215 vs Deccan Chargers, Hyderabad, 2008

210 vs GT, Jaipur, 2025

ಇಷ್ಟು ಮಾತ್ರವಲ್ಲದೇ ಇದು ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ತಂಡವೊಂದು ಯಶಸ್ವಿಯಾಗಿ ಬೆನ್ನಟ್ಟಿದ ಅತ್ಯಧಿಕ ರನ್ ಗುರಿಯಾಗಿದೆ. ಈ ಹಿಂದೆ 2023ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ 205 ರನ್ ಗಿಳಿಸ ಜಿಟಿಯನ್ನು ಸೋಲಿಸಿತ್ತು.

2023 ರಲ್ಲಿ ಎಸ್‌ಆರ್‌ಹೆಚ್ (ಅಂತಿಮ ಎಸೆತದಲ್ಲಿ) 215 ಸ್ಕೋರ್‌ಗಳ ನಂತರ ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ 200 ಕ್ಕೂ ಹೆಚ್ಚು ಗುರಿಯನ್ನು ಹೊಡೆದುರುಳಿಸಿದ ಎರಡನೇ ನಿದರ್ಶನ ಇದು.

ಜೈಪುರದಲ್ಲಿ 200ಕ್ಕೂ ಅಧಿಕ ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿದ 2ನೇ ನಿದರ್ಶನ ಇದಾಗಿದೆ. ಈ ಹಿಂದೆ 2023ರಲ್ಲಿ 215ರನ್ ಅನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿ ಚೇಸ್ ಮಾಡಿತ್ತು.

ಅಂತೆಯೇ ಇಂದಿನ ರಾಜಸ್ತಾನ ರಾಯಲ್ಸ್ ತಂಡದ ರನ್ ರೇಟ್ ರಾಜಸ್ತಾನ ತಂಡದ ಸಾರ್ವಕಾಲಿಕ ಚೇಸಿಂಗ್ ದಾಖಲೆಯಾಗಿದ್ದು, ಇಂದು ರಾಜಸ್ತಾನ 13.38 ಸರಾಸರಿಯ ರನ್ ರೇಟ್ ಹೊಂದಿತ್ತು. ಇದು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಕಳೆದ ವರ್ಷಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ 18.4 ಓವರ್ ನಲ್ಲಿ 262 ರನ್ ಗುರಿಯನ್ನು 14.03ರನ್ ಸರಾಸರಿಯಲ್ಲಿ ಚೇಸ್ ಮಾಡಿತ್ತು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT