ಅಕ್ಸರ್ ಪಟೇಲ್ ಟ್ರೋಲ್ ಮಾಡಿದ ಸುಯಾಶ್ ಶರ್ಮಾ 
ಕ್ರಿಕೆಟ್

IPL 2025: 'ಅಯ್ಯೋ ಬಾಲೇ ಕಾಣ್ತಿಲ್ಲ ಗುರೂ'; ಶಾಟ್ ಮಿಸ್ ಮಾಡಿದ Axar Patel ಗೆ ಸೈಲೆಂಟ್ ಆಗೇ ಟ್ರೋಲ್ ಮಾಡಿದ Suyash Sharma!

ಆರ್ ಸಿಬಿಯ ಸ್ಪಿನ್ನರ್ ಡಿಸಿ ನಾಯಕ ಅಕ್ಸರ್ ಪಟೇಲ್ ರನ್ನು ಸೈಲೆಂಟ್ ಆಗಿಯೇ ಟ್ರೋಲ್ ಮಾಡಿದ ಘಟನೆ ನಡೆದಿದ್ದು, ಈ ವಿಡಿಯೋ ನೋಡಿದ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಿದ್ದಾರೆ.

ನವದೆಹಲಿ: ಐಪಿಎಲ್ ಟೂರ್ನಿಯ ನಿನ್ನೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ ಮಿಸ್ಟ್ರಿ ಸ್ಪಿನ್ನರ್ ಡಿಸಿ ನಾಯಕ ಅಕ್ಸರ್ ಪಟೇಲ್ ರನ್ನು ಸೈಲೆಂಟ್ ಆಗಿಯೇ ಅಚ್ಚರಿ ಟ್ರೋಲ್ ಮಾಡಿದ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.

ನಿನ್ನೆ ನಡೆದ ಐಪಿಎಲ್ ಟೂರ್ನಿಯ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ದಾಖಲಿಸಿತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಕೃನಾಲ್ ಪಾಂಡ್ಯಾ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ನೆರವಿನಿಂದ ಜಯಭೇರಿ ಭಾರಿಸಿತು. ಆರ್ ಸಿಬಿ 18.3 ಓವರ್ ನಲ್ಲಿ 165 ರನ್ ಗಳಿಸಿ ಇನ್ನೂ 9 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಅಂತರದ ಜಯ ಖಲಿಸಿತು.

ಈ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮಹತ್ತರ ಪಾತ್ರವಹಿಸಿದರು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 4 ಬೌಂಡರಿ ಸಹಿತ 51 ರನ್ ಗಳಿಸಿದರು. ಆದರೆ ಗೆಲುವಿನ ಅಂತಿಮ ಹಂತದಲ್ಲಿ ಎಡವಿದ ಕೊಹ್ಲಿ ಚಮೀರಾ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಕೈಹಾಕಿ ಸ್ಚಾರ್ಕ್ ಗೆ ಕ್ಯಾಚ್ ನೀಡಿ ಹೊರನಡೆದರು.

ಕೃನಾಲ್ ಪಾಂಡ್ಯಾ 47 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 73 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಕೃನಾಲ್ ಪಾಂಡ್ಯಾ ಮತ್ತು ಟಿಮ್ ಡೇವಿಡ್ ಇನ್ನೂ 9 ಎಸೆತ ಬಾಕಿ ಇರುವಂತೆಯೇ ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು.

ಡೆಲ್ಲಿ ನಾಯಕನ ಮೈದಾನದಲ್ಲೇ ಟ್ರೋಲ್ ಮಾಡಿದ ಸುಯಾಶ್ ಶರ್ಮಾ

ಈ ಪಂದ್ಯದಲ್ಲಿ ಆರ್ ಸಿಬಿಯ ಸ್ಪಿನ್ನರ್ ಡಿಸಿ ನಾಯಕ ಅಕ್ಸರ್ ಪಟೇಲ್ ರನ್ನು ಸೈಲೆಂಟ್ ಆಗಿಯೇ ಟ್ರೋಲ್ ಮಾಡಿದ ಘಟನೆ ನಡೆದಿದ್ದು, ಈ ವಿಡಿಯೋ ನೋಡಿದ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಿದ್ದಾರೆ. ಡೆಲ್ಲಿ ಬ್ಯಾಟಿಂಗ್ ವೇಳೆ 12ನೇ ಓವರ್ ನಲ್ಲಿ ಈ ಘಟನೆ ನಡೆದಿದ್ದು, ಆಗಷ್ಟೇ ಕ್ರೀಸ್ ಗೆ ಬಂದಿದ್ದ ಅಕ್ಸರ್ ಪಟೇಲ್ ಮೊದಲ 3 ಎಸೆತಗಳಲ್ಲಿ ಕೇವಲ 2ರನ್ ಮಾತ್ರಗಳಿಸಿದ್ದರು.

ಇದರಿಂದಾಗಿ ಮುಂದಿನ ಎಸೆತದಲ್ಲಿ ದೊಡ್ಡ ಹೊಡೆತ ಭಾರಿಸಬೇಕು ಎಂದು ಅಕ್ಸರ್ ನಿರ್ಧರಿಸಿದಂತಿತ್ತು. ಸುಯಾಶ್ ಶರ್ಮಾ ಎಸೆದ 4ನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಲು ಮುಂದಾದರು. ಈ ವೇಳೆ ಚೆಂಡು ಮಿಸ್ ಆಗಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೈ ಸೇರಿತ್ತು. ಇದೇ ಸಂದರ್ಭದಲ್ಲಿ ಸುಯಾಶ್ ಶರ್ಮಾ ಅಕ್ಸರ್ ಪಟೇಲ್ ರನ್ನು ದಿಟ್ಟಿಸುತ್ತಾ ಹಿಂದಕ್ಕೆ ತಿರುಗಿ ಚೆಂಡು ಸಿಕ್ಸರ್ ಗೆ ಹೋಯಿತು ಎನ್ನುವಂತೆ ನೋಡಿದರು. ಚೆಂಡು ಎಷ್ಟು ಮೇಲಕ್ಕೆ ಹೋಯಿತು ಎನ್ನುವ ಧಾಟಿಯಲ್ಲಿ ಅಕ್ಸರ್ ಪಟೇಲ್ ರನ್ನು ಟ್ರೋಲ್ ಮಾಡಿದರು.

ಇದನ್ನು ಕಂಡ ಸ್ವತಃ ಅಕ್ಸರ್ ಪಟೇಲ್ ಕೂಡ ನಕ್ಕು ಸುಮ್ಮನಾದರು. ಆದರೆ ಈ ವಿಡಿಯೋ ಮೈದಾನದ ದೊಡ್ಡ ಪರದೆ ಮೇಲೆ ಬರುತ್ತಲೇ ಅಲ್ಲಿದ್ದ ಪ್ರೇಕ್ಷಕರೂ ಕೂಡ ನಕ್ಕಿದ್ದಾರೆ. ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ನಿನ್ನೆಯ ಪಂದ್ಯದಲ್ಲಿ ಸುಯಾಶ್ ಶರ್ಮಾ ವಿಕೆಟ್ ಪಡೆಯದೇ ಹೋದರೂ ಡೆಲ್ಲಿ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸುಯಾಶ್ ಶರ್ಮಾ 4 ಓವರ್ ಎಸೆದು ಕೇವಲ 22 ರನ್ ನೀಡಿದರು. ಇದು ಡೆಲ್ಲಿಯ ರನ್ ವೇಗಕ್ಕೆ ಕಡಿವಾಣ ಹಾಕಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT