ಡೆಲ್ಲಿ ಕ್ಯಾಪಿಟಲ್ಸ್ ಗೆ ಸೋಲು 
ಕ್ರಿಕೆಟ್

IPL 2025: DC ಗೆ ಮತ್ತೆ ಆಘಾತ; KKR ವಿರುದ್ಧ 14 ರನ್ ಸೋಲು

ಡೆಲ್ಲಿ ಪರ ಆರ್ ಸಿಬಿ ಮಾಜಿ ನಾಯಕ ಫಾಪ್ ಡುಪ್ಲೆಸಿಸ್ 62 ರನ್, ನಾಯಕ ಅಕ್ಸರ್ ಪಟೇಲ್ 43 ರನ್ ಹಾಗೂ ಅಂತಿಮ ಹಂತದಲ್ಲಿ ವಿಪ್ರಾಜ್ ನಿಗಮ್ 38 ರನ್ ಗಳಿಸಿದರು. ಆದರೆ ತಂಡದ ಇತರೆ ಆಟಗಾರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ.

ನವದೆಹಲಿ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಂದು ಸೋಲು ಕಂಡಿದ್ದು, ಇಂದು ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 14 ರನ್ ಗಳ ಅಂತರದ ಸೋಲು ಕಂಡಿದೆ.

ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ರನ್ ಗಳ ಸೋಲು ಕಂಡಿತು. ಕೋಲ್ಕತಾ ನೀಡಿದ 205 ರನ್ ಗಳ ಗುರಿ ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 14ರನ್ ಗಳ ಅಂತರದಲ್ಲಿ ಅಂತರದ ಸೋಲು ಕಂಡಿತು.

ಡೆಲ್ಲಿ ಪರ ಆರ್ ಸಿಬಿ ಮಾಜಿ ನಾಯಕ ಫಾಪ್ ಡುಪ್ಲೆಸಿಸ್ 62 ರನ್, ನಾಯಕ ಅಕ್ಸರ್ ಪಟೇಲ್ 43 ರನ್ ಹಾಗೂ ಅಂತಿಮ ಹಂತದಲ್ಲಿ ವಿಪ್ರಾಜ್ ನಿಗಮ್ 38 ರನ್ ಗಳಿಸಿದರು. ಆದರೆ ತಂಡದ ಇತರೆ ಆಟಗಾರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ.

ಆರಂಭಿಕ ಆಟಗಾರ ಅಭಿಷೇಕ್ ಪೊರೆಲ್ 4 ರನ್ ಗಳಿಸಿ ಔಟಾದರೆ, ಕರುಣ್ ನಾಯರ್ 15 ರನ್ ಗಳಿಸಿ ವೈಭವ್ ಅರೋರಾಗೆ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ 7 ರನ್ ಗಳಿಸಿ ಸುನಿಲ್ ನರೈನ್ ರ ಅದ್ಭುತ ರನೌಟ್ ಗೆ ಬಲಿಯಾದರು.

ಕೆಳ ಕ್ರಮಾಂಕದಲ್ಲಿ ವಿಪ್ರಾಜ್ ನಿಗಮ್ ಹೊರತು ಪಡಿಸದರೆ ಉಳಿದಾವ ಆಟಗಾರರಿಂದಲೂ ನಿರೀಕ್ಷಿತ ರನ್ ಗಳು ಬರಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ 1, ಆಶುತೋಶ್ ಶರ್ಮಾ 7, ಮಿಚೆಲ್ ಸ್ಟಾರ್ಕ್ ಶೂನ್ಯ ಸುತ್ತಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ 190 ರನ್ ಗಳನ್ನಷ್ಟೇ ಗಳಿಸಿ, 14ರನ್ ಗಳ ಅಂತರದಲ್ಲಿ ಸೋಲು ಕಂಡಿತು.

ತವರಿನಲ್ಲಿ ಸತತ ಸೋಲು

ಇನ್ನು ಡೆಲ್ಲಿ ಕಾಪಿಟಲ್ಸ್ ಗೆ ಇದು ತವರಿನಲ್ಲಿ ಸತತ 2ನೇ ಸೋಲಾಗಿದೆ. ಡಿಸಿ ತವರು ಅರುಣ್ ಜೇಟ್ಲಿ ಮೈದಾನದಲ್ಲಿ ಒಟ್ಟು 4 ಪಂದ್ಯಗಳನ್ನಾಡಿದ್ದು ಈ ಪೈಕಿ 1ರಲ್ಲಿ (ಸೂಪರ್ ಓವರ್) ಗೆಲುವು, 3ರಲ್ಲಿ ಸೋಲು ಕಂಡಿದೆ. ಇದೇ ಮೈದಾನದಲ್ಲಿ ಈ ಹಿಂದಿನ ಆರ್ ಸಿಬಿ ವಿರುದ್ಧದ ಪಂದ್ಯದಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡಿತ್ತು. ಅಂತೆಯೇ ಹೊರಗಿನ ಕ್ರೀಡಾಂಗಣಗಳಲ್ಲಿ 6 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆಲುವು ಒಂದು ಪಂದ್ಯದಲ್ಲಿ ಸೋಲು ಕಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT